Advertisement

ರವಿಚಂದ್ರನ್‌ ಸಿನ್ಮಾದಲ್ಲಿ ರಚಿತಾ ರಾಮ್‌

09:53 AM Jan 01, 2020 | Lakshmi GovindaRaj |

ರವಿಚಂದ್ರನ್‌ ನಿರ್ದೇಶನದ “ರವಿ ಬೋಪಣ್ಣ’ ಚಿತ್ರದಲ್ಲಿ ಸುದೀಪ್‌ ಅತಿಥಿ ನಟರಾಗಿ ನಟಿಸಿದ್ದು ಗೊತ್ತೇ ಇದೆ. ಈಗ ಈ ಚಿತ್ರಕ್ಕೆ ರಚಿತಾರಾಮ್‌ ಅವರ ಎಂಟ್ರಿಯಾಗಿದೆ. ಹೌದು, “ರವಿ ಬೋಪಣ್ಣ’ ಚಿತ್ರದಲ್ಲಿ ರಚಿತಾರಾಮ್‌ ನಟಿಸುತ್ತಿದ್ದು, ಅದೊಂದು ವಿಶೇಷ ಪಾತ್ರ ಎನ್ನಲಾಗಿದೆ. ರಚಿತಾರಾಮ್‌ ಅವರಿಲ್ಲಿ ನಟನೆ ಮಾಡುತ್ತಿದ್ದಾರಾ ಅಥವಾ ಹಾಡೊಂದಕ್ಕೆ ಹೆಜ್ಜೆ ಹಾಕುತ್ತಿದ್ದಾರಾ ಎಂಬುದು ಸಸ್ಪೆನ್ಸ್‌. ಆ ಬಗ್ಗೆ ತಿಳಿದುಕೊಳ್ಳಲು ಸಿನಿಮಾ ಬರುವವರೆಗೂ ಕಾಯಬೇಕು.

Advertisement

ಈ ಚಿತ್ರಕ್ಕೆ ಕಾವ್ಯಾಶೆಟ್ಟಿ ನಾಯಕಿಯಾಗಿದ್ದಾರೆ. ಇನ್ನೊಬ್ಬ ನಾಯಕಿ ಸಂಚಿತಾ ಪಡುಕೋಣೆ ಕೂಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರವಿಚಂದ್ರನ್‌ ಅವರು ಈ ಚಿತ್ರವನ್ನು “ರವಿ’ ಎಂಬ ಹೆಸರಿನಲ್ಲಿ ಶುರುಮಾಡಿದ್ದರು. ಅಷ್ಟೇ ಅಲ್ಲ, ಏಳು ದಿನಗಳ ಕಾಲ ಚಿತ್ರೀಕರಣ ಕೂಡಾ ಮಾಡಿದ್ದರು. ಆದರೆ, ಅದು ರವಿಚಂದ್ರನ್‌ ಅವರಿಗೆ ಅದೇಕೋ ತೃಪ್ತಿಯಾಗಲಿಲ್ಲ. ಜೊತೆಗೆ ರವಿಚಂದ್ರನ್‌ ಅವರ ಗಡ್ಡದ ಗೆಟಪ್‌ ವಿಶೇಷವಾಗಿತ್ತು. ಎಲ್ಲರೂ ಗಡ್ಡದ ಬಗ್ಗೆ ಮಾತನಾಡಿದ್ದೇ ತಡ, “ರವಿ ಬೋಪಣ್ಣ’ ಎಂಬ ಹೆಸರಿನೊಂದಿಗೆ ಹೊಸದಾಗಿ ಚಿತ್ರೀಕರಣ ಶುರು ಮಾಡಿದ್ದಾರೆ.

ಅಂದಹಾಗೆ, ಇದು ಸೈಬರ್‌ ಕ್ರೈಮ್‌ ಸುತ್ತ ನಡೆಯುವ ಕಥೆಯಾಗಿದ್ದು, ರವಿಚಂದ್ರನ್‌ ಇಲ್ಲಿ ಸೈಬರ್‌ ಸೆಲ್‌ನ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಚಿತ್ರದಲ್ಲಿ ಸ್ನೇಹಕ್ಕೂ ಹೆಚ್ಚಿನ ಮಹತ್ವವಿದೆಯಂತೆ. ಇದು ಸ್ಕ್ರೀನ್‌ಪ್ಲೇ ಮೇಲೆ ನಿಂತಿರುವ ಸಿನಿಮಾ ಆಗಿದ್ದು, “ದೃಶ್ಯ-2′ ತರಹದ ಫೀಲ್‌ ಕೊಡಲಿದೆ ಎಂಬುದು ಚಿತ್ರತಂಡದ ಮಾತು. ಚಿತ್ರದಲ್ಲಿ ರವಿಚಂದ್ರನ್‌ ಅವರು ಎರಡು ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಸೀತಾರಾಮ್‌ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next