Advertisement

Rabakavi-Banahatti: ಯಲ್ಲಟ್ಟಿ ಬಳಿ ಸಿಎನ್‌ಜಿ ಟ್ಯಾಂಕರ್ ಪಲ್ಟಿ

12:02 PM Jan 15, 2025 | Team Udayavani |

ರಬಕವಿ-ಬನಹಟ್ಟಿ: ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಯಲ್ಲಟ್ಟಿ ಬಳಿ ಜ.14ರ ಮಂಗಳವಾರ ರಾತ್ರಿ ರಸ್ತೆ ಬದಿಯ ಮರ ಬಡಿದು ಸಿಎನ್‌ಜಿ ಟ್ಯಾಂಕರ್ ಪಲ್ಟಿಯಾಗಿ ಆತಂಕ ಸೃಷ್ಠಿಯಾಗಿತ್ತು. ಆದರೆ ಯಾವುದೇ ಅನಾಹುತ ನಡೆದಿಲ್ಲ.

Advertisement

ಟ್ಯಾಂಕರ್ ಮಹಾಲಿಂಗಪುರಕ್ಕೆ ಸಿನ್‌ಜಿ ಪೂರೈಸಲು‌ ಹೋಗುತ್ತಿತ್ತೆಂದು ತಿಳಿದು ಬಂದಿದೆ.

ರಾತ್ರಿಯಾದ ಕಾರಣ ಯಾವುದೇ ಕಾರ್ಯಾಚರಣೆ ಮಾಡದೇ ಜ.15ರ ಬುಧವಾರ ಬೆಳಿಗ್ಗೆ ಸ್ಥಳೀಯ ಅಗ್ನಿಶಾಮಕ ದಳದ ತಂಡ ಅದನ್ನು ಕ್ರೇನ್ ಮೂಲಕ ಎತ್ತಿ ನಿಲ್ಲಿಸುವಲ್ಲಿ ಯಶಸ್ವಿಯಾಗಿದೆ.

content-img

ಸ್ಥಳದ ಸುತ್ತಮುತ್ತಲೂ ಯಾವುದೇ ವಾಹನ ಪ್ರವೇಶಕ್ಕೆ ಅವಕಾಶ ನೀಡದೇ ಇದ್ದರಿಂದ ಜಗದಾಳ ಮಾರ್ಗವಾಗಿ ಬಸ್ ಹಾಗೂ ಇತರೆ ವಾಹನಗಳು ಸಂಚರಿಸಿದವು.

Advertisement

ಸ್ಥಳದಲ್ಲಿ ಡಿ.ವೈ.ಎಸ್‌.ಪಿ. ಈ. ಶಾಂತವೀರ, ಸಿ.ಪಿ.ಐ. ಸಂಜೀವ ಬಳಗಾರ, ಪಿ.ಎಸ್‌.ಐ. ಶಾಂತಾ ಹಳ್ಳಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.