Advertisement

“ಹಣಕಾಸು ದೃಷ್ಟಿಯಿಂದ ಮಾತ್ರ ರಫೇಲ್‌ ನೋಡಬೇಡಿ’

01:04 AM Feb 20, 2019 | Team Udayavani |

ಬೆಂಗಳೂರು: ಫ್ರಾನ್ಸ್‌ನ “ರಫೇಲ್‌’ ಯುದ್ಧ  ವಿಮಾನ ವನ್ನು ನಾವು ಹಣಕಾಸು ದೃಷ್ಟಿಕೋನದಿಂದ ಮಾತ್ರ ನೋಡದೆ ಉತ್ಪನ್ನಗಳ ನಿರ್ವಹಣೆ ದೃಷ್ಟಿಯಿಂದಲೂ ವಿಶ್ಲೇಷಿಸುವ ಅವಶ್ಯಕತೆಯಿದೆ ಎಂದು ನಿವೃತ್ತ ವಾಯುಸೇನೆ ಮುಖ್ಯಸ್ಥ ಅರುಪ್‌ ರಾಹ ಹೇಳಿದರು.

Advertisement

ನಗರದ ಹೋಟೆಲ್‌ ಲಿ. ಮೆರಿಡಿಯನ್‌ನಲ್ಲಿ ಮಂಗಳ ವಾರ ನ್ಯಾಷನಲ್‌ ಏರೋಸ್ಪೇಸ್‌ ಹಮ್ಮಿಕೊಂಡಿದ್ದ“ಭಾರತಕ್ಕೆ ಅಗತ್ಯ ಇರುವ ಯುದ್ಧ ವಿಮಾನಗಳು;ಸವಾಲುಗಳು ಮತ್ತು ಅವಕಾಶಗಳು’ ಕುರಿತ ಚರ್ಚೆ ಯಲ್ಲಿ ಮಾತನಾಡಿದ ಅವರು, ರಫೇಲ್‌ಗಿಂತ ಅಧಿಕ ಸಾಮರ್ಥ್ಯವುಳ್ಳ ಯುದ್ಧ ವಿಮಾನಗಳು ಇವೆ. ಆದರೆ, ಅವುಗಳ ನಿರ್ವಹಣೆ, ಸೃಷ್ಟಿಸಬಹುದಾದ ಉದ್ಯೋಗಾವ ಕಾಶಗಳು, ಸ್ಕ್ವಾಡ್ರನ್‌ಗಳ ಲಭ್ಯತೆ, ಅದಕ್ಕೆ ತಕ್ಕಂತೆ ತರಬೇತಿ ಸೇರಿದಂತೆ ಎಲ್ಲವನ್ನೂ ನೋಡಬೇಕಾಗುತ್ತದೆ. ಕೇವಲ ಆ ಯುದ್ಧ ವಿಮಾನದ ಬೆಲೆಯಿಂದ ನಾವು ನಿರ್ಧಾರಕ್ಕೆ ಬರುವುದು ಸರಿ ಅಲ್ಲ ಎಂದರು. ಅಷ್ಟಕ್ಕೂ “ರಫೇಲ್‌’ ಖರೀದಿಗೆ ಸಂಬಂಧಿಸಿದಂತೆ ಯಾವುದೂ ಗೌಪ್ಯವಾಗಿಲ್ಲ; ಸಾರ್ವಜನಿಕರಿಗೆ ಮುಕ್ತವಾಗಿದೆ. ಎರಡೂ ದೇಶಗಳ ನಡುವೆ ನಡೆದ ಚರ್ಚೆ, ದರ ನಿಗದಿ ಸೇರಿದಂತೆ ಎಲ್ಲವೂ ಪಾರದರ್ಶಕವಾಗಿದೆ ಎಂದು ಸೂಚ್ಯವಾಗಿ ತಿಳಿಸಿದರು.

ರಾತ್ರೋರಾತ್ರಿ ಮೇಕ್‌ ಇನ್‌ ಇಂಡಿಯಾ ಆಗಲ್ಲ:ಬೊಯಿಂಗ್‌ನ ಥಾಮಸ್‌ ಬ್ರೇಕನ್‌ರಿಡ್ಜ್ ಮಾತನಾಡಿ, ಭಾರತವು ವೈಮಾನಿಕ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆ ಹೊಂದುತ್ತಿದೆ. ಜಾಗತಿಕ ಮಟ್ಟದಲ್ಲಿ ಪೂರೈಕೆದಾರರ ಸರಪಳಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಇದೊಂದು ಉತ್ತಮ ಬೆಳವಣಿಗೆಯಾಗಿದ್ದು, “ಮೇಕ್‌ ಇನ್‌ ಇಂಡಿಯಾ’ಕ್ಕೆ ನೀಡಿದ ಪ್ರೋತ್ಸಾಹವೂ ಇದಕ್ಕೆ ಪೂರಕವಾಗಿದೆ. ಆದರೆ, ಈ ಮೇಕ್‌ ಇನ್‌ ಇಂಡಿಯಾ ರಾತ್ರೋರಾತ್ರಿ ಆಗುವಂತಹದ್ದಲ್ಲ. ಇದಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ. ವೈಮಾನಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ದೇಶಗಳ ತಜ್ಞರ ತರಬೇತಿ ಮತ್ತಿತರ ನೆರವು ಬೇಕಾಗುತ್ತದೆ ಎಂದರು.

ಲಾಖೀದ್‌ ಮಾರ್ಟಿನ್‌ ಸಂಸ್ಥೆಯ ವಿವೇಕ್‌ ಲಲ್‌, ಡೈನಾಮೆಟಿಕ್ಸ್‌ ಟೆಕ್ನಾಲಜೀಸ್‌ನ ಡಾ.ಉದಯನ್‌
ಮಲ್ಹೋತ್ರ ಭಾಗವಹಿಸಿದ್ದರು. ಇದೇ ವೇಳೆ 5ನೇ ಆವೃತ್ತಿಯ ವೈಮಾಂತರಿಕ್ಷ ಮತ್ತು ರಕ್ಷಣಾ ವಿಭಾಗದ
ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next