Advertisement

ರಾಧಿಕಾ ಪಂಡಿತ್‌ ಅಭಿಮಾನಿಗಳಿಗೆ ಸಿಹಿಸುದ್ದಿ !

11:25 AM Dec 01, 2017 | |

ಬೆಂಗಳೂರು: ಸ್ಯಾಂಡಲ್‌ವುಡ್‌ನ‌ ‘ಯಶ’ಸ್ಸಿನ ರಾಣಿ ರಾಧಿಕಾ ಪಂಡಿತ್‌ ಅವರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಬಳಿಕ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿದ್ದಾರೆ.

Advertisement

ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ ಇನ್ನೂ ಹೆಸರಿಡದ ಚಿತ್ರದಲ್ಲಿ ರಾಧಿಕಾಗೆ ನಾಯಕನಾಗಿ ರಂಗಿತರಂಗ ಖ್ಯಾತಿಯ ನಿರೂಪ್‌ ಭಂಡಾರಿ ಅವರು ಕಾಣಿಸಿಕೊಳ್ಳಲಿದ್ದಾರೆ.

ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಸಹಾಯಕ ನಿರ್ದೇಶಕಿ ಯಾಗಿ  ಕೆಲಸ ಮಾಡಿರುವ ವಿ.ಪ್ರಿಯಾ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

 ಚಿತ್ರಕ್ಕೆ ಇಂದು ಡಿಸೆಂಬರ್‌ 1 ಮಹೂರ್ತ ನೆರವೇರಲಿದ್ದು ಡಿಸೆಂಬರ್‌ 11 ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ತಿಳಿದು ಬಂದಿದೆ.

‘ಚಿತ್ರದ ಕಥೆ ನನಗೆ ಬಹಳ ಇಷ್ಟವಾಯಿತು ಹೀಗಾಗಿ ಒಪ್ಪಿಕೊಂಡೆ’ ಎಂದು ನಟಿ ರಾಧಿಕಾ ಹೇಳಿದ್ದಾರೆ. 

Advertisement

ಚಿತ್ರತಲ್ಲಿ ನಾಯಕ ಮತ್ತು ನಾಯಕಿಗೆ ಸಮಾನ ಅವಕಾಶ ಇದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ರಾಧಿಕಾ ವಿವಾಹವಾಗುವ ಮುನ್ನ ಪತಿ ಯಶ್‌ ಜೊತೆ ‘ಸಂತು ಸ್ಟ್ರೈಟ್‌ ಫಾರ್ವರ್ಡ್‌’ ಚಿತ್ರದಲ್ಲಿ ನಟಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next