ರಬಕವಿ-ಬನಹಟ್ಟಿ : ಧಾರ್ಮಿಕ ಕ್ಷೇತ್ರಗಳ ಆವರಣಗಳನ್ನು ಸ್ವಚ್ಛಮಾಡುವ ಮೂಲಕ ಸಾರ್ವಜನಿಕವಾಗಿ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ. ಪಟ್ಟಣಗಳ ಸ್ವಚ್ಛವಾಗಿರಲು ಜನರಲ್ಲಿ ಸ್ವಚ್ಛತೆಯ ಪರಿಕಲ್ಪನೆ ಮೂಡಿಸಬೇಕಾಗಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.
ಭಾನುವಾರ ರಬಕವಿಯ ಮಲ್ಲಿಕಾರ್ಜುನ ಅವರು, ಬನಶಂಕರಿ, ಮಹಾದೇವರ ದೇವಸ್ಥಾನ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು. ಅಯ್ಯೋದೆಯಲ್ಲಿ ಇದೇ ಜ. 22 ರಂದು ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಜ. 22 ರವರೆಗೆ ದೇವಸ್ಥಾನ ಹಾಗೂ ಯಾತ್ರಾ ಸ್ಥಳಗಳ ಸ್ವಚ್ಛತೆಗೆ ಕರೆ ನೀಡಿದ್ದು, ಇಂದು ರಬಕವಿಯ ದೇವಸ್ಥಾನಗಳ ಸ್ವಚ್ಛತೆ ಕಾರ್ಯಕೈಗೊಳ್ಳಲಾಗಿದೆ.
ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತೆ ಪಾಲನೆಯೊಂದಿಗೆ ಪಾವಿತ್ರ‍್ಯ ರಕ್ಷಣೆ ಬಗ್ಗೆ ಭಕ್ತರಲ್ಲಿ ಜಾಗೃತಿ ಮೂಡಿಸಬೇಕು. ಅವರು ಶ್ರದ್ಧಾಕೇಂದ್ರಗಳಿಗೆ ಬರುವಾಗ ಮಾನಸಿಕವಾಗಿ ಶುಚಿತ್ವ ಕಾಪಾಡಲು ಸಿದ್ಧರಾಗಬೇಕು. ಎಲ್ಲಾ ಕೇಂದ್ರಗಳಲ್ಲಿ ಶುಚಿತ್ವ ಕಾಪಾಡವ ಬಗ್ಯೆ ಅಲ್ಲಲ್ಲಿ ಫಲಕಗಳನ್ನು ಹಾಕಬೇಕು. ಸಾಕಷ್ಟು ಶೌಚಾಲಯಗಳನ್ನು ನಿರ್ಮಿಸಬೇಕು. ಕಸಕಡ್ಡಿ ಹಾಗೂ ತ್ಯಾಜ್ಯ ಬಿಸಾಡಲು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಈರಣ್ಣ ಚಿಂಚಖಅಡಿ, ಮಹಾದೇವ ಕೋಟ್ಯಾಳ, ಸಂಜಯ ತೆಗ್ಗಿ, ಶಿವಾನಂದ ಗಾಯಕವಾಡ, ಶಿವಾನಂದ ಬಾಗಲಕೋಟಮಠ, ಶಿವಾನಂದ ಬುದ್ನಿ, ಶ್ರೀನಿವಾಸ ಹಳ್ಯಾಳ, ಶಂಕರಗುರು ಶೀಲವಂತ, ಮಹಾದೇವ ಪಾಲಬಾಂವಿ, ರವಿ ಕೊರ್ತಿ, ಡಾ. ಸಂಗಮೇಶ ಹತಪಾಕಿ, ಮಹಾದೇವ ಆಲಕನೂರ, ಅರುಣ ಬುದ್ನಿ, ಯಲ್ಲಪ್ಪ ಕಟಗಿ, ರವಿ ದೇಸಾಯಿ, ಸುನೀಲ ಮಮದಾಪೂರ, ಪ್ರವೀಣ ದಭಾಡಿ, ಅಶೋಕ ಹಳ್ಳೂರ, ಬಾಬು ಮಹಾಜನ, ಇನೂಸ್ ಚೌಗಲಾ, ಗಂಗಪ್ಪ ಹುಕ್ಕೇರಿ, ಸವಿತಾ ಹೊಸೂರ, ಬೆನಕಪ್ಪ ಬೇಕ್ಕೆರಿ, ಶ್ರೀಶೈಲ ಮೂಲಿಮನಿ ಸೇರಿದಂತೆ ಅನೇಕರು ಇದ್ದರು.