Advertisement

ರಬಕವಿ-ಬನಹಟ್ಟಿ: ಕಸಾಯಿಖಾನೆ ಮುಚ್ಚಲು ನಗರಸಭೆಯಿಂದ ತೀರ್ಮಾನ

07:22 PM Apr 18, 2022 | Team Udayavani |

ರಬಕವಿ-ಬನಹಟ್ಟಿ: ಸ್ಥಳೀಯ ಬಿಲಾಲ್ ಮಸೀದಿ ಹತ್ತಿರ ಗೋಹತ್ಯೆ ಸೇರಿದಂತೆ ಅನಧಿಕೃತ ಚಟುವಟಿಕೆಗಳು ನಡೆಯುತ್ತಿದ್ದು, ಅಲ್ಲಿಯ ಮೌಂಸದ ಅಂಗಡಿಗಳನ್ನು ನಗರಸಭೆಯು ತನ್ನ ಹತೋಟೆಗೆ ತೆಗೆದುಕೊಳ್ಳುವುದರ ಜೊತೆಗೆ ಕಸಾಯಿ ಖಾನೆಯನ್ನು ಸಂಪೂರ್ಣವಾಗಿ ಮುಚ್ಚುವ ತೀರ್ಮಾನವನ್ನು ಸೋಮವಾರ ನಡೆದ ರಬಕವಿ ಬನಹಟ್ಟಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಯಿತು.

Advertisement

ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಯುನಿಸ್ ಚೌಗಲಾ ಅನಧಿಕೃತ ಚಟುವಟಿಕೆಗಳನ್ನು ನಡೆಸುವವರ ಮೇಲೆ ನಿರ್ದಾಕ್ಷಣ್ಯವಾಗಿ ಕ್ರಮ ತೆಗೆದುಕೊಳ್ಳಿ. ಆದರೆ ಪೂರ್ತಿ ಖಾಸಾಯಿ ಖಾನೆಯನ್ನು ಬಂದು ಮಾಡುವುದು ಸಮಂಜಸವಲ್ಲ ಎಂದು ತಿಳಿಸಿದರು.

ಇಲ್ಲಿ ನಡೆಯುತ್ತಿರುವ ಅನಧಿಕೃತ ಚಟುವಟಿಕೆಗಳಿಂದಾಗಿ ಈ ಪ್ರದೇಶದಲ್ಲಿ ವಾಸಿಸುವ ಜನರಿಗೆ ಬಹಳಷ್ಟು ತೊಂದರೆಯಾಗಿದೆ. ಈ ಕುರಿತು ಅನೇಕ ತಕರಾರುಗಳನ್ನು ಜನರು ನಗರಸಭೆಗೆ ನೀಡಿದ್ದರು. ಅಲ್ಲದೆ ಇಲ್ಲಿ ಗೋಹತ್ಯೆಯನ್ನು ಕೂಡಾ ಮಾಡಲಾಗುತ್ತಿದೆ ಎಂಬ ದೂರುಗಳು ನಗರಸಭೆಗೆ ಬಂದ ಹಿನ್ನೆಲೆಯಲ್ಲಿ ಕಸಾಯಿ ಖಾನೆಗಳನ್ನು ಮುಚ್ಚುವ ತೀರ್ಮಾನವನ್ನು ಕೈಗೊಳ್ಳಲಾಯಿತು ಎಂದು ನಗರಸಭೆಯ ಅಧ್ಯಕ್ಷ ಸಂಜಯ ತೆಗ್ಗಿ ತಿಳಿಸಿದರು.

ಸಭೆಯಲ್ಲಿ ರಬಕವಿಯ 26 ಮತ್ತು ಬನಹಟ್ಟಿಯ 29 ತರಕಾರಿ ಕಟ್ಟೆಗಳ ಬಾಡಿಗೆಯನ್ನು ರೂ. 150 ರಷ್ಟು ಮತ್ತು ಸ್ವಯಃ ಆಸ್ತಿ ತೆರಿಗೆಯನ್ನು ಶೇ. 3 ರಷ್ಟು ಹೆಚ್ಚಳ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ 33 ಕಾಮಗಾರಿಗಳಿಗೆ ಮಂಜೂರಾತಿಯನ್ನು ನೀಡಲಾಯಿತು.  ಸಭೆಯಲ್ಲಿ ನೂತನ ಸ್ಥಾಯಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

Advertisement

ಈ ಸಂದರ್ಭದಲ್ಲಿ ನಗರಸಭೆಯ ಸದಸ್ಯ ಶ್ರೀಶೈಲ ಆಲಗೂರ ಮಾತನಾಡಿ, ಈ ಕುರಿತು ಯಾವುದೆ ಚರ್ಚೆ ಮಾಡದೆ ಮತ್ತು ತಮ್ಮನ್ನು ಗಣನೆಗೆ ತೆಗೆದುಕೊಳ್ಳದೆ ಸ್ಥಾಯಿ ಸಮಿತಿ ನಿರ್ಮಾಣ ಮಾಡಿರುವುದಕ್ಕೆ ವಿರೋಧಿಸಿದರು.

ನಗರ ಸಭೆಯ ವ್ಯಾಪ್ತಿಯಲ್ಲಿ ಬರುವ ಹತ್ತಕ್ಕೂ ಹೆಚ್ಚು ಉದ್ಯಾನವನಗಳು ಖಾಸಗಿಯವರ ಪಾಲಾಗುತ್ತಿವೆ ಎಂದು ವಿರೋಧ ಪಕ್ಷದ ಬಸವರಾಜ ಗುಡೋಡಗಿ ತಿಳಿಸಿದರು.

ಮುಂಬರುವ ದಿನಗಳಲ್ಲಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಉದ್ಯಾನವನಗಳಿಗೆ ಬೇಲಿ ಹಾಕುವುದರ ಜೊತೆಗೆ ಅವುಗಳ ಅಭಿವೃದ್ಧಿಯನ್ನು ಮಾಡಲಾಗುವುದು ಎಂದು ಅಧ್ಯಕ್ಷ ಸಂಜಯ ತೆಗ್ಗಿ ತಿಳಿಸಿದರು. ಸಾರ್ವಜನಿಕ ಉದ್ಯಾನವನ ಅಭಿವೃದ್ಧಿಗೆ ಸಾರ್ವಜನಿಕರ ಸಹಬಾಗಿತ್ವ ಅವಶ್ಯ. ಆ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ ಎಂದು ಪೌರಾಯುಕ್ತ ಶ್ರೀನವಾಸ ಜಾಧವ ಹೇಳಿದರು.

ವೇದಿಕೆಯ ಮೇಲೆ ಉಪಾಧ್ಯಕ್ಷೆ ವಿದ್ಯಾ ಧಬಾಡಿ ಇದ್ದರು.

ಅಧಿಕಾರಿಗಳಾದ ಸುಭಾಸ ಖುದಾನಪುರ, ಬಸವರಾಜ ಶರಣಪ್ಪನವರ, ಎಂ.ಎಂ.ಮುಗಳಖೋಡ, ರಾಜಕುಮಾರ ಹೊಸೂರ, ವೈಶಾಲಿ ಹಿಪ್ಪರಗಿ, ಬಸವರಾಜ ಮಠದ, ಡಿ.ಎಂ.ಡಾಂಗೆ, ಸಂಗೀತಾ ಕೋಳಿ, ಶೋಭಾ ಹೊಸಮನಿ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next