Advertisement

ರೇಷನಿಂಗ್‌: ಮೇ 15ರ ಬಳಿಕ3 ದಿನ ನೀರು ಸ್ಥಗಿತ ಸಾಧ್ಯತೆ

08:06 AM May 11, 2019 | Team Udayavani |

ಮಂಗಳೂರು: ತುಂಬೆ ಅಣೆಕಟ್ಟಿನಲ್ಲಿ ದಿನದಿಂದ ದಿನಕ್ಕೆ ನೀರು ಇಳಿಕೆಯಾಗುತ್ತಿದ್ದು, ಸದ್ಯ ಜಾರಿಯಲ್ಲಿರುವ ರೇಷನಿಂಗ್‌ ಮೇ 15ರ ಬಳಿಕ ಬದಲಾಗುವ ಸಾಧ್ಯತೆ ಇದೆ. ಮೇ 15ರ ವರೆಗೂ ಮಳೆ ಯಾಗದಿದ್ದರೆ ಮೇ 15ರ ಬಳಿಕ 4 ದಿನ ನೀರು ಸರಬರಾಜು ಮಾಡಿ 3 ದಿನ ಸ್ಥಗಿತಗೊಳಿಸುವ ಬಗ್ಗೆ ಜಿಲ್ಲಾಡಳಿತ ಚಿಂತನೆ ನಡೆಸಿದೆ.

Advertisement

ಗುರುವಾರ ಬೆಳಗ್ಗೆ 6ರಿಂದ ನೀರು ಸರಬರಾಜು ಆರಂಭಗೊಂಡಿದ್ದು, ಮೇ 13ರ ಬೆಳಗ್ಗೆ 6 ಗಂಟೆವರೆಗೆ ಸರಬರಾಜಾಗಲಿದೆ. ಶುಕ್ರವಾರ ಸಂಜೆ ತುಂಬೆ ನೀರಿನ ಮಟ್ಟ 4.12 ಮೀ. ಆಗಿದೆ. ಗುರುವಾರ ಬೆಳಗ್ಗೆ 4.24 ಮೀ. ಇದ್ದ ಮಟ್ಟ ಸಂಜೆ 4.17 ಮೀ.ಗೆ ಇಳಿಕೆಯಾಗಿತ್ತು. ಮಳೆ ಬಾರದಿದ್ದಲ್ಲಿ ವಾರದೊಳಗೆ 4 ಮೀ.ಗೆ ಇಳಿಯಲಿದೆ.

ಮೇ 15ರ ಬಳಿಕ ತೀರ್ಮಾನ
ರೇಷನಿಂಗ್‌ ಆರಂಭಿಸಿದ್ದರಿಂದ ನಗರಕ್ಕೆ ಸದ್ಯ ನೀರಿನ ಸಮಸ್ಯೆ ದೊಡ್ಡದಾಗಿ ಕಾಡುತ್ತಿಲ್ಲ. ಮೇ 15ರ ವರೆಗೆ ಈಗಿನ ನಿಯಮದ ಪ್ರಕಾರವೇ ರೇಷನಿಂಗ್‌ ಮುಂದುವರಿಯಲಿದೆ. ಆ ಬಳಿಕ ಪರಿಸ್ಥಿತಿ ಅವಲೋಕಿಸಿ ವಾರದಲ್ಲಿ ಮೂರು ದಿನ ನೀರು ಸ್ಥಗಿತ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು.- ಶಶಿಕಾಂತ ಸೆಂಥಿಲ್, ಜಿಲ್ಲಾಧಿಕಾರಿ. ದ.ಕ.

Advertisement

Udayavani is now on Telegram. Click here to join our channel and stay updated with the latest news.

Next