ನೋಯ್ಡಾ: ಜನನಿಭಿಡ ನೋಯ್ಡಾದ ಮಾಲ್ ಗೆ ಬುಧವಾರ(ಫೆ.03) ರಾತ್ರಿ ಉತ್ತರಪ್ರದೇಶ ಪೊಲೀಸರು ದಾಳಿ ನಡೆಸುವ ಮೂಲಕ ವೇಶ್ಯಾವಾಟಿಕೆ ಜಾಲವನ್ನು ಪತ್ತೆ ಹಚ್ಚಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಏನಿದು ಘಟನೆ; ಇತಿಹಾಸದ ಪುಟದಲ್ಲಿ ಚೌರಿ-ಚೌರಾ ಹುತಾತ್ಮರ ನಿರ್ಲಕ್ಷ್ಯ; ಪ್ರಧಾನಿ ಮೋದಿ
ನೋಯ್ಡಾ 18 ಸೆಕ್ಟರ್ ನಲ್ಲಿನ ಮಾಲ್ ಗಳಲ್ಲಿದ್ದ ಸ್ಪಾಗಳ(ಮಸಾಜ್ ಪಾರ್ಲರ್) ಮೇಲೆ ದಾಳಿ ನಡೆಸಿದ ಪೊಲೀಸರು ಮಾಲೀಕರು ಮತ್ತು ಗ್ರಾಹಕರನ್ನು ಬಂಧಿಸಿದ್ದರು. ಅಲ್ಲದೇ 14 ಮಂದಿ ಯುವತಿಯರನ್ನು ರಕ್ಷಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಎಎನ್ ಐ ಜತೆ ಮಾತನಾಡಿದ ಡಿಸಿಪಿ ಪೊಲೀಸ್ ಕಮಿಷನರ್ ರಾಜೇಶ್ ಎಸ್, ಸ್ಪಾಗಳಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಈ ಹಿನ್ನೆಲೆಯಲ್ಲಿ ದಾಳಿ ನಡೆಸಿ, ಮಾಲೀಕರು ಮತ್ತು ಗ್ರಾಹಕರನ್ನು ಬಂಧಿಸಿರುವುದಾಗಿ ತಿಳಿಸಿದರು.
ಯುವತಿಯರಿಗೆ ಆಮೀಷವೊಡ್ಡಿ ವೇಶ್ಯಾಟಿಕೆಗೆ ಕರೆಯಿಸಿಕೊಂಡಿದ್ದರು. ಅವರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಮಾಲ್ ಗಳಲ್ಲಿ ಸ್ಪಾ ತೆರೆಯಲು ಬಾಡಿಗೆ ನೀಡಿರುವ ಮಾಲೀಕರಿಗೆ ನೋಟಿಸ್ ಕಳುಹಿಸುವುದಾಗಿ ಡಿಸಿಪಿ ತಿಳಿಸಿದ್ದಾರೆ.
ಯುವತಿಯರನ್ನು ಮೋಸ ಹೋದವರು ಎಂದು ಪರಿಗಣಿಸಲಾಗಿದೆ. ಗ್ರಾಹಕರು ಮತ್ತು ಸ್ಪಾ ಮಾಲೀಕರ ಮೇಲೆ ಅಕ್ರಮ ಕಳ್ಳಸಾಗಣೆ ಕಾಯ್ದೆಯಡಿ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ವರತಿ ತಿಳಿಸಿದೆ.