Advertisement

Rabkavi Banhatti: ಆ.18 ರಿಂದ ನೇಕಾರರರಿಂದ ಸಿಎಂಗೆ ಪತ್ರ ಚಳವಳಿ

07:48 PM Aug 17, 2023 | Team Udayavani |

ರಬಕವಿ-ಬನಹಟ್ಟಿ : ರಾಜ್ಯಾದ್ಯಂತ ನೇಕಾರರನ್ನು ಸಂಘಟಿಸುವತ್ತ ನಮ್ಮ ನ್ಯಾಯಪರ ಬೇಡಿಕೆಗಳ ಈಡೇರಿಕೆಗೆ ಎಲ್ಲ ವರ್ಗದ ನೇಕಾರರು ಒಂದೇ ಸೂರಿನಡಿ ಏಕತ್ರವಾಗಬೇಕಿದೆ. ನೇಕಾರರ ಜಾಗೃತಿಗೊಳಿಸಲು ರಾಜ್ಯಮಟ್ಟದಲ್ಲಿ ಸಂಘಟನೆ ಬಲ ಹೆಚ್ಚಿಸಲು ದಿ.18ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ,ನಿಪ್ಪಾಣಿ ತಾಲೂಕಿನ ನೇಕಾರರು ಮಾನಕಾಪುರದಲ್ಲಿ ಸಭೆ ಸೇರಿ ಕೈಮಗ್ಗ ಮತ್ತು ವಿದ್ಯುತ್ ಚಾಲಿತ ಮಗ್ಗಗಳ ನೇಕಾರರ ನ್ಯಾಯಯುತ ಬೇಡಿಕೆಗಳ ಕುರಿತು ಚರ್ಚಿಸಿ ಸ್ಪಷ್ಟ ನಿರ್ಧಾರಕ್ಕೆ ಬರಲಾಗುವುದು. ಶುಕ್ರವಾರದಿಂದ ರಾಜ್ಯದ ಎಲ್ಲ ಪ್ರದೇಶಗಳ ನೇಕಾರರಿಂದ ಮುಖ್ಯಮಂತ್ರಿಗಳಿಗೆ ಪತ್ರ ಚಳವಳಿ ನಡೆಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವನಿಂಗ ಟಿರಕಿ ಹೇಳಿದರು.

Advertisement

ಗುರುವಾರ ಸಂಜೆ ಬನಹಟ್ಟಿಯ ಶ್ರೀಕಾಡಸಿದ್ದೇಶ್ವರ ದೇವಾಲಯದ ಪ್ರಾಂಗಣದಲ್ಲಿ ಕರೆದಿದ್ದ ಸಹಸ್ರಾರು ಸಂಖ್ಯೆಯ ನೇಕಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಜವಳಿ ಉದ್ಯಮವನ್ನು ರಕ್ಷಣೆ ಮಾಡದೇ ಅವಸಾನದತ್ತ ತಳ್ಳುತ್ತಿದೆ. ಮೂಲ ಕಚ್ಚಾವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ನೇಕಾರರಿಗೆ ಹಿಂದಿನ ಸರ್ಕಾರಗಳು ನೀಡಿದ್ದ ರಿಯಾಯತಿ ದರ ವಿದ್ಯುತ್ ಆಕರಣೆ ಕೈ ಬಿಟ್ಟು ಇದೀಗ ಕಂಡರಿಯದ ವಿದ್ಯುತ್‌ಬಿಲ್ ನೀಡುತ್ತಿರುವುದು ನೇಕಾರರಿಗೆ ಭರಿಸಲಾಗುತ್ತಿಲ್ಲ. ಸರ್ಕಾರ ಮತ್ತು ಹೆಸ್ಕಾಂ ಎಷ್ಟೇ ಒತ್ತಡ ಹಾಕಿದರೂ ಯಾವೊಬ್ಬ ನೇಕಾರನೂ ವಿದ್ಯುತ್ ಬಿಲ್ ತುಂಬಬಾರದು. ಸಂಪರ್ಕ ಕಡೊತಕ್ಕೆ ಅವಕಾಶವನ್ನೂ ನೀಡಬಾರದೆಂದು ನೇಕಾರರು ಒಕ್ಕೊರಲಿನ ನಿರ್ಣಯ ಕೈಗೊಂಡರು.

ಇದೇ ದಿ.27 ರಂದು ಬೆಳಗಾವಿ ವಿಭಾಗಮಟ್ಟದ ನೇಕಾರರ ಸಭೆಯನ್ನು ಬನಹಟ್ಟಿಯಲ್ಲಿ ನಡೆಸಲುದ್ದೇಶಿಸಲಾಗಿದೆ. ನಾಡಿನ ಲಕ್ಷಾಂತರ ನೇಕಾರರ ಶಾಶ್ವ ಪರಿಹಾರಕ್ಕಾಗಿ ಮತ್ತು ಕಟ್ಟಕಡೆಯ ನೇಕಾರನಿಗೂ ಸರ್ಕಾರದ ಸಮರ್ಪಕ ಸೌಲಭ್ಯಗಳು ದೊರೆಯಬೇಕೆಂಬ ಉದ್ದೇಶ ಹೊಂದಿದೆ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ದಶಕಗಳ ಕಾಲದ ನಮ್ಮ ಬೇಡಿಕೆಗಳ ಮುಂದಿಟ್ಟುಕೊಂಡು ತಮ್ಮ ಸ್ವಾರ್ಥ ಸಾಧನೆಗೆ ಅದಿಕಾರ ಹಾಗೂ ವ್ಯಾಪಾರೀಕರಣದ ನಾಯಕತ್ವ ಹೊಂದುವ ಇರಾದೆಯಿಂದ ನಮ್ಮ ಪ್ರಾಮಾಣಿಕ ಹೋರಾಟವನ್ನು ಹತ್ತಿಕ್ಕುವ ಹುನ್ನಾರದಲ್ಲಿವೆ. ಇದಕ್ಕೆ ಸೊಪ್ಪು ಹಾಕದೇ ನಮ್ಮದೇ ಬಸ್‌ಚಾರ್ಜ, ನಮ್ಮದೇ ಬುತ್ತಿ ಉಕ್ತಿಯಲ್ಲಿ ನಮ್ಮ ಹಕ್ಕೊತ್ತಾಯಗಳ ಈಡೇರಿಕೆಗೆ ಗಟ್ಟಿಯಾದ ಹೋರಾಟ ನಡೆಯುತ್ತಿದೆ. ಅಂದಿನ ಉಪಮುಖ್ಯಮಂತ್ರಿಗಳಾಗಿದ್ದ ಸಿದ್ಧರಾಮಯ್ಯನವರು ಸದ್ಯ ಮುಖ್ಯಮಂತ್ರಿಗಳಾಗಿದ್ದರೂ ನೇಕಾರರ ಹಕ್ಕುಗಳನ್ನು ಸಂರಕ್ಷಿಸುವಲ್ಲಿ ವಿಫಲವಾಗಿದ್ದಾರೆ. ಭರವಸೆ ಹೊರತಾಗಿ ನೇಕಾರರ ಬದುಕಿಗೆ ಭದ್ರತೆ ನೀಡುವುದು ಸರ್ಕಾರಗಳ ಹೊಣೆಗಾರಿಕೆಯಾಗಿದೆ. ಹೋರಾಟವನ್ನು ಬಲಿಷ್ಠಗೊಳಿಸಲು ರಾಜ್ಯಾದ್ಯಂತ ನೇಕಾರರು ಸಂಘಟಿತರಾಗಿ ಹೋರಾಟ ನಡೆಸಲು ಮುಂದಾಗಬೇಕು ಎಂದು ಟಿರಕಿ ಕರೆ ನೀಡಿದರು.

ಈ ಸಂದರ್ಭದಲ್ಲಿ ಸಂಗಪ್ಪ ಉದಗಟ್ಟಿ, ಲಕ್ಕಪ್ಪ ಪವಾರ, ಆನಂದ ಜಗದಾಳ, ಮಹಾದೇವ ನುಚ್ಚಿ, ಆನಂದ ಜೀರಗಾಳ, ಅಶೋಕ ಕರ್ಲಟ್ಟಿ, ಆನಂದ ಬಾಣಕಾರ, ಕಾಡಪ್ಪ ಕೊಕಟನೂರ, ಬಸು ಚಿಂಚಖಂಡಿ ಸೇರಿದಂತೆ ರಬಕವಿ-ಬನಹಟ್ಟಿ, ರಾಮಪೂರ, ಹೊಸೂರ, ಆಸಂಗಿ, ಹುನ್ನೂರ, ಮಹಾಲಿಂಗಪುರ, ತೇರದಾಳದ ಸಾವಿರಾರು ನೇಕಾರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next