Advertisement

ರಫೆಲ್‌ ಅವ್ಯವಹಾರ: ನಿರ್ಮಲಾ ಸೀತಾರಾಮನ್‌ ರಾಜಿನಾಮೆಗೆ ಆಗ್ರಹ

12:58 PM Sep 23, 2018 | |

ಬೆಂಗಳೂರು: ರಫೆಲ್‌ ಯುದ್ಧ ವಿಮಾನ ಖರೀದಿಯಲ್ಲಿ ಅವ್ಯವಹಾರ ನಡೆದಿರುವುದನ್ನು ಫ್ರಾನ್ಸ್‌ ಮಾಜಿ ಅಧ್ಯಕ್ಷರೇ ಬಹಿರಂಗಪಡಿಸಿರುವುದರಿಂದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ವಿ.ಎಸ್‌. ಉಗ್ರಪ್ಪ ಆಗ್ರಹಿಸಿದ್ದಾರೆ. 

Advertisement

ಹಿಂದೆ ಯುಪಿಎ ಅವಧಿಯಲ್ಲಿ ಆಗಿದ್ದ ಒಪ್ಪಂದವನ್ನು ರದ್ದುಪಡಿಸಿ ಪ್ರಧಾನಿ ನರೇಂದ್ರ ಮೋದಿ ಅಂಬಾನಿ ಕಂಪನಿಯೊಂದಿಗೆ ಸೇರಿಕೊಂಡು ಹೊಸ ವ್ಯವಹಾರ ಮಾಡಿದ್ದರು. ಇದರಿಂದ ಸುಮಾರು 39,36‌ ಕೋಟಿ ರೂ. ದರೋಡೆ ಮಾಡಲಾಗಿದೆ. 

ಕೇಂದ್ರ ಸರ್ಕಾರದ ಹೊಸ ಒಪ್ಪಂದದಿಂದ ಎಚ್‌ಎಎಲ್‌ಗೆ ದೊರೆತಿದ್ದ ಒಪ್ಪಂದ ರದ್ದಾಗಿದ್ದು, ರಾಜ್ಯಕ್ಕೆ ದೊರೆಯುವ ಉದ್ಯೋಗ ನಷ್ಟ ಉಂಟಾಗಿದೆ. ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಕರ್ನಾಟಕದಿಂದ ರಾಜ್ಯ ಸಭೆಗೆ ಆಯ್ಕೆಯಾಗಿ ಹೋಗಿದ್ದಾರೆ. ರಾಜ್ಯದ ಹಿತ ಕಾಯುವಲ್ಲಿ ವಿಫ‌ಲರಾಗಿರುವ ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next