Advertisement

ಗ್ರಾಹಕ ಬೆಲೆ ಸೂಚ್ಯಂಕದಲ್ಲಿ ರೇಡಿಯೊ, ಡಿವಿಡಿಗಳು!

10:16 PM Jun 27, 2023 | Team Udayavani |

ನವದೆಹಲಿ: ಗ್ರಾಹಕ ಬೆಲೆ ಸೂಚ್ಯಂಕ ಅಥವಾ ಸಿಪಿಐನಲ್ಲಿರುವ 300 ಉತ್ಪನ್ನಗಳ ಪಟ್ಟಿಯಲ್ಲಿ ಅಚ್ಚರಿಯೊಂದು ಪತ್ತೆಯಾಗಿದೆ. ದೇಶದಲ್ಲಿ ಸದ್ಯ ಬಳಕೆಯಲ್ಲೇ ಇಲ್ಲದ ಅಥವಾ ಕೊಳ್ಳುವವರೇ ಇಲ್ಲದ ರೇಡಿಯೊ, ಟೇಪ್‌ ರೆಕಾರ್ಡರ್‌ಗಳು, ಈ ಎರಡೂ ಇರುವ ಸಾಧನಗಳು, ವಿಸಿಡಿ, ಡಿವಿಡಿ ಪ್ಲೇಯರ್‌ಗಳು ಸಿಪಿಐ ಪಟ್ಟಿಯಲ್ಲಿವೆ! ಹಲವು ವರ್ಷಗಳ ಹಿಂದೆಯೇ ಇವುಗಳ ಬಳಕೆ ಇಲ್ಲವಾಗಿದೆ. ಆದರೆ ಬೆಲೆ ಬದಲಾವಣೆ ಮಾಡಲು ಸಿಪಿಐ ನಿಗಾ ಇಟ್ಟಿರುವ ವಸ್ತುಗಳ ಪಟ್ಟಿಯಲ್ಲಿ ಮೇಲಿನ ಉತ್ಪನ್ನಗಳು ಸ್ಥಾನ ಪಡೆದಿವೆ.

Advertisement

ಇನ್ನೂ ಅಚ್ಚರಿಯೆಂದರೆ 2011ರಲ್ಲಿ ಗ್ರಾಹಕರು ಯಾವುದನ್ನು ಖರೀದಿಸುತ್ತಾರೆ ಎಂದು ಮನೆಮನೆ ಸಮೀಕ್ಷೆ ಮಾಡಿ 300 ಉತ್ಪನ್ನಗಳ ಪಟ್ಟಿ ತಯಾರಿಸಲಾಗಿತ್ತು. ಅದೇ ಪಟ್ಟಿಯನ್ನು ಪರಿಷ್ಕರಣೆ ಮಾಡದೇ ಈಗಲೂ ಉಳಿಸಿಕೊಳ್ಳಲಾಗಿದೆ! ಕಳೆದ ವರ್ಷಕ್ಕೆ ಹೋಲಿಸಿದರೆ ರೇಡಿಯೊ, ಟೇಪ್‌ ರೆಕಾರ್ಡರ್‌ಗಳ ಬೆಲೆಗಳು ಈ ಬಾರಿ ಜನವರಿ-ಮೇ ಅವಧಿಯಲ್ಲಿ ಶೇ.9.4ಕ್ಕೇರಿದೆ. ವಿಸಿಆರ್‌, ವಿಸಿಡಿ, ಡಿವಿಡಿಗಳ ಬೆಲೆಗಳು ಶೇ.12.6ಕ್ಕೇರಿವೆ. ಮಾರಾಟವೇ ಆಗದ, ಕೊಳ್ಳುವವರೇ ಇಲ್ಲದ ಈ ಉತ್ಪನ್ನಗಳ ಬೆಲೆಗಳು ಹೇಗೆ ಏರಲು ಸಾಧ್ಯ ಎಂಬುದು ಇಲ್ಲಿನ ಪ್ರಶ್ನೆ.

ಸದ್ಯ ಕುದುರೆಗಾಡಿಗಳ ಬಳಕೆ ಅಪರೂಪ. ಹಾಗಾಗಿ ಅವುಗಳ ಬೆಲೆ ಶೇ.6.3ಕ್ಕೆ ಕುಸಿದಿವೆ. ತಜ್ಞರ ಪ್ರಕಾರ ಯಾವ ಉತ್ಪನ್ನಗಳು ಸಿಗುವುದಿಲ್ಲವೋ, ಅವುಗಳ ಮೌಲ್ಯ ಕುಸಿಯುತ್ತದೆ. ಒಂದು ವೇಳೆ ಅಲ್ಲಲ್ಲಿ ಬಳಕೆಯಲ್ಲಿದ್ದರೆ ಅವುಗಳ ಬೆಲೆಯನ್ನು ಅಂದಾಜಿಸಲಾಗುತ್ತದೆ. ಇಲ್ಲವೇ ಇಲ್ಲ ಅನ್ನುವಂತಿದ್ದರೆ ಈ ಬಗ್ಗೆ ಒಂದು ತೀರ್ಮಾನಕ್ಕೆ ಬರಲಾಗುತ್ತದೆ. ವಿಚಿತ್ರವೆಂದರೆ ಕೊಳ್ಳುವವರೇ ಇಲ್ಲದ ರೇಡಿಯೊ, ಡಿವಿಡಿಯಂತಹ ಉತ್ಪನ್ನಗಳ ಒಟ್ಟು ಮೌಲ್ಯ ಸಿಪಿಐ ಪಟ್ಟಿಯಲ್ಲಿ ಶೇ.3ರಷ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next