Advertisement

ಮೆಡಿಕಲ್ಸ್‌ ವಿಭಾಗದ ಹೊಸ ಆವಿಷ್ಕಾರ

12:30 AM Mar 28, 2019 | Sriram |

ಉಡುಪಿ: ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ದಿನದ 24 ಗಂಟೆಗಳ ಕಾಲ ಸೇವೆ ನೀಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾದ ರಾಧಾ ಮೆಡಿಕಲ್ಸ್‌, ಮಂಗಳೂರು ಶ್ರೀನಿವಾಸ ಕಾಲೇಜ್‌ ಆಫ್ ಫಾರ್ಮಸಿ, ಇಂಡಿಯನ್‌ ಫಾರ್ಮಾಸುಟಿಕಲ್‌ ಅಸೋಸಿಯೇಶನ್‌ ಮಂಗಳೂರು ಶಾಖೆಯ ಪ್ರಾಯೋಜಕತ್ವದಲ್ಲಿ ಮೆಡಿಕಲ್‌ ವಿಭಾಗದಲ್ಲಿ ಪ್ರಥಮ ಬಾರಿಗೆ ಆವಿಷ್ಕರಿಸಲ್ಪಟ್ಟ “ಪೇಷಂಟ್‌ ಕೌನ್ಸೆಲಿಂಗ್‌ ಸೆಂಟರ್‌ ಮತ್ತು ಡ್ರಗ್‌ ಇನ್‌ಫಾರ್ಮೇಶನ್‌ ಸರ್ವಿಸಸ್‌’ಗೆ ಮಂಗಳೂರು ಬೆಂದೂರ್‌ವೆಲ್‌ನಲ್ಲಿರುವ ರಾಧಾ ಮೆಡಿಕಲ್ಸ್‌ನಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.

Advertisement

ಸಾಯಿರಾಧಾ ಫಾರ್ಮಾ ಪ್ರೈ.ಲಿ.ನ ಎಂಡಿ ಮನೋಹರ ಎಸ್‌. ಶೆಟ್ಟಿ, ಇಂಡಿಯನ್‌ ಮೆಡಿಕಲ್‌ ಅಸೋಸಿಯೇಶನ್‌ ಮಂಗಳೂರಿನ ಅಧ್ಯಕ್ಷ ಡಾ| ಸಚ್ಚಿದಾನಂದ ರೈ, ಮಂಗಳೂರು ಶ್ರೀನಿವಾಸ ವಿ.ವಿ.ಯ ಮುಖ್ಯ ವೈದ್ಯಕೀಯ ಅಧೀಕ್ಷಕ ಪ್ರೊ| ಡಾ| ಎಂ. ಅಣ್ಣಯ್ಯ ಕುಲಾಲ್‌, ಶ್ರೀನಿವಾಸ ಕಾಲೇಜ್‌ ಆಫ್ ಫಾರ್ಮಸಿಯ ಪ್ರಾಂಶುಪಾಲ ಮತ್ತು ನಿರ್ದೇಶಕ, ಡಾ| ಎ.ಆರ್‌. ಶಬರಾಯ, ಅಸಿಸ್ಟೆಂಟ್‌ ಡ್ರಗ್‌ ಕಂಟ್ರೋಲರ್‌ ಶಂಕರ ನಾಯ್ಕ, ಡ್ರಗ್‌ ಇನ್ಸ್‌ಪೆಕ್ಟರ್‌ ಧನಂಜಯ ಹಟಾಕಿ, ಶ್ರೀನಿವಾಸ ಫಾರ್ಮಸಿಯ ಅಸೋಸಿಯೇಟ್‌ ಪ್ರೊಫೆಸರ್‌ ಡಾ| ಸತೀಶ್‌ ಎಸ್‌., ರಾಧಾ ಮೆಡಿಕಲ್ಸ್‌ನ ಚೀಫ್ ಕೋ-ಆರ್ಡಿನೇಟರ್‌ ತ್ರಿವಿಕ್ರಮ್‌ ಭಟ್‌ ಉಪಸ್ಥಿತರಿದ್ದರು.

ಏನಿದು ಸೇವೆ?
ಔಷಧಿಗಳ ಕುರಿತು ಸಂಪೂರ್ಣ ಅರಿವು, ಮಾರ್ಗದರ್ಶನ ನೀಡುವ ದೃಷ್ಟಿಯಿಂದ ವಿನೂತನ ಸೇವೆಗಳನ್ನು ಆವಿಷ್ಕರಿಸಲಾಗಿದೆ. ಶ್ರೀನಿವಾಸ ಕಾಲೇಜಿನ ಫಾರ್ಮಾ ಡಿ ಸಿಬಂದಿ ಬೆಂದೂರ್‌ವೆಲ್‌ ರಾಧಾ ಮೆಡಿಕಲ್ಸ್‌ನಲ್ಲಿ ಬೆಳಗ್ಗೆ 11ರಿಂದ ರಾತ್ರಿ 8ರ ತನಕ ಈ ಸೇವೆಗೆ ಲಭ್ಯರಿರುತ್ತಾರೆ.

ಜನತೆಗೆ ಇನ್ನಷ್ಟು ಸೇವೆ ಒದಗಿಸುವ ನಿಟ್ಟಿನಲ್ಲಿ ಮೆಡಿಕಲ್‌ ವಿಭಾಗಕ್ಕೆ ಹೊಸದಾದ ಎರಡು ಸೇವೆಗಳನ್ನು ಸೇರ್ಪಡೆಗೊಳಿಸ ಲಾಗಿದೆ. ಈ ವಿಶಿಷ್ಟ ಸೇವೆಗಳನ್ನು ಪ್ರಾಯೋಗಿಕವಾಗಿ ಇದೀಗ ಪರಿಚಯಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನುಳಿದ ರಾಧಾ ಮೆಡಿಕಲ್‌ಗ‌ಳಲ್ಲಿಯೂ ಈ ಸೇವೆಗೆ ಚಾಲನೆ ನೀಡಲಾಗುವುದು.
– ಮನೋಹರ ಎಸ್‌. ಶೆಟ್ಟಿ,
ಎಂಡಿ, ಸಾಯಿರಾಧಾ ಫಾರ್ಮಾ ಪ್ರೈ.ಲಿ.

Advertisement

Udayavani is now on Telegram. Click here to join our channel and stay updated with the latest news.

Next