Advertisement

ನೋವು ನಿವಾರಕ ಬಳಸಿ ಆಡಿದ್ದ ರಫೆಲ್‌ ನಡಾಲ್‌

10:46 PM Jun 10, 2022 | Team Udayavani |

ಮ್ಯಾಡ್ರಿಡ್‌: ಮೊನ್ನೆಯಷ್ಟೇ 22ನೇ ಗ್ರ್ಯಾನ್‌ಸ್ಲಾಮ್‌, 14ನೇ ಫ್ರೆಂಚ್‌ ಓಪನ್‌ ಕಿರೀಟ ಗೆದ್ದು ಭಾರೀ ಸುದ್ದಿಯಾಗಿದ್ದ ರಫೆಲ್‌ ನಡಾಲ್‌, ಈಗ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದ್ದಾರೆ.

Advertisement

ಅವರು ಫ್ರೆಂಚ್‌ ಓಪನ್‌ ಪಂದ್ಯಾವಳಿಯುದ್ದಕ್ಕೂ ಎಡ ಪಾದದ ನೋವಿಗೆ ತುತ್ತಾಗಿದ್ದರು. ಇದರಿಂದ ಬಿಡುಗಡೆ ಹೊಂದಲು ನೋವು ನಿವಾರಕ ಚುಚ್ಚುಮದ್ದನ್ನು ತೆಗೆದುಕೊಂಡಿದ್ದರು.

ಫೈನಲ್‌ ಪಂದ್ಯ ಗೆದ್ದ ಮೇಲೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರೇ ಈ ವಿಚಾರವನ್ನು ಬಹಿರಂಗ ಮಾಡಿದ್ದಾರೆ.

“ಎಡಪಾದದ ನೋವು ಎಷ್ಟು ತೀವ್ರ ವಾಗಿತ್ತೆಂದರೆ, ನಾನು ಅದರಿಂದ ಹೊರ ಬರಲು ಹಲವು ಚುಚ್ಚುಮದ್ದುಗಳನ್ನು ತೆಗೆದು ಕೊಳ್ಳಬೇಕಾಯಿತು. ಅದರ ಸಂಖ್ಯೆ ಎಷ್ಟೆಂದು ಕೇಳಬೇಡಿ. ಪರಿಣಾಮವಾಗಿ ಎಡಪಾದ ಸಂಪೂರ್ಣ ಸಂವೇದನೆ ಕಳೆದುಕೊಂಡಂತೆ ಇತ್ತು. ಇದರ ನಡುವೆ ಆಡಿ ಗೆದ್ದಿದ್ದೇನೆ’ ಎಂದು ಹೇಳಿದ್ದಾರೆ ನಡಾಲ್‌.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next