ರಬಕವಿ-ಬನಹಟ್ಟಿ:ಸಮೀಪದ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡುತ್ತಿರುವ ಮಹಿಷವಾಡಗಿ ಸೇತುವೆ ಕಾರ್ಯ ಮೂರು ನಾಲ್ಕುಗಳು ದಿನಗಳಿಂದ ಭರದಿಂದ ಸಾಗಿದೆ.
ರಬಕವಿ ಬನಹಟ್ಟಿ ಹಾಗೂ ಮಹಿಷವಾಡಗಿ ಗ್ರಾಮದ ಜನರು ಸೇತುವೆ ನಿರ್ಮಾಣವನ್ನು ಕಾರ್ಯವನ್ನು ವೇಗವಾಗಿ ಕೈಗೊಳ್ಳಬೇಕು ಎಂದು ಈಚೇಗೆ ಕೃಷ್ಣಾ ನದಿಗೆ ಭೇಟಿ ನೀಡಿ ಪ್ರತಿಭಟನೆ ಮಾಡಿದ್ದು, ಸ್ಥಳೀಯ ಶಾಸಕ ಸಿದ್ದು ಸವದಿಯವರಿಗೆ ಕಾಮಗಾರಿಯನ್ನು ಶೀಘ್ರವಾಗಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.
ಶಾಸಕ ಸಿದ್ದು ಸವದಿ ಪ್ರೊಜೆಕ್ಟ್ ಮ್ಯಾನೇಜರ್ ವೇಣುಗೋಪಾಲ ಜೊತೆಗೆ ದೂರವಾಣಿಯಲ್ಲಿ ಮಾತನಾಡಿ ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತಿದೆ. ನದಿ ಮಧ್ಯ ಭಾಗದಲ್ಲಿರುವ ಕಾರ್ಯವನ್ನು ಕೈಗೊಳ್ಳಬೇಕು ಎಂದು ತಿಳಿಸಿದ್ದರು.
ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಅವರು ಕೂಡಾ ಭೇಟಿ ನೀಡಿ ಅಲ್ಲಿರುವು ಸಿಬ್ಬಂದಿ ವರ್ಗದವರಿಗೂ ಮತ್ತು ವೇಣುಗೋಪಾಲ ಜೊತೆಗೆ ಮಾತನಾಡಿ ಕಾಮಗಾರಿಯ ವೇಗವನ್ನು ಹೆಚ್ಚಿಸಬೇಕು ಎಂದು ತಿಳಿಸಿದ್ದರು. ಪತ್ರಿಕೆ ಕೂಡಾ ಈ ವಿಷಯವನ್ನು ವರದಿ ಮಾಡಿತ್ತು.
ಗುರುವಾರ ಪತ್ರಿಕೆ ಕೃಷ್ಣಾ ನದಿಗೆ ಭೇಟಿ ನೀಡಿದಾಗ ಪ್ರೊಜೆಕ್ಟ್ ವ್ಯವಸ್ಥಾಪಕ ವೇಣುಗೋಪಾಲ ಮಾತನಾಡಿ, ಹದಿನೈದು ದಿನಗಳಲ್ಲಿ ನದಿಯ ಮಧ್ಯ ಭಾಗದಲ್ಲಿ ಪಿಲ್ಲರಗಳನ್ನು ಅಳವಡಿಸುವ ಕಾರ್ಯವನ್ನು ಕೈಗೊಳ್ಳಲಾಗುವುದು. ನದಿಗೆ ನೀರು ಬರುವಷ್ಠರಲ್ಲಿ ಕಾರ್ಯವನ್ನು ಕೈಗೊಳ್ಳಲಾಗುವುದು, ಇನ್ನಷ್ಟು ಕಾರ್ಮಿಕರನ್ನು ಮತ್ತು ಯಂತ್ರೋಪಕರಣಗಳ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿದ್ದೇವೆ. ಐದು ಪಿಲ್ಲರ್ ಅಳವಡಿಕೆಯ ಕಾರ್ಯ ಭರದಿಂದ ಸಾಗಿದೆ ಎಂದು ತಿಳಿಸಿದರು.