Advertisement

ಇನ್ನಿಲ್ಲ ರೇಡಿಯೋ ಪಾಠ ! ಇಲ್ಲಿಗೆ ಮಕ್ಕಳ ಬಾನುಲಿ ಕಾರ್ಯಕ್ರಮ ಮುಗಿಯಿತು!

10:00 AM Jan 17, 2020 | sudhir |

ಬೆಂಗಳೂರು: ಶಾಲಾ ಮಕ್ಕಳ ಶಿಕ್ಷಣದ ಗುಣಾತ್ಮಕ ಬದಲಾವಣೆಗಾಗಿ ಆಕಾಶವಾಣಿ ಕೇಂದ್ರದ ಜತೆಗೂಡಿ ಸಾರ್ವಜನಿಕ ಶಿಕ್ಷಣ ಇಲಾಖೆ ರೂಪಿಸಿದ್ದ ಚಿಣ್ಣರ ಚುಕ್ಕಿ, ಚುಕ್ಕಿ ಚಿನ್ನ ಹಾಗೂ ಕೇಳಿ-ಕಲಿ ಬಾನುಲಿ ಕಾರ್ಯಕ್ರಮ ಸ್ಥಗಿತಗೊಳಿಸಲು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ನಿರ್ಧರಿಸಿದೆ.

Advertisement

ಕಂಪ್ಯೂಟರ್‌ ಆಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಅಲ್ಲದೆ ಶಾಲೆಗಳಿಗೆ ಕಂಪ್ಯೂಟರ್‌ ನೀಡಿ ಸ್ಮಾರ್ಟ್‌ ತರಗತಿಗಳನ್ನು ತೆರೆಯುತ್ತಿರುವುದರಿಂದ ಬಾನುಲಿ ಕಾರ್ಯಕ್ರಮ ಪ್ರಸ್ತುತವಲ್ಲ ಎಂಬ ಸಬೂಬು ನೀಡಿ ದಶಕಕ್ಕೂ ಹೆಚ್ಚು ಕಾಲ ಯಶಸ್ವಿಯಾಗಿದ್ದ ಈ ಕಾರ್ಯಕ್ರಮಗಳನ್ನು ಕೈಬಿಡಲಾಗಿದೆ.

ರಾಜ್ಯ ಸಂಶೋಧನೆ ಮತ್ತು ತರಬೇತಿ ಇಲಾಖೆಯು 1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗಾಗಿ ರೂಪಿಸಿದ್ದ ಚುಕ್ಕಿ ಚಿನ್ನ, ಚಿಣ್ಣರ ಚುಕ್ಕಿ ಹಾಗೂ ಕೇಳಿ-ಕಲಿ ಬಾನುಲಿ ಕಾರ್ಯಕ್ರಮವನ್ನು ಮುಂದುವರಿಸುವ ಯೋಚನೆಯನ್ನೇ ಮಾಡುತ್ತಿಲ್ಲ. ಆದರೆ ಶಿಕ್ಷಕರು ಮತ್ತು ಪೋಷಕರು ರೇಡಿಯೋ ಕಾರ್ಯ ಕ್ರಮದ ಬೇಡಿಕೆಯನ್ನು ಮೇಲಿಂದ ಮೇಲೆ ಇಡುತ್ತಲೇ ಇದ್ದಾರೆ.

ಆಕಾಶವಾಣಿ ಕೇಂದ್ರ ಕೂಡ ಈ ಕಾರ್ಯಕ್ರಮ ನಡೆಸಲು ಸಿದ್ಧವಿದೆ. ಆದರೆ ಡಿಎಸ್‌ಇಆರ್‌ಟಿ ಅನುಮತಿ ನೀಡುತ್ತಿಲ್ಲ ಎಂದು ಆಕಾಶವಾಣಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ರೇಡಿಯೋ ಸೆಟ್‌ ನೀಡಿತ್ತು
ರಾಜ್ಯದ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್‌ ಶಿಕ್ಷಣ ಇಲಾಖೆಯಲ್ಲಿದ್ದಾಗ ಕೇಳಿ-ಕಲಿ ಬಾನುಲಿ ಕಾರ್ಯಕ್ರಮ ಆರಂಭಿಸಿದ್ದರು.

Advertisement

ರೇಡಿಯೋ ಟಿಪ್ಸ್‌ ಇಲ್ಲ
ಪ್ರತಿವರ್ಷ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ತಯಾರಿಗೆ ಸಂಬಂಧಿಸಿ ದಂತೆ ಪರೀಕ್ಷೆಗೆ ಎರಡು ಮೂರು ತಿಂಗಳು ಇರುವಾಗಲೇ ಪ್ರತಿದಿನ ಬೆಳಗ್ಗೆ ಅಥವಾ ಸಂಜೆ ಎಸೆಸೆಲ್ಸಿ ಪಠ್ಯಾಧಾರಿತ ಕಾರ್ಯಕ್ರಮ ಪ್ರಸಾರ ಮಾಡಲಾಗುತಿತ್ತು. ಆದರೆ ಈ ವರ್ಷ ಎಸೆಸೆಲ್ಸಿ ಪರೀಕ್ಷೆಯ ಮಾದರಿ ಬದಲಾಗಿರುವುದರಿಂದ ರೇಡಿಯೋ ಮೂಲಕ ಟಿಪ್ಸ್‌ ನೀಡದೆ ಇರಲು ಇಲಾಖೆ ನಿರ್ಧರಿಸಿದೆ.

ಪ್ರಶ್ನೆಪತ್ರಿಕೆ ಮಾದರಿ ಬದಲಾಗಿರುವುದರಿಂದ ಕಾರ್ಯಕ್ರಮ ನಡೆಸುವ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಡಿಎಸ್‌ಇಆರ್‌ಟಿ ನಿರ್ದೇಶಕ ಎಂ.ಆರ್‌. ಮಾರುತಿ ಮಾಹಿತಿ ನೀಡಿದರು.

ಬಾನುಲಿ ಕಾರ್ಯಕ್ರಮವು ಇಂದಿಗೆ ಪ್ರಸ್ತುತ ಅಲ್ಲ ಎನ್ನುವ ಕಾರಣಕ್ಕೆ ನಿಲ್ಲಿಸಿದ್ದೇವೆ. ಸ್ಮಾರ್ಟ್‌ ಕ್ಲಾಸ್‌ಗಳನ್ನು ತೆರೆಯುತ್ತಿದ್ದೇವೆ. ಅಲ್ಲದೆ ಶಾಲೆಗಳಿಗೆ ಮಲ್ಟಿ ಮೀಡಿಯಾ ಕಲಿಕೆಗೆ ಆದ್ಯತೆ ನೀಡುತ್ತಿದ್ದೇವೆ.
– ಎಂ.ಆರ್‌. ಮಾರುತಿ, ನಿರ್ದೇಶಕ, ಡಿಎಸ್‌ಇಆರ್‌ಟಿ

Advertisement

Udayavani is now on Telegram. Click here to join our channel and stay updated with the latest news.

Next