Advertisement
ಇದು ರಫೆಲ್ ನಡಾಲ್ ಗೆದ್ದ 3ನೇ ಯುಎಸ್ ಓಪನ್ ಪ್ರಶಸ್ತಿಯಾದರೆ, ಒಟ್ಟಾರೆಯಾಗಿ ಏರಿಸಿಕೊಂಡ 16ನೇ ಗ್ರ್ಯಾನ್‌ಸ್ಲಾಮ್ ಕಿರೀಟ. ಈ ಲೆಕ್ಕಾಚಾರದಲ್ಲಿ, ಪುರುಷರ ವಿಭಾಗದಲ್ಲಿ ನಡಾಲ್‌ಗಿಂತ ಮುಂದಿರುವ ಏಕೈಕ ಆಟಗಾರನೆಂದರೆ ರೋಜರ್ ಫೆಡರರ್ (19).
ರಫೆಲ್ ನಡಾಲ್ ಇದಕ್ಕೂ ಮುನ್ನ 2010 ಮತ್ತು 2013ರಲ್ಲಿ ಯುಎಸ್ ಓಪನ್ ಚಾಂಪಿಯನ್ ಆಗಿದ್ದರು. ಹಿಂದಿನೆರಡೂ ಸಲ ಅವರು ಫೈನಲ್‌ನಲ್ಲಿ ನೊವಾಕ್ ಜೊಕೋವಿಕ್ ಅವರನ್ನು 4 ಸೆಟ್‌ಗಳ ಕಾದಾಟದಲ್ಲಿ ಮಣಿಸಿದ್ದರು. ಈವರೆಗೆ ಒಟ್ಟು 23 ಸಲ ಗ್ರ್ಯಾನ್‌ಸ್ಲಾಮ್ ಫೈನಲ್ ಪ್ರವೇಶಿಸಿದ್ದು, 7 ಸಲ ಪ್ರಶಸ್ತಿ ವಂಚಿತರಾಗಿದ್ದಾರೆ.
Related Articles
“ವೈಯಕ್ತಿಕವಾಗಿ ಹೇಳುವುದಾದರೆ ಈ ವರ್ಷದಲ್ಲಿ ಏನು ಸಂಭವಿಸಿತೋ ಅದನ್ನು ನಾನು ನಂಬುವ ಸ್ಥಿತಿಯಲ್ಲಿಲ್ಲ. 2 ವರ್ಷಗಳ ಗಾಯದ ಸಮಸ್ಯೆಯಿಂದಾಗಿ ನನಗೆ ಅಷ್ಟೇನೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಆದರೂ 2 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ನನ್ನ ಪಾಲಾಯಿತು…’ ಎಂಬುದಾಗಿ ರಫೆಲ್ ನಡಾಲ್ ಪ್ರತಿಕ್ರಿಯಿಸಿದ್ದಾರೆ.
Advertisement
“ನಡಾಲ್ ನನ್ನ ಐಡಲ್’32ರಷ್ಟು ಕೆಳ ರ್‍ಯಾಂಕಿಂಗಿನ ಕೆವಿನ್ ಆ್ಯಂಡರ್ಸನ್ ಈವರೆಗೆ ಗ್ರ್ಯಾನ್‌ಸ್ಲಾಮ್‌ನಲ್ಲಿ ಕ್ವಾರ್ಟರ್ ಫೈನಲ್ ದಾಟಿದವರಲ್ಲ. ಅವರು ಫೈನಲ್ ತಲುಪಲು 34 ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿಗಳ ತನಕ ಕಾಯಬೇಕಾಯಿತು.
“ನಡಾಲ್, ನೀವು ನನ್ನ ಪಾಲಿನ ನಿಜವಾದ ಐಡಲ್. ನಿಮ್ಮೆದುರು ಆಡುವುದು ಅತ್ಯಂತ ಕಷ್ಟ. ಅದು ಈ ರಾತ್ರಿ ಸಾಬೀತಾಯಿತು. ನಾವಿಬ್ಬರೂ ಒಂದೇ ವಯಸ್ಸಿನವರು. ಆದರೆ ಜೀವಮಾನವಿಡೀ ನಿಮ್ಮ ಆಟವನ್ನು ಆಸ್ವಾದಿಸುತ್ತಲೇ ಬಂದಂತೆ ನನಗನಿಸುತ್ತದೆ…’ ಎಂಬುದು ಗ್ರ್ಯಾನ್‌ಸ್ಲಾಮ್ ಚರಿತ್ರೆಯಲ್ಲೇ ಫೈನಲ್ ತಲುಪಿದ ಅತ್ಯಂತ ಎತ್ತರದ ಆಟಗಾರನಾದ (6 ಅಡಿ, 8 ಇಂಚು) ಕೆವಿನ್ ಆ್ಯಂಡರ್ಸನ್ ಪ್ರತಿಕ್ರಿಯೆ.