Advertisement

ಕಮಲಾ ಹ್ಯಾರಿಸ್‌ಗೆ ಜನಾಂಗೀಯ ನಿಂದನೆ

12:08 PM Jul 02, 2019 | Team Udayavani |

ವಾಷಿಂಗ್ಟನ್‌: 2020ರ ಅಮೆರಿಕ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿರುವ ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಸಾಮಾಜಿಕ ಮಾಧ್ಯಮದಲ್ಲಿ ಜನಾಂಗೀಯ ನಿಂದನೆಗೆ ಗುರಿಯಾಗಿದ್ದಾರೆ.

Advertisement

ಇವರು ಅಮೆರಿಕದ ಕಪ್ಪು ವರ್ಣೀಯರಲ್ಲ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಮಲಾರನ್ನು ನಿಂದಿಸುತ್ತಿದ್ದಾರೆ. ಭಾರತೀಯ ಮೂಲದ ತಾಯಿ ಹಾಗೂ ಜಮೈಕಾ ಮೂಲದ ತಂದೆಗೆ ಜನಿಸಿದ ಕಮಲಾರನ್ನು ಅಮೆರಿಕದ ಕಪ್ಪು ವರ್ಣೀಯರಲ್ಲ ಎಂದು ಉಲ್ಲೇಖೀಸಿ ಮಾಡಿದ ಟ್ವೀಟ್‌ ಒಂದು ಬಾರಿ ರಿಟ್ವೀಟ್‌ ಆಗಿದೆ. ಇದಕ್ಕೆ ಕಮಲಾ ಪ್ರತಿಕ್ರಿಯಿಸಿದ್ದು, ಅಮೆರಿಕದ ಕಪ್ಪು ವರ್ಣೀಯರನ್ನು ದುರ್ಬಳಕೆ ಮಾಡಿಕೊಳ್ಳುವ ಇವರ ಬಗ್ಗೆ ನನಗೆ ಜಿಗುಪ್ಸೆ ಮೂಡಿದೆ. ಇದು ತುಂಬಾ ಅಸಹ್ಯಕರ ಎಂದು ಹೇಳಿದ್ದಾರೆ. ಕಮಲಾರನ್ನು ನಿಂದಿಸಿದ ಟ್ವೀಟನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪುತ್ರ ಕೂಡ ರೀಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next