Advertisement

ಲವ್‌ ಮಾಕ್ಟೇಲ್‌-2 ಗೆ ಬಂದ ರಚೆಲ್‌

01:34 PM Oct 16, 2020 | Suhan S |

“ಮದರಂಗಿ’ಕೃಷ್ಣ ನಿರ್ದೇಶಿಸಿ, ನಟಿಸಿರುವ “ಲವ್‌ ಮಾಕ್ಟೇಲ್‌’ ಚಿತ್ರ ಹಿಟ್‌ ಆಗಿದ್ದು ಗೊತ್ತೇ ಇದೆ. ಅದೇ ಖುಷಿಯಲ್ಲಿ ಚಿತ್ರತಂಡ “ಲವ್‌ ಮಾಕ್ಟೇಲ್‌-2′ ಆರಂಭಿಸಿದೆ. ಈಗಾಗಲೇ ಶೇ50ರಷ್ಟು ಚಿತ್ರೀಕರಣವನ್ನೂ ಮುಗಿಸಿದೆ. ಈಗ ಚಿತ್ರತಂಡಕ್ಕೆ ಹೊಸ ಸೇರ್ಪಡೆಯಾಗಿದೆ.  ಅದು ನಾಯಕಿ.

Advertisement

ಹೌದು, ಚಿತ್ರದಲ್ಲಿ ನಾಯಕಿಯ ಆಯ್ಕೆಯಾಗಿರಲಿಲ್ಲ. ಈಗ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆ. ಆಕೆ ರಚೆಲ್‌ ಡೇವಿಡ್‌. ರಚೆಲ್‌ ಈಗಾಗಲೇ ಹಲವು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ “ಲವ್‌ ಮಾಕ್ಟೇಲ್‌ -2′ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ. “ಈಗಾಗಲೇ ನಾವು ಶೇ50ರಷ್ಟು ಚಿತ್ರೀಕರಣ ಮುಗಿಸಿದ್ದೇವೆ. ನಾಯಕಿ ಸಿಕ್ಕಿದ್ದರೆ ಇಷ್ಟೊತ್ತಿಗೆ ಪೂರ್ತಿ ಚಿತ್ರೀಕರಣವೇ ಮುಗಿದು ಹೋಗುತ್ತಿತ್ತು’ ಎನ್ನುವುದು ಕೃಷ್ಣ ಅವರ ಮಾತು. ಚಿತ್ರದಲ್ಲಿ ಮೊದಲ ಭಾಗದಲ್ಲಿ ಪ್ರಮುಖ ಪಾತ್ರ ಮಾಡಿದ ಬಹುತೇಕ ಪಾತ್ರಗಳು ಇಲ್ಲೂ ಮುಂದುವರೆಯಲಿದೆಯಂತೆ. ­

ಓಟಿಟಿಯಲ್ಲಿಕದ್ದು ಮುಚ್ಚಿ :

ಕಿರುತೆರೆ ನಟ ವಿಜಯ್‌ ಸೂರ್ಯ ಹಿರಿತೆರೆಯಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದ “ಕದ್ದುಮುಚ್ಚಿ’ ಚಿತ್ರ ತೆರೆಗೆ ಬಂದಿದ್ದು ನೆನಪಿರಬಹುದು. ಲವ್‌ಕಂ ಫ್ಯಾಮಿಲಿ ಸೆಂಟಿಮೆಂಟ್‌ ಕಥಾಹಂದರ ಹೊಂದಿದ್ದ ಈ ಚಿತ್ರ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದರೂ, ಥಿಯೇಟರ್‌ ಸಮಸ್ಯೆ ಮತ್ತಿತರಕಾರಣಗಳಿಂದ ಬಾಕ್ಸಾಫೀಸ್‌ನಲ್ಲಿ ದೊಡ್ಡಮಟ್ಟದ ಗೆಲವುಕಂಡಿರಲಿಲ್ಲ. ಈಗ ಇದೇ ಚಿತ್ರ ಮತ್ತೆ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದೆ.

ಹೌದು, ಕೌಟುಂಬಿಕ ಕಥಾಹಂದರ ಮತ್ತು ವಿಜಯ್‌ ಸೂರ್ಯ ಅವರ ನಟನೆಯಿಂದಾಗಿ ಈ ಚಿತ್ರದ ಹಕ್ಕುಗಳನ್ನು ಖರೀದಿಸಿರುವ ಅಮೆಜಾನ್‌ ಸಂಸ್ಥೆ ತನ್ನ ಓಟಿಟಿ ಪ್ಲಾಟ್‌ಫಾರ್ಮ್ನಲ್ಲಿ “ಕದ್ದುಮುಚ್ಚಿ’ ಚಿತ್ರವನ್ನು ಮತ್ತೆ ರಿಲೀಸ್‌ ಮಾಡುತ್ತಿದೆ. ಚಿತ್ರದಲ್ಲಿ ವಿಜಯ್‌ಗೆ ನಾಯಕಿಯಾಗಿ ಮೇಘಶ್ರೀ ಜೋಡಿಯಾಗಿ ಅಭಿನಯಿಸಿದ್ದಾರೆ. ಹಿರಿಯ ನಟ ದೊಡ್ಡಣ್ಣ. ಬಿ.ವಿ ರಾಧ ಮೊದಲಾದವರು ಚಿತ್ರದ ಇತರ ಪ್ರಮುಖಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ವಿ.ಜಿ.ಮಂಜುನಾಥ್‌ಕತೆ ಬರೆದು ನಿರ್ಮಾಣ ಮಾಡಿರುವ ಚಿತ್ರಕ್ಕೆ ವಸಂತ್‌ ರಾಜ್‌ ನಿರ್ದೇಶನವಿದೆ. ಚಿತ್ರದ ಹಾಡುಗಳಿಗೆ ಹಂಸಲೇಖಾ ಸಾಹಿತ್ಯ-ಸಂಗೀತವಿದೆ.­

Advertisement
Advertisement

Udayavani is now on Telegram. Click here to join our channel and stay updated with the latest news.

Next