Advertisement

ಪ್ರೇಮ್‌ ಚಿತ್ರಕ್ಕೆ ರಚಿತಾರಾಮ್‌ ನಾಯಕಿ

12:29 PM Jun 11, 2019 | Lakshmi GovindaRaj |

ನಟಿ ರಚಿತಾರಾಮ್‌ ಈಗ ಮತ್ತೊಂದು ಚಿತ್ರ ಒಪ್ಪಿಕೊಂಡಿದ್ದಾರೆ. ಸದ್ಯ ಒಂದೆರೆಡು ಚಿತ್ರಗಳಲ್ಲಿ ಬ್ಯುಝಿಯಾಗಿದ್ದಾರೆ. ಈ ನಡುವೆ ಅವರು ಉಪೇಂದ್ರ ಅವರ ಜೊತೆ ಅಭಿನಯಿಸಿರುವ “ಐ ಲವ್‌ ಯು’ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಅದರ ಬೆನ್ನಲ್ಲೇ ಅವರು ಈಗ “ಜೋಗಿ’ ಪ್ರೇಮ್‌ ನಿರ್ದೇಶನದ ಮತ್ತು ರಕ್ಷಿತಾ ಪ್ರೇಮ್‌ ನಿರ್ಮಾಣದ “ಏಕಲವ್ಯ'(ಏಕ್‌ ಲವ್‌ ಯಾ) ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

Advertisement

ಈ ಚಿತ್ರದಲ್ಲಿ ರಕ್ಷಿತಾ ಪ್ರೇಮ್‌ ಅವರ ಸಹೋದರ ರಾಣಾ ನಾಯಕರಾಗಿ ನಟಿಸುತ್ತಿದ್ದಾರೆ. ಇದು ಅವರ ಮೊದಲ ಚಿತ್ರ. ಇತ್ತೀಚೆಗೆ ಚಿತ್ರದ ಮುಹೂರ್ತ ನೆರವೇರಿತ್ತು. ಆದರೆ, ಚಿತ್ರದ ನಾಯಕಿ ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಈಗ ರಚಿತಾರಾಮ್‌ ಚಿತ್ರದ ವಿಶೇಷ ಪಾತ್ರದಲ್ಲಿ ಮಿಂಚಲಿದ್ದಾರೆ ಎನ್ನಲಾಗಿದ್ದು, ಅದೊಂದು ಟಾಮ್‌ಬಾಯ್‌ ರೀತಿಯ ಪಾತ್ರವಂತೆ.

ಈ ಹಿಂದೆ ರಚಿತಾರಾಮ್‌ ಅವರು ಪ್ರೇಮ್‌ ನಿರ್ದೇಶನದ “ದಿ ವಿಲನ್‌’ ಚಿತ್ರದ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದರು. ಆ ಸಮಯದಲ್ಲೇ ಪ್ರೇಮ್‌ ಜೊತೆ ಇನ್ನೊಂದು ಚಿತ್ರದಲ್ಲಿ ಕೆಲಸ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು ರಚಿತಾ. ಈಗ ರಕ್ಷಿತಾ ಪ್ರೇಮ್‌ ನಿರ್ಮಾಣದ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅವರಿಗೆ ಇಲ್ಲೊಂದು ಹೊಸ ತರಹದ ಪಾತ್ರ ಸಿಕ್ಕಿರುವುದು ಸಹಜವಾಗಿಯೇ ಖುಷಿಯಾಗಿದೆಯಂತೆ.ಇನ್ನು, ಜೂನ್‌ ಅಂತ್ಯದಲ್ಲಿ ರಚಿತಾರಾಮ್‌ ಅವರು “ಏಕಲವ್ಯ'(ಏಕ್‌ ಲವ್‌ ಯಾ) ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಸುದ್ದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next