Advertisement

ಬಂಗಾಲದಲ್ಲಿ ರಫೇಲ್‌ 2ನೇ ಸ್ಕ್ವಾಡ್ರನ್‌ ಸಿದ್ಧ

02:21 AM Jun 22, 2021 | Team Udayavani |

ಹೊಸದಿಲ್ಲಿ: ಭಾರತೀಯ ವಾಯುಪಡೆಗೆ ಆಗಮಿಸಿರುವ ರಫೇಲ್‌ ಯುದ್ಧ ವಿಮಾನಗಳ ಎರಡನೇ ಸ್ಕ್ವಾಡ್ರನ್‌ ಸಿದ್ಧಗೊಂಡಿದೆ. ಅದನ್ನು ಪೂರ್ವ ಕರಾವಳಿಯಲ್ಲಿ ಚೀನದ ಚಟುವಟಿ ಕೆಗಳ ಮೇಲೆ ನಿಗಾ ಇರಿಸುವ ನಿಟ್ಟಿನಲ್ಲಿ ಪಶ್ಚಿಮ ಬಂಗಾಲದ ಹಸಿಮರದಲ್ಲಿ ನಿಯೋಜನೆ ಮಾ ಡಲು ಉದ್ದೇಶಿಸಲಾಗಿದೆ. ಇಲ್ಲಿಯೇ ಐಎಎಫ್ನ ವಾಯುನೆಲೆ ಕೂಡ ಇದೆ. ಈ ಸ್ವಾ$Rಡ್ರನ್‌ಗೆ “101 ಫಾಲ್ಕನ್ಸ್‌ ಆಫ್ ಛಂಬ್‌ ಆ್ಯಂಡ್‌ ಅಖೂ°ರ್‌’ ಎಂಬ ಹೆಸರನ್ನು ಇರಿಸಲಾಗಿದೆ.

Advertisement

ಹರ್ಯಾಣದ ಅಂಬಾಲಾದಲ್ಲಿರುವ ವಾಯುನೆಲೆ ಯಲ್ಲಿ ಇರುವ ಮೊದಲ ಸ್ಕ್ವಾಡ್ರನ್‌ಗೆ “17 ಗೋಲ್ಡನ್‌ ಆ್ಯರೋಸ್‌’ ಎಂಬ ಹೆಸರು ಇರಿಸಲಾಗಿದೆ. ಒಂದು ಸ್ಕ್ವಾಡ್ರನ್‌ನಲ್ಲಿ 18 ವಿಮಾನಗಳು ಇರುತ್ತವೆ. ಸಿಕ್ಕಿಂ ಮತ್ತು ಭೂತಾನ್‌, ಟಿಬೆಟ್‌ಗೆ ಹೊಂದಿಕೊಂಡು ಹಸಿಮರ ವಾಯುನೆಲೆ ಇದೆ. 1962ರಲ್ಲಿ ಚೀನ ಯುದ್ಧದಲ್ಲಿ ತೂಫಾನಿ ಯುದ್ಧವಿಮಾನವನ್ನು ಇಲ್ಲಿಂದಲೇ ನಿರ್ವಹಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next