Advertisement

ಉದ್ಯೋಗ, ಕೌಶಲ ವೃದ್ಧಿಗೆ ರೇಡಿಯಂ ಸ್ಟಿಕ್ಕರ್  ಡಿಸೈನಿಂಗ್‌

09:50 PM Apr 23, 2019 | mahesh |

ಬಹುತೇಕ ಯುವ ಜನರು ಶಿಕ್ಷಣ ಪಡೆದು ಉದ್ಯೋಗಕ್ಕಾಗಿ ಬಹು ರಾಷ್ಟ್ರೀಯ ಕಂಪೆನಿಗಳನ್ನು ಅರಸಿ ಹೋಗುತ್ತಾರೆ. ಅಂತೆಯೇ ಇನ್ನು ಕೆಲವರೂ ಶಿಕ್ಷಣದ ಜತೆ ಜತೆಗೆ ಉದ್ಯೋಗವನ್ನು ಮಾಡುತ್ತಿರುತ್ತಾರೆ. ಅಂತಹ ಉದ್ಯೋಗಗಳಲ್ಲಿ ರೇಡಿಯ್‌ಂ ಸ್ಟಿಕ್ಕರ್‌ ಡಿಸೈನಿಂಗ್‌ ಕೂಡ ಒಂದು. ಇದು ಓರ್ವನಿಗೆ ಉದ್ಯೋಗದ ಜತೆಗೆ ಅನುಭವ ಹಾಗೂ ಕೌಶಲ ನೀಡುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ. ರೇಡಿಯಂ ಸ್ಟಿಕ್ಕರ್ ಡಿಸೈನಿಂಗ್‌ ಕೂಡ ಇಂದು ಒಂದು ಟ್ರೆಂಡ್‌ ಆಗಿ ಬೆಳವಣಿಗೆಯಾಗಿದೆ. ಬೈಕ್‌ಗಳ ನಂಬರ್‌ ಪ್ಲೇಟ್‌, ಆಕರ್ಷಕ ಚಿತ್ರಗಳು ಸಹಿತ ವ್ಯಾಖ್ಯೆಗಳನ್ನು ಅಂಟಿಸುವುದನ್ನು ನಾವು ನೋಡಿರುತ್ತೇವೆ. ಇದರ ಹಿಂದೆ ರೇಡಿಯಂ ಸ್ಟಿಕ್ಕರ್ ಡಿಸೈನಿಂಗ್‌ ಕಲೆಗಾರನ ಕರಾಮತ್ತು ಇರುತ್ತದೆ ಎಂದೇ ಹೇಳಬಹುದು.

Advertisement

ಗಮನ ಸೆಳೆದ ರೇಡಿಯಂ ಡಿಸೈನಿಂಗ್‌
ರೇಡಿಯಂ ಸ್ಟಿಕ್ಕರ್ ಡಿಸೈನರ್‌ ತುಂಬಾ ಕ್ರಿಯಾಶೀಲ ಹಾಗೂ ಸೃಜನ ಶೀಲರಾಗಿರಬೇಕಾಗಿರುತ್ತದೆ. ಏಕೆಂದರೆ ಟ್ರೆಂಡ್‌ಗನುಗುಣವಾಗಿ ಅವರು ತರಹೇವಾರಿ ಚಿತ್ರಗಳನ್ನು ಸೃಷ್ಟಿಸುವುದರಿಂದಾಗಿ ಅವರೂ ತುಂಬಾ ಜನಪ್ರಿಯರಾಗುತ್ತಾರೆ. ಉದಾಹರಣೆಗೆ ಮಂಗಳೂರಿನ ಕರಣ್‌ ಆಚಾರ್ಯ ಅವರು ರಚಿಸಿದ್ದ ಹನುಮಾನ್‌, ಸಂಜೀವಿನಿ ಎಸ್‌.ಜೆ. ಶಶಾಂಕ್‌ ಆಚಾರ್ಯ ಅವರ ಕೊರಗಜ್ಜ, ಜೀವನ್‌ ಆಚಾರ್ಯ ಅವರ ಮೋದಿ ಡಿಜಿಟಲ್‌ ಡಿಸೈನಿಂಗ್‌ ಸ್ಟಿಕ್ಕರ್‌ಗಳು ತುಂಬಾ ಜನಪ್ರಿಯವಾಗಿದ್ದವು. ಅಲ್ಲದೇ ಬಹುತೇಕ ಬೈಕ್‌, ವಾಹನಗಳ ಮೇಲೆ ರಾರಾಜಿಸುತ್ತಿದ್ದವು. ಇಂದು ರೇಡಿಯಂ ಡಿಸೈನಿಂಗ್‌ ಹಲವು ರೂಪುಗಳ ಪಡೆದಿದ್ದು, ಕೇವಲ ವಾಹನಗಳಿಗೆ ಮಾತ್ರ ಬಳಕೆಯಾಗುತ್ತಿಲ್ಲ. ಕೈ ಬೆರಳಿಗೆ ಈ ಹಿಂದೆ ಹಚ್ಚುತ್ತಿದ್ದ ಉಗುರು ಪೇಂಟ್‌ ಬದಲಿಗೆ ಇಂದು ಬಣ್ಣ ಬಣ್ಣದ ರೇಡಿಯಂ ಕಲರ್‌ಗಳು ಬಂದಿವೆ. ಅಲ್ಲದೇ ಮನೆಯ ಅಂದವನ್ನು ಹೆಚ್ಚಿಸಲು ಕೂಡ ಹೆಚ್ಚಾಗಿ ರೇಡಿಯಂ ಸ್ಟಿಕ್ಕರ್‌ಗಳನ್ನು ಬಳಸಲಾಗುತ್ತದೆ. ಹಾಗಾಗಿ ರೇಡಿಯಂ ಡಿಸೈನಿಂಗ್‌ ಕ್ಷೇತ್ರದಲ್ಲಿ ಅವಕಾಶಗಳು ಹೆಚ್ಚಿರುವುದು ಗಮನಾರ್ಹವಾದುದು.

ಅರೆಕಾಲಿಕ, ಪೂರ್ಣಕಾಲಿಕ
ರೇಡಿಯಂ ಸ್ಟಿಕ್ಕರ್‌ ಡಿಸೈನಿಂಗ್‌ ಇತ್ತೀಚೆಗೆ ಹೆಚ್ಚು ಗಮನಸೆಳೆಯುತ್ತಿದ್ದು, ಡಿಜಿಟಲ್‌ ರೂಪು ಪಡೆದುಕೊಂಡಿದೆ. ಈಗಾಗಿ ಕೆಲವೊಂದು ಡಿಪ್ಲೋಮಾ ಕೋರ್ಸ್‌ಗಳನ್ನು ಪಡೆಯಬಹುದು. ಅಷ್ಟೇ ಅಲ್ಲದೇ ನಮ್ಮಲ್ಲಿ ಕಲಿಕೆಯ ಆಸಕ್ತಿಯ ಜತೆಗೆ ಸೃಜನಶೀಲ ಕೌಶಲ ಇದ್ದರೆ ಸಾಕು ಡಿಸೈನಿಂಗ್‌ ಕಲಿಯಬಹುದಾಗಿದೆ. ರೇಡಿಯಂ ಸ್ಟಿಕ್ಕರ್‌ ಡಿಸೈನಿಂಗ್‌ನ್ನು ಬಹುತೇಕವಾಗಿ ಅರೆಕಾಲಿಕ, ಪೂರ್ಣಕಾಲಿಕ ಉದ್ಯೋಗವಾಗಿ ಕೂಡ ಮಾಡಬಹುದು. ನಮ್ಮ ವೃತ್ತಿಯ ಜತೆಗೆ ಇದೊಂದು ಹವ್ಯಾಸಿ ಪ್ರವೃತ್ತಿಯಾಗಿಯೂ ಕೂಡ ಮಾಡಬಹುದು.

ಅಭಿನವ

Advertisement

Udayavani is now on Telegram. Click here to join our channel and stay updated with the latest news.

Next