Advertisement
ಸಂಘಟನೆಯ ಉಪಜಿಲ್ಲಾ ಘಟಕದ ಅಧ್ಯಕ್ಷೆ ಶಶಿಕಲ ಕೆ. ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶಿಕ್ಷಣಾಧಿಕಾರಿ ನಂದಿಕೇಶನ್ ಮುಖ್ಯ ಅತಿಥಿಯಾಗಿದ್ದರು. ಕೇಂದ್ರ ಸಮಿತಿ ಅಧ್ಯಕ್ಷರಾದ ರವೀಂದ್ರನಾಥ್ ಕೆ. ಆರ್, ಎಸ್.ಎ.ಟಿ. ಎಲ್.ಪಿ. ಶಾಲೆಯ ಮುಖ್ಯೋಪಾಧ್ಯಾಯತೇಜಸ್ ಕಿರಣ್, ನಿವೃತ್ತ ಮುಖ್ಯ ಶಿಕ್ಷಕರಾದ ಟಿ.ಡಿ.ಸದಾಶಿವ ರಾವ್, ಸತ್ಯನಾರಾಯಣ ಭಟ್, ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಕುಮಾರಿ ಟೀಚರ್ ಉಪಸ್ಥಿತರಿದ್ದರು. ಉಪಜಿಲ್ಲಾ ಸಮಿತಿ ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿದರು. ಉಪಜಿಲ್ಲಾ ಜತೆ ಕಾರ್ಯದರ್ಶಿ ಸದಾಶಿವ ಪೊಯೆ ವಂದಿಸಿದರು. ಉಪಜಿಲ್ಲಾ ಸಮಿತಿ ಸದಸ್ಯರಾದ ರಾಜಾರಾಮ ರಾವ್ ಕಾರ್ಯಕ್ರಮ ನಿರೂಪಿಸಿದರು.
ನೂತನ ಸಮಿತಿಗೆ ಅಧ್ಯಕ್ಷೆಯಾಗಿ ಪೈವಳಿಕೆ ನಗರ ಶಾಲೆಯ ಶಶಿಕಲ ಕೆ, ಉಪಾಧ್ಯಕ್ಷರಾಗಿ ಮಂಗಲ್ಪಾಡಿ ಪ್ರೌಢಶಾಲೆಯ ಸುನಿತ ಎ. ಹಾಗೂ ಉದ್ಯಾವರ ತೋಟಶಾಲೆಯ ಮುಖ್ಯೋಪಾಧ್ಯಾಯರಾದ ಶಿವರಾಮ ಭಟ್, ಕಾರ್ಯದರ್ಶಿಯಾಗಿ ಕುಳೂರು ಶಾಲೆಯ ಜಯಪ್ರಶಾಂತ್ ಪಾಲೆಂಗ್ರಿ, ಜೊತೆ ಕಾರ್ಯದರ್ಶಿಗಳಾಗಿ ಕವಿತ ಕೂಡ್ಲು ಹಾಗೂ ಸದಾಶಿವ ಪೊಯೆ, ಕೋಶಾ ಧಿಕಾರಿಯಾಗಿ ಆನೆಕಲ್ಲು ಶಾಲೆಯ ಜೀವನ್ ಕುಮಾರ್ ಆಯ್ಕೆಯಾದರು.ರಂಗ ಕಲಾವಿದ ಸದಾಶಿವ ಪೊಯೆÂ, ವಸಂತ ಮೂಡಂಬೈಲ್, ಉಮೇಶ್ ನಾಯ್ಕ, ಆದಿನಾರಾಯಣ ಭಟ್ ಸಂಘಟನಾತ್ಮಕ ವಿಚಾರಗಳ ಚರ್ಚೆ ನಡೆಸಿದರುಅನಂತರ ನಡೆದ ಪ್ರತಿನಿಧಿ ಸಮ್ಮೇಳನದಲ್ಲಿ ಕೇಂದ್ರ ಸಮಿತಿ ಅಧ್ಯಕ್ಷರಾದ ರವೀಂದ್ರನಾಥ್ ಕೆ.ಆರ್, ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಶ್ರೀನಿವಾಸ ರಾವ್ ಪಿ.ಬಿ, ಸಂಘಟನೆಯ ಉಪಜಿಲ್ಲಾ ಸಮಿತಿ ಉಪಾಧ್ಯಕ್ಷರಾದ ಶಿವರಾಮ ಭಟ್, ಉಪಜಿಲ್ಲಾ ಸಮಿತಿ ಉಪಾಧ್ಯಕ್ಷೆ ಸುನಿತ ಎ, ಕೇಂದ್ರ ಸಮಿತಿ ಸದಸ್ಯರಾದ ಸುಕೇಶ್ ಎ.ಮೊದಲಾದವರು ಉಪಸ್ಥಿತರಿದ್ದರು.