ಒಂದು ಕಾಲದಲ್ಲಿ ಮನೆಮನೆಗಳಲ್ಲಿ ರೇಡಿಯೋ ಧ್ವನಿ ಕೇಳು ಬರುತ್ತಿತ್ತು. ಮನೋರಂಜನೆಯ ಮೂಲವಾಗಿದ್ದ, ಇದು ಒಂದು ಪ್ರಬಲ ಸಾಧನವಾಗಿದೆ. ಶೋಷಣೆಯ ವಿರುದ್ಧ ಧ್ವನಿ ಎತ್ತುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ಮುಖ್ಯವಾದ ಪಾತ್ರವನ್ನು ಹೊಂದಿದೆ.
ಭಾರತೀಯ ರೇಡಿಯೋ ಪ್ರಸಾರ 1920ರ ದಶಕದ ಆರಂಭದಲ್ಲಿ ಪ್ರಾರಂಭವಾಯಿತು. ಹಾಗೂ 1923ರಲ್ಲಿ ಬಾಂಬೆಯ ರೇಡಿಯೋ ಕ್ಲಬ್ ತನ್ನ ಮೊದಲ ಕಾರ್ಯಕ್ರಮವನ್ನು ಪ್ರಸಾರ ಮಾಡಿತು.
ಜನರು ಸಾಮಾಜಿಕ ಜಾಲತಾಣಕ್ಕೆ ಎಷ್ಟೇ ಪ್ರಾಮುಖ್ಯತೆಯನ್ನು ನೀಡಿದರೂ ಕೂಡ ರೇಡಿಯೋ ಅದರ ಪ್ರಾಮುಖ್ಯತೆಯನ್ನು ಕಳೆದುಕೊಂಡಿಲ್ಲ, ಒಂದು ಕಾಲದಲ್ಲಿ ಜನರ ಜೀವನಾಡಿಯಾಗಿದ್ದ ರೇಡಿಯೋ ಇಂದಿನ ಡಿಜಿಟಲ್ ಮಾಧ್ಯಮದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ರೇಡಿಯೋ ಅಪ್ಲಿಕೇಶನ್ಸ್ ಪೊಡ್ ಕಾಸ್ಟಿಂಗ್ ಡಿಜಿಟಲ್ ರೇಡಿಯೋಗಳು ಆಡಿಯೋ ಸ್ವಿಮ್ಮಿಂಗ್ ಸೈಟ್‌ಗಳನ್ನು ಹೊಂದಿದೆ. ಅತ್ಯಂತ ವಿಶ್ವಾಸಾರ್ಹ ಸುದ್ದಿ ಸಂಪನ್ಮೂಲಗಳಲ್ಲಿ ರೇಡಿಯೋ ಸಹ ಒಂದಾಗಿದೆ.
ಇದು ಜನರಿಗೆ ಸರಕಾರದ ಸಂದೇಶ, ಶಿಕ್ಷಣ, ಸಂಗೀತ, ಹಾಗೂ ಮನೋರಂಜನೆಯನ್ನು ನೀಡುವ ಒಂದು ಮಾಧ್ಯಮವಾಗಿದೆ, ವಿಕೋಪದಂತಹ ಸಮಯದಲ್ಲಿ ತುರ್ತು ಸಂದರ್ಭದಲ್ಲಿ ರೇಡಿಯೋ ಮಹತ್ವದ ಪಾತ್ರ ವಹಿಸಿದೆ. ರೇಡಿಯೋದ ಕುರಿತು ಜನರಿಗೆ ಅರಿವು ಮೂಡಿಸುವುದು ಈ ದಿನದ ಮಹತ್ವವಾಗಿದೆ.
-ಪ್ರೀತಿ .ಗಿ. ಮಾಳವದೆ
ಮಹಿಳಾ ವಿವಿ ವಿಜಯಪುರ