ನಟಿ ರಚಿತಾ ರಾಮ್ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ, “ನಾನುಫುಲ್ ಥ್ರಿಲ್ ಆಗಿದ್ದೇನೆ ‘ ಎಂದು ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಅಂದ ಹಾಗೆ, ರಚಿತಾ ರಾಮ್ ಹೀಗೆ ಥ್ರಿಲ್ ಆಗೋದಕ್ಕೆ ಕಾರಣ ಅವರ ಸೋದರಿ ನಿತ್ಯಾ ರಾಮ್ ಕಾರಣವಂತೆ.
ಹೌದು, ಸುಮಾರು ಒಂದೂವರೆ ವರ್ಷದ ಹಿಂದೆ ರಚಿತಾ ರಾಮ್ ಸೋದರಿ ನಿತ್ಯ ರಾಮ್ ಮದುವೆಯಾಗಿ ವಿದೇಶಕ್ಕೆ ಪ್ರಯಣ ಬೆಳೆಸಿದ್ದರು. ಅದಾದ ಬಳಿಕ ರಚಿತಾ ತನ್ನಪ್ರೀ ತಿಯ ಸೋದರಿಯನ್ನು ತುಂಬ ಮಿಸ್‌ಮಾಡಿಕೊಳ್ಳುತ್ತಿದ್ದರಂತೆ. ಇದೀಗ ಹಬ್ಬದ ಸಂದರ್ಭದಲ್ಲಿನಿ ತ್ಯಾ ರಾಮ್ ಮತ್ತೆ ತವರಿಗೆ ಆಗಮಿಸಿದ್ದು, ಅಕ್ಕತಂಗಿಯರು ಮತ್ತೆ ಒಂದಾಗಿದ್ದಾರೆ.
ಇದನ್ನೂ ಓದಿ:ಶ್ರುತಿ ಹರಿಹರನ್ ಹೊಸ ಇನ್ನಿಂಗ್ಸ್
ಈ ಖುಷಿಯನ್ನುತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ರಚಿತಾ, “ನಾನು ಎಷ್ಟು ಥ್ರಿಲ್‌ಆಗಿದ್ದೇನೆ” ಎಂದು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ಮತ್ತೆ ನಾವಿಬ್ಬರು ಒಂದಾಗಿದ್ದೇವೆ.ಈ ಖುಷಿಯಿಂದ ನನ್ನ ಹೃದಯಕರಗಿದೆ’ ಎಂದು ಬರೆದುಕೊಂಡಿದ್ದಾರೆ.
ಅಲ್ಲದೆ “ವೈ ದಿಸ್‌ಕೊಲವೆರಿ ಡಿ’ ಸಾಂಗ್‌ಗೆ ಇಬ್ಬರು ಎಕ್ಸ್‌ಪ್ರೆಶನ್ ಕೊಟ್ಟಿರುವ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ.