ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ಜಾಲವನ್ನು ಪೊಲೀಸರು ಭೇದಿಸಿದ್ದು, ವಿದೇಶಿ ಮಹಿಳೆ ಸೇರಿ ಐವರನ್ನು ಬಂಧಿಸಲಾಗಿದೆ.
ಬಂಧಿತರನ್ನು ಮೊಹಮ್ಮದ್ ಅರೂಪ್ (34), ಚಂಡೆ ಸಾಹ್ನಿ (30), ಅಲಿ ಶೇರ್ ತಿಲ್ಲಾದೇವ್ (48), ಜುಮಾಯೆವಾ ಅಜೀಜಾ (37) ಮತ್ತು ಮೆರೆಡೋಬ್ ಅಹ್ಮದ್ (48) ಎಂದು ಗುರುತಿಸಲಾಗಿದೆ. ಅಜೀಜಾ ಮತ್ತು ಅಹ್ಮದ್ ತುರ್ಕಮೆನಿಸ್ತಾನ್ ಪ್ರಜೆಗಳು.
ಸುಳಿವು ಆಧರಿಸಿ, ಕಾನ್‌ಸ್ಟೆಬಲ್ ಒಬ್ಬರನ್ನು ಗ್ರಾಹಕನ ರೂಪದಲ್ಲಿ ಕಳುಹಿಸಲಾಯಿತು ಮತ್ತು ಏಜೆಂಟ್‌ಗಳನ್ನು ಸಂಪರ್ಕಿಸಲಾಯಿತು. ಒಪ್ಪಂದವನ್ನು ಅಂತಿಮಗೊಳಿಸಿದ ನಂತರ, ಗ್ರಾಹಕರನ್ನು ಮಾಳವೀಯ ನಗರದಲ್ಲಿರುವ ವಿಳಾಸಕ್ಕೆ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲಿ, ಅರೂಪ್ ಮತ್ತು ಸಾಹ್ನಿ ತನ್ನ ಮುಂದೆ ಇರುವ 10 ವಿದೇಶಿ ಮಹಿಳೆಯರಲ್ಲಿ ಆಯ್ಕೆ ಮಾಡಲು ಗ್ರಾಹಕನನ್ನು ಕೇಳಿದ್ದು, ಕೂಡಲೇ ದಾಳಿ ನಡೆಸಿ ಇಬ್ಬರು ಏಜೆಂಟ್‌ಗಳನ್ನು ಬಂಧಿಸಲಾಯಿತು ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಉಳಿದುಕೊಳ್ಳಲು ಮಾನ್ಯ ವೀಸಾ ಮತ್ತು ಪಾಸ್‌ಪೋರ್ಟ್ ಅನ್ನು ಹಾಜರುಪಡಿಸಲು ಎಲ್ಲಾ ವಿದೇಶಿಯರನ್ನು ಕೇಳಲಾಗಿದ್ದು, ಆದರೆ ಅವರು ಯಾವುದೇ ಕಾನೂನು ದಾಖಲೆಯನ್ನು ಸಲ್ಲಿಸಲು ವಿಫಲರಾಗಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ವಿಚಿತ್ರ ವೀರ್ ಹೇಳಿದ್ದಾರೆ.
ಅಜೀಜಾ ಮತ್ತು ಆಕೆಯ ಪತಿ ಅಹ್ಮದ್ ಈ ದಂಧೆಯ ಕಿಂಗ್‌ಪಿನ್‌ಗಳು ಎಂದು ತಿಳಿಸಿದ್ದಾರೆ.
ಉಜ್ಬೆಕಿಸ್ತಾನದ ಪ್ರಜೆ ಶೇರ್, ಉದ್ಯೋಗ ಕೊಡಿಸುವ ನೆಪದಲ್ಲಿ ವಿದೇಶಿ ಮಹಿಳೆಯರನ್ನು ಭಾರತಕ್ಕೆ ಕರೆತಂದು ನಂತರ ಅಜೀಜಾ ಮತ್ತು ಆಕೆಯ ಪತಿಗೆ ಒಪ್ಪಿಸುತ್ತಿದ್ದ. ದಂಪತಿ ವಿದೇಶಿಯರನ್ನು ವೇಶ್ಯಾವಾಟಿಕೆಗೆ ಒತ್ತಾಯಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.