Advertisement

Devil ಚಿತ್ರದ ನಾಯಕಿ ರಚನಾ ರೈ ಕನಸು ಭಗ್ನ

01:08 PM Jun 17, 2024 | Team Udayavani |

ರಚನಾ ರೈ ಕನಸು ಭಗ್ನವಾಗಿದೆ. ಬಹಳ ಆಸೆಪಟ್ಟು ಒಪ್ಪಿಕೊಂಡ ಚಿತ್ರ “ಡೆವಿಲ್‌’ ಅತಂತ್ರ ಸ್ಥಿತಿಗೆ ಸಿಲುಕಿರುವುದರಿಂದ ಮುಂದೇನು ಎಂಬುದು ಗೊತ್ತಾಗದಂತಾಗಿದೆ.

Advertisement

ತುಳು ಚಿತ್ರ “ಸರ್ಕಸ್‌’ನ ಮೂಲಕ ಚಿತ್ರರಂಗಕ್ಕೆ ಬಂದ ರಚನಾ, ಮೊದಲ ಚಿತ್ರದಲ್ಲೇ ದೊಡ್ಡ ಯಶಸ್ಸನ್ನು ಕಂಡವರು. ಆ ನಂತರ ಕನ್ನಡದಲ್ಲಿ “ಭುವನಂ ಗಗನಂ’, “ಅಶೋಕಾ ಬ್ಲೇಡ್‌’ ಮುಂತಾದ ಚಿತ್ರಗಳಲ್ಲಿ ನಟಿಸಿದರು. ಈ ಚಿತ್ರಗಳಿನ್ನೂ ಬಿಡುಗಡೆಯಾಗುವುದಕ್ಕಿದೆ.  ಈ ಮಧ್ಯೆ, ತಮ್ಮ ವೃತ್ತಿಜೀವನಕ್ಕೆ ದೊಡ್ಡ ಬ್ರೇಕ್‌ ಕೊಡುವಂತ ಅವಕಾಶಕ್ಕಾಗಿ ಕಾಯುತ್ತಿದ್ದ ರಚನಾಗೆ, ದರ್ಶನ್‌ ಅಭಿನಯದ “ಡೆವಿಲ್‌’ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಬಂತು. ಇಂಥದ್ದೊಂದು ಅವಕಾಶ ಬಿಟ್ಟೋರುಂಟೆ ಎಂದು ರಚನಾ ಸಹ ಒಪ್ಪಿಕೊಂಡರು. ಚಿತ್ರತಂಡ ಸಹ ಕಳೆದ ತಿಂಗಳು ರಚನಾ ಅವರನ್ನು ಬರಮಾಡಿಕೊಂಡಿತು.

ದ್ವಿತೀಯ ಹಂತದ ಒಂದೆರಡು ದಿನಗಳ ಚಿತ್ರೀಕರಣ ಆಗುವಷ್ಟರಲ್ಲೇ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದರ್ಶನ್‌ ಅವರನ್ನು ಬಂಧಿಸಲಾಗಿದೆ. ಈಗಾಗಲೇ ನ್ಯಾಯಾಲಯವು ಅವರನ್ನು ಪೊಲೀಸ್‌ ಕಸ್ಟಡಿಗೆ ವಹಿಸಿದ್ದು, ದರ್ಶನ್‌ ಯಾವಾಗ ಬಿಡುಗಡೆ ಆಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಮೂಲಗಳ ಪ್ರಕಾರ, ದರ್ಶನ್‌ ಹೊರಬರುವುದಕ್ಕೆ ಮೂರ್ನಾಲ್ಕು ತಿಂಗಳುಗಳು ಬೇಕು ಎಂದು ಹೇಳಲಾಗುತ್ತಿದೆ. ಆ ನಂತರ ಬಂದರೂ ದರ್ಶನ್‌ ಚಿತ್ರೀಕರಣದಲ್ಲಿ ಭಾಗವಹಿಸುವುದಕ್ಕೆ ಒಂದಿಷ್ಟು ಸಮಯ ಖಂಡಿತಾ ಬೇಕಾಗುತ್ತದೆ. ಆ ನಂತರವೂ ಚಿತ್ರ ಮುಂದುವರೆಯುತ್ತದೋ? ಇಲ್ಲವೋ? ಎಂದು ಈಗಲೇ ಹೇಳುವುದು ಕಷ್ಟ.

ಒಟ್ಟಾರೆ, ಇದರಿಂದ ರಚನಾಗೆ ಭಾರೀ ನಿರಾಸೆಯಾಗಿರುವುದು ಖಂಡಿತಾ, “ಡೆವಿಲ್‌’ ತಮ್ಮ ವೃತ್ತಿಜೀವನಕ್ಕೆ ದೊಡ್ಡ ಬ್ರೇಕ್‌ ನೀಡಬಹುದು ಎಂದು ರಚನಾ ಸಹ ಆಸೆಪಟ್ಟಿದ್ದರು. ಈಗ ಅದೇ ನಿರಾಸೆಯಾಗಿ¨

Advertisement

Udayavani is now on Telegram. Click here to join our channel and stay updated with the latest news.

Next