Advertisement

ರಫೆಲ್‌ ನಡಾಲ್‌ ಫೈನಲ್‌ ಪ್ರವೇಶ

12:45 AM Jun 08, 2019 | Sriram |

ಪ್ಯಾರಿಸ್‌: “ಕ್ಲೇ ಕೋರ್ಟ್‌ ಕಿಂಗ್‌’ ರಫೆಲ್‌ ನಡಾಲ್‌ ದಾಖಲೆಯ 12ನೇ ಬಾರಿಗೆ ಫ್ರೆಂಚ್‌ ಓಪನ್‌ ಫೈನಲ್‌ಗೆ ಲಗ್ಗೆ ಇರಿಸಿದ್ದಾರೆ. ಶುಕ್ರವಾರದ ಸೆಮಿಫೈನಲ್‌ನಲ್ಲಿ ಅವರು ರೋಜರ್‌ ಫೆಡರರ್‌ ವಿರುದ್ಧ 6-3, 6-4, 6-2 ನೇರ ಸೆಟ್‌ಗಳ ಜಯ ದಾಖಲಿಸಿದರು.

Advertisement

ಇನ್ನೊಂದು ಸೆಮಿಫೈನಲ್‌ ನೊವಾಕ್‌ ಜೊಕೋವಿಕ್‌ ಮತ್ತು ಡೊಮಿನಿಕ್‌ ಥೀಮ್‌ ನಡುವೆ ನಡೆಯುತ್ತಿದೆ. ಇಲ್ಲಿನ ವಿಜೇತರು ರವಿವಾರದ ಪ್ರಶಸ್ತಿ ಕಾಳಗದಲ್ಲಿ ನಡಾಲ್‌ ಅವರನ್ನು ಎದುರಿಸಲಿದ್ದಾರೆ.

ನಡಾಲ್‌ ಈವರೆಗೆ 11 ಸಲ ಫ್ರೆಂಚ್‌ ಓಪನ್‌ ಸಾಮ್ರಾಟನಾಗಿ ಮೆರೆದಿದ್ದಾರೆ. ಅವರು ಕಳೆದೆರಡು ಬಾರಿಯ ಹಾಲಿ ಚಾಂಪಿಯನ್‌ ಕೂಡ ಹೌದು.

Advertisement

Udayavani is now on Telegram. Click here to join our channel and stay updated with the latest news.

Next