Advertisement
ಪಾಲಿಕೆಯ 8 ವಲಯಗಳಿಂದ ಒಟ್ಟು 172 ನಾಯಿ ಗಳಿಗೆ ರೇಬಿಸ್ ಸೋಂಕಿನ ಲಕ್ಷ ಣಗಳು ಇರುವ ಶಂಕೆ ಹಿನ್ನೆಲೆಯಲ್ಲಿ ನಾಯಿಗಳ ಮೆದುಳಿನ ಇಪೋ ಕ್ಯಾಂಪಸ್ (ಮೆದು ಳಿನ ದ್ರವಯುಕ್ತ) ಮಾದರಿಯನ್ನು ಹೆಬ್ಬಾಳದ ಪಶು ವೈದ್ಯಕೀಯ ಮಹಾ ವಿದ್ಯಾಲಯದಲ್ಲಿರುವ “ಪ್ರಾಣಿಗಳಲ್ಲಿ ಸೋಂಕು ಪತ್ತೆ’ ಹಚ್ಚುವ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಸಂಶ ಧನೆ ಒಳಪ ಡಿಸಿದ 172 ನಾಯಿಗಳಲ್ಲಿ
Related Articles
Advertisement
ಶೇ.80 ಪ್ರಕರಣದಲ್ಲಿ ಜನರಿಂದ ದೂರು: ರೇಬಿಸ್ ಸೋಂಕಿನ ಲಕ್ಷಣ ಕಂಡು ಬರುವ ನಾಯಿ ಗಳ ಬಗ್ಗೆ ಸಾರ್ವಜನಿಕರೇ ಪಾಲಿಕೆಯ ಪಶು ಪಾಲನಾ ವಿಭಾಗಕ್ಕೆ ಮಾಹಿತಿ ನೀಡುತ್ತಿದ್ದಾರೆ. ಶೇ.80 ಪ್ರಕರಣಗಳಲ್ಲಿ ಜನರೇ ಮಾಹಿತಿ ನೀಡುತ್ತಿದ್ದು, ಈ ಭಾಗದಲ್ಲಿ ಉಳಿದ ನಾಯಿಗಳಿಗೆ ರೇಬಿಸ್ ಚುಚ್ಚು ಮದ್ದು ನೀಡಲಾಗುತ್ತಿದೆ. ಉಳಿದ ಶೇ.20 ಪ್ರಕ ರಣಗಳಲ್ಲಿ ನಾಯಿ ಕಚ್ಚಿದ ಸಂದರ್ಭದಲ್ಲಿ ಜನ ಮಾಹಿತಿ ರವಾನಿಸುತ್ತಿದ್ದಾರೆ.
ಪರೀಕ್ಷೆಗೆ 46 ಸಾವಿರ ರೂ. ವೆಚ್ಚ: ನಗರದಲ್ಲಿರುವ ಶ್ವಾನಗಳ ರೇಬಿಸ್ ಸೋಂಕು ಪರೀಕ್ಷೆ ಮಾಡಲು ಹೆಬ್ಬಾಳದ ಪ್ರಯೋಗಾಲಯವು ತಲಾ ಒಂದು ನಾಯಿಗೆ 300ರೂ. ನಿಗದಿ ಮಾಡಿದ್ದು, ಒಟ್ಟು 172 ನಾಯಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 156 ನಾಯಿಗಳ ಪರೀಕ್ಷೆಗೆ ಪಾಲಿಕೆ 46,800ರೂ. ವೆಚ್ಚ ಮಾಡಲಾಗಿದೆ.
ಪೂರ್ವ ವಲಯದಲ್ಲಿ ಪ್ರಕರಣ ಹೆಚ್ಚು: ರೇಬಿಸ್ ಸೋಂಕು ಪರೀಕ್ಷೆ ಮಾಡುವ ಮೂಲಕ ನಗರದಲ್ಲಿ ರೇಬಿಸ್ ಸೋಂಕಿಗೆ ಕಡಿ ವಾಣ ಹಾಕುವ ಉದ್ದೇಶದಿಂದ ಪಾಲಿಕೆ 2020ರ ಆಗಸ್ಟ್ ನಲ್ಲಿ ಹೆಬ್ಟಾಳದ ಪಶು ವೈದ್ಯ ಕೀಯ ಮಹಾ ವಿದ್ಯಾಲಯದೊಂದಿಗೆ ಒಪ್ಪಂದ ಮಾಡಿ ಕೊಂಡಿತ್ತು. ಕಳೆದ ಆರು ತಿಂಗಳಿಂದ ನಾಯಿಗಳ ಮೆದುಳಿನ ಮಾದರಿಯನ್ನು ಪ್ರಯೋಗಾಲಯಕ್ಕೆ
ಕಳುಹಿಸಲಾಗುತ್ತಿದೆ. ಅಲ್ಲದೆ, ಪಾಲಿಕೆ ಪ್ರತಿ ವರ್ಷ ನಗರದಲ್ಲಿರುವ ನಾಯಿಗಳಿಗೆ ರೇಬಿಸ್ ಚುಚ್ಚು ಮದ್ದು ನೀಡುತ್ತಿದೆ. ಆದರೆ, ಚುಚ್ಚು ಮದ್ದು ನೀಡಿದ ನಾಯಿಗಳ ಗುರುತು ಮಾಡಿದ ಮೇಲೆ ಈ ಹಿಂದೆ ಬಣ್ಣ ಬಳಿಯಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ವರ್ಲ್ಡ್ ವೈಡ್
ವೆಟರ್ನರಿ ಸರ್ವೀಸಸ್ (ಪ ಶು ವೈದ್ಯಕೀಯ ಸೇವಾ ಸಂಸ್ಥೆ)ಯ ಆ್ಯಪ್ ಬಳಸುತ್ತಿದೆ. ಇದರಿಂದ ನಿಖರವಾಗಿ ಎಷ್ಟು ನಾಯಿಗಳಿಗೆ ಚುಚ್ಚು ಮದ್ದು ನೀಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ. ಈ ಆ್ಯಪ್ ಬಳಸಿ ಪಾಲಿಕೆಯ 15 ವಾರ್ಡ್ ಗಳಲ್ಲಿ 10,388ನಾಯಿಗಳಿಗೆ ರೇಬಿಸ್ ಚುಚ್ಚು ಮದ್ದು ನೀಡಲಾಗಿದೆ ಎಂದು ಪಾಲಿಕೆಯ ಪಶು ಪಾಲನಾ ವಿಭಾಗದ ಅಧಿಕಾರಿಗಳು “ಉದಯವಾಣಿ ‘ಗೆ ತಿಳಿಸಿದರು.
ಪೂರ್ವವಲಯದಲ್ಲಿ ಹೆಚ್ಚು: ಪಾಲಿಕೆಯ ಎಂಟು ವಲಯಗಳಲ್ಲೂ ರೇಬಿಸ್ ಸೋಂಕು ಇರುವ ನಾಯಿಗಳ ಪತ್ತೆ ಮತ್ತು ಪರೀಕ್ಷಾ ಕಾರ್ಯ ನಡೆಯುತ್ತಿದೆ. ಆದರೆ, ಪೂರ್ವ ವಲಯದಲ್ಲಿ ಹೆಚ್ಚು ರೇಬಿಸ್ ಸೋಂಕು ಪ್ರಕರಣಗಳು ದೃಢ ಪಟ್ಟಿವೆ. ಪೂರ್ವ ವಲಯದಲ್ಲಿ ರೇಬಿಸ್ ಶಂಕೆ ಇರುವ 53 ನಾಯಿಗಳ ಮೆದುಳು ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದ ರಲ್ಲಿ 45 ನಾಯಿ ಗಳಿಗೆ ಸೋಂಕು ಇರುವುದು ದೃಢ ಪಟ್ಟಿದೆ.
ರೇಬಿಸ್ ಸೋಂಕು ಇರುವ ನಾಯಿಗಳ ಪತ್ತೆ ಕಾರ್ಯಾಚರಣೆಗೆ ವೇಗ ನೀಡಲಾಗಿದ್ದು, ನಾಯಿಗಳಿಗೆ ರೇಬಿಸ್ ಚುಚ್ಚು ಮದ್ದು ನೀಡುವುದು ಪ್ರಗತಿಯಲ್ಲಿದೆ. ಜಾಗೃತಿಯೂ ಮೂಡಿಸಲಾಗುತ್ತಿದೆ.-ಡಾ.ಸಿ. ಲಕ್ಷ್ಮೀ ನಾರಾಯಣ ಸ್ವಾಮಿ, ಬಿಬಿಎಂಪಿ ಪಶು ಪಾಲನಾ ವಿಭಾಗ (ಜಂಟಿ ನಿರ್ದೇಶಕ)
–ಹಿತೇಶ್ ವೈ