Advertisement
ರೇಬಿಸ್ ಖಾಯಿಲೆಯು ರೇಬಿಸ್ ಲೈಸಾವೈರಸ್‌ನಿಂದ ಉಂಟಾಗುವಂತಹ ಮಾರಕ ಕಾಯಿಲೆ. ಆದರೆ ರೇಬಿಸ್ ಶಂಕಿತ ಪ್ರಾಣಿಗಳೊಂದಿಗಿನ ಸಂಪರ್ಕವಾದ ವ್ಯಕ್ತಿ ಸರಿಯಾದ ಸಮಯಕ್ಕೆ ಚಿಕಿತ್ಸೆಯನ್ನು ಪಡೆದರೆ c ಕಾಯಿಲೆಯನ್ನು ತಡೆಗಟ್ಟಬಹುದು.
Related Articles
Advertisement
ಆರಂಭಿಕ ರೋಗ ಲಕ್ಷಣಗಳುಆರಂಭಿಕವಾಗಿ ಒಬ್ಬ ರೇಬಿಸ್ ಸೋಂಕಿತ ವ್ಯಕ್ತಿಯಲ್ಲಿ ಜ್ವರ, ನೋವು ಮತ್ತು ಗಾಯದ ಸ್ಥಳದಲ್ಲಿ ಮುಳ್ಳು ಚುಚ್ಚಿದ ಹಾಗೆ ಅಸಾಮಾನ್ಯ ಅಥವಾ ವಿವರಿಸಲಾಗದ ಜುಮ್ಮೆನಿಸುವಿಕೆ ಹಾಗೂ ಸುಡುವ ಸಂವೇದನೆ ಕಂಡುಬರುತ್ತದೆ. ಹಾಗೆಯೇ ಸೋಂಕಿತ ವ್ಯಕ್ತಿಯಲ್ಲಿ ಆತಂಕ ಮತ್ತು ದೇಹಾಲಸ್ಯವು ಕೂಡ ಕಂಡುಬರಬಹುದು. ಸೋಂಕಿತ ವ್ಯಕ್ತಿಯ ಆರೋಗ್ಯದ ಗಂಭೀರ ಚಿಹ್ನೆ ಮತ್ತು ಲಕ್ಷಣಗಳು
ಗೊಂದಲ, ನೀರಿನ ಭಯ (ಹೈಡ್ರೋಫೋಬಿಯಾ), ಗಾಳಿಯ ಭಯ (ಏರೋಫೋಬಿಯಾ) ಮತ್ತು ಹೃದಯ ಮತ್ತು ಉಸಿರಾಟದಲ್ಲಿ ಸ್ತಂಭನ ಉಂಟಾಗಿ ಸಾವು ಸಂಭವಿಸುತ್ತದೆ.
ಪ್ರಾಣಿಯ ಕಡಿತದ ಅನಂತರ ಗಾಯದ ಚಿಕಿತ್ಸೆ ಪ್ರಾಥಮಿಕ ಚಿಕಿತ್ಸೆ: ಗಾಯವನ್ನು ತತ್‌ಕ್ಷಣವೇ ಹರಿಯುವ ನೀರು, ಸೋಪು ಮೂಲಕ ಕನಿಷ್ಠ ಹದಿನೈದು ನಿಮಿಷಗಳ ಕಾಲ ಸ್ವತ್ಛಗೊಳಿಸುವುದರಿಂದ ರೇಬಿಸ್ ವೈರಾಣುಗಳನ್ನು ದೇಹದಿಂದ ನಿಷ್ಕ್ರಿಯಗೊಳಿಸಬಹುದು.
ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳನ್ನು ಪೂರೈಸುವ ಪ್ರಬಲ ಮತ್ತು ಪರಿಣಾಮಕಾರಿ ರೇಬಿಸ್ ಲಸಿಕೆ ಮತ್ತು ಅಗತ್ಯವೆನಿಸಿದರೆ ರೇಬಿಸ್ ಇಮ್ಯೂನೋಗ್ಲೋಬಲಿನ್
ನೀಡಲಾಗುತ್ತದೆ.
ಒಂದು ವೇಳೆ ನಾಯಿ,ಬೆಕ್ಕು, ಹಸುವಿನಂತಹ ಸಾಕು ಪ್ರಾಣಿಗಳಾಗಿದ್ದರೆ, ಅವುಗಳನ್ನು ಪ್ರತ್ಯೇಕವಾಗಿರಿಸಿ ಸರಿಸುಮಾರು ಹತ್ತು ದಿನಗಳ ಕಾಲ ರೇಬಿಸ್ ಸೋಂಕಿನ ಲಕ್ಷಣಗಳನ್ನು ಗಮನಿಸಬಹುದು. ರೇಬಿಸ್ ಶಂಕಿತ ಪ್ರಾಣಿಗಳೊಂದಿಗಿನ ಸಂಪರ್ಕದ ತೀವ್ರತೆಯ ಆಧಾರದ ಮೇಲೆ ಚಿಕಿತ್ಸೆ ಮತ್ತು ರೋಗನಿರೋಧಕವನ್ನು ಈ ಕೆಳಕಂಡಂತೆ ವರ್ಗಿಕರಿಸಲಾಗಿದೆ. ರೇಬೀಸ್ ತಡೆಗಟ್ಟಲು ತೆಗೆದುಕೊಳ್ಳಬಹುದಾದ ಕ್ರಮಗಳು:
ನಿಮ್ಮ ಸಾಕು ಪ್ರಾಣಿಗಳಿಗೆ ನಿಯಮಿತ ಮತ್ತು ನವೀಕೃತ ವ್ಯಾಕ್ಸಿನೇಶನ್(ಲಸಿಕೆ) ನೀಡುವುದು.
ಪ್ರಾಣಿಗಳ ನಿಯಂತ್ರಣಕ್ಕೆ ಇಲಾಖೆಗೆ ಕರೆ ಮಾಡಿ ಮತ್ತು ಲಸಿಕೆ ಹಾಕದ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ನಿಮ್ಮ ನೆರೆಹೊರೆಯ ಎಲ್ಲಾ ಪ್ರಾಣಿಗಳ ಬಗ್ಗೆ ಮಾಹಿತಿ ನೀಡುವುದು.
ಪ್ರಾಣಿಗಳ ಕಡಿತವನ್ನು ಸೋಪ್ ಮತ್ತು ನೀರಿನಿಂದ ತೊಳೆಯಿರಿ.
ರೇಬೀಸ್ ಖಾಯಿಲೆಯ ಚಿಕಿತ್ಸೆಗಾಗಿ ನಿಮ್ಮ ಆರೋಗ್ಯ ಪೂರೈಕೆದಾರರನ್ನು ತಕ್ಷಣ ಸಂಪರ್ಕಿಸಿ.
ಸಾಕು ಪ್ರಾಣಿಗಳನ್ನು ಹೊಂದಿದವರು ಅಥವಾ ಸಾಕು ಪ್ರಾಣಿಗಳನ್ನು ಪಾಲನೆ-ಪೋಷಣೆ ಮಾಡುವವರು ಮುಂಚಿತವಾಗಿ ರೇಬಿಸ್ ಲಸಿಕೆಯನ್ನು ಪಡೆಯುವುದು ಉತ್ತಮ. ಅದರ ವೇಳಾಪಟ್ಟಿ ಈ ಕೆಳಕಂಡಂತಿದೆ, ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದ ರೇಬೀಸ್ ಲಸಿಕೆ ಮತ್ತು ಇಮ್ಯೂನೊಗ್ಲೊಬಲಿನ್ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ (ಕೆ.ಎಂ.ಸಿ.ಮಣಿಪಾಲ) ಯ ತುರ್ತು ಔಷಧ ವಿಭಾಗ (ಎಮರ್ಜೆನ್ಸಿ ವಿಭಾಗ)ದಲ್ಲಿ ಲಭ್ಯವಿರುತ್ತದೆ.
ಡಾ| ವೀಣಾ ಕಾಮತ್ ,
ಪ್ರೊಫೆಸರ್, ಕಮ್ಯೂನಿಟಿ ಮೆಡಿಸಿನ್, ಕೆಎಂಸಿ ಮಣಿಪಾಲ; ಕೊಆರ್ಡಿನೇಟರ್, ಸೆಂಟರ್ ಫಾರ್ ವ್ಯಾಕ್ಸಿನೇಶನ್ ಸ್ಟಡೀಸ್.
ಡಾ| ಚೈತ್ರಾ ಆರ್. ರಾವ್ ,
ಅಸೊಸಿಯೇಟ್ ಪ್ರೊಫೆಸರ್, ಕಮ್ಯೂನಿಟಿ ಮೆಡಿಸಿನ್ ವಿಭಾಗ.
ಡಾ| ಸಂದೇಶ್ ಕುಮಾರ್ ಎಂ.ಆರ್.
ಸೆಂಟರ್ ಫಾರ್ ವ್ಯಾಕ್ಸಿನ್ ಸ್ಟಡೀಸ್ ವಿಭಾಗ.