Advertisement

ಯುಪಿಯ ಮೀರತ್‌ನಲ್ಲಿ ಬೃಹತ್‌ ಸೆಕ್ಸ್‌ ಜಾಲ ಬೇಧಿಸಿದ ಪೊಲೀಸರು 

10:16 AM Mar 21, 2018 | |

ಮೀರತ್‌: ನಗರದ ಹಲವು ಹೊಟೇಲ್‌ಗ‌ಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ ಪೊಲೀಸರು ಭಾರೀ ಸೆಕ್ಸ್‌ ಜಾಲವನ್ನು ಬೇಧಿಸಿದ್ದಾರೆ. ದಂಧೆಯಲ್ಲಿ ತೊಡಗಿದ್ದ 35ಕ್ಕೂ ಹೆಚ್ಚು ಮಹಿಳೆಯರು ಮತ್ತು ಪುರುಷರನ್ನು ವಶಕ್ಕೆ ಪಡೆದಿದ್ದಾರೆ. 

Advertisement

ಮಂಗಳವಾರ ಆರಕ್ಕೂ ಹೆಚ್ಚು ಹೊಟೇಲ್‌ಗ‌ಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಹಲವರು ಪರಾರಿಯಾಗಲು ಯತ್ನಿಸಿದ್ದು ಇನ್ನೂ ಕೆಲವರು ಹೊಟೇಲ್‌ಗ‌ಳಲ್ಲಿ ಅಡಗಿಕೊಳ್ಳಲು ಮುಂದಾಗಿದ್ದಾರೆ. 

ಈ ಹೊಟೇಲ್‌ಗ‌ಳಲ್ಲಿ ಹಲವು ವರ್ಷಗಳಿಂದ ದಂಧೆ ನಡೆಯುತ್ತಿದ್ದು ಇಂತಹ ಚಟುವಟಿಕೆಗಳಿಗೆ ಬ್ರೇಕ್‌ ಹಾಕಲು ಮುಂದಾಗಿರುವ ಪೊಲೀಸರು ಕಾರ್ಯಾಚರಣೆ ಮುಂದುವರಿಸಿರುವುದಾಗಿ ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next