Advertisement

ರಬಕವಿ-ಬನಹಟ್ಟಿ: ಮೊಹರಂ ಡೋಲಿಗಳಿಗೆ ಹಿಂದೂ ಮಹಿಳೆಯರಿಂದ ಪೂಜೆ

10:00 PM Jul 28, 2023 | Team Udayavani |

ರಬಕವಿ-ಬನಹಟ್ಟಿ: ಭಾವೈಕ್ಯತೆಯ ಸಂಕೇತ ಸಾರುವ ಮೊಹರಂ ಹಬ್ಬವು ನಗರದಲ್ಲಿ ಸಂಭ್ರಮ ಸಡಗರದಿಂದ ನಡೆಯುತ್ತಿದೆ. ಶನಿವಾರ ಮೊಹರಂ ಹಬ್ಬದ ಕೊನೆಯ ದಿನವಾಗಿದೆ.

Advertisement

ಮೊಹರಂ ಹಬ್ಬದ ಅಂಗವಾಗಿ ಇಲ್ಲಿನ ಸೋಮವಾರಪೇಟೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಡೋಲಿಗಳಿಗೆ ಹಿಂದೂ ಮಹಿಳೆಯರು ಪೂಜೆ ಸಲ್ಲಿಸಿ ಭಾವೈಕ್ಯತೆಯನ್ನು ಸಾರಿದರು.

ಮಹಿಳೆಯರು ಡೋಲಿಗಳ ಮುಂದೆ ಕುಳಿತು ಪೂಜಿಸಿ, ಅಗರಬತ್ತಿ ಮತ್ತು ಗಂಧವನ್ನು ಬೆಳಗಿದರು. ನಂತರ ಮೊಹರಂ ಹಬ್ಬದ ಅಂಗವಾಗಿ ಮನೆಯಲ್ಲಿ ತಯಾರು ಮಾಡಿದ ಮಾದೇಲಿ, ಬೆಲ್ಲ, ಸಕ್ಕರೆ ಮತ್ತು ಚೊಂಗೆಗಳನ್ನು ನೈವೇದ್ಯವಾಗಿ ನೀಡಿದರು.

ಶುಕ್ರವಾರ ಬೆಳಗ್ಗೆಯಿಂದಲೇ ಹಿಂದೂ ಪುರುಷರು ಮತ್ತು ಮಹಿಳೆಯರು ಡೋಲಿಗಳಿಗೆ ಪೂಜೆ ಪುನಸ್ಕಾರ ನೆರವೇರಿಸಿ ನೈವೇದ್ಯ ಸಲ್ಲಿಸಿ ಬರುತ್ತಿರುವುದು ವಿಶೇಷವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next