Advertisement

Rabakavi-Banahatti: ಹಿಪ್ಪರಗಿ ಜಲಾಶಯಕ್ಕೆ 75460 ಕ್ಯೂಸೆಕ್ ನೀರು

05:20 PM Jul 17, 2024 | Team Udayavani |

ರಬಕವಿ-ಬನಹಟ್ಟಿ: ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಮಳೆಯಾಗುತ್ತಿರುವುದರಿಂದ ಸಮೀಪದ ಕೃಷ್ಣಾನದಿ ತುಂಬಿ ಹರಿಯುತ್ತಿದ್ದು, ಸಮೀಪದ ಹಿಪ್ಪರಗಿ ಜಲಾಶಯಕ್ಕೆ 75460 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ.

Advertisement

ಮಹಾರಾಷ್ಟ್ರದ ರಾಜಾಪೂರ ಜಲಾಶಯದಿಂದ ನೀರು ಭಾರಿ ಮಟ್ಟದಲ್ಲಿ ಕೃಷ್ಣಾ ನದಿಗೆ ಹರಿದು ಬರುತ್ತಿದ್ದು, ಕಳೆದ ಕೆಲ ದಿನಗಳಿಂದ ಉತ್ತಮ ಪ್ರಮಾಣದ ನೀರು ಹರಿದು ಬಂದಿದೆ. ದಿನದಿಂದ ದಿನಕ್ಕೆ ನೀರಿನ ಮಟ್ಟ ಹೆಚ್ಚಳವಾಗುತ್ತಾ ನಡೆದಿದೆ.

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಾದ ಕೊಯ್ನಾ 11 ಮಿ.ಮೀ., ನೌಜಾ 19 ಮಿ.ಮೀ., ಮಹಾಬಳೇಶ್ವರ 35 ಮಿ.ಮೀ.,  ವಾರಣಾ 13 ಮಿ.ಮೀ., ರಾಧಾನಗರಿ 44 ಮಿ.ಮೀ., ದೂಧಗಂಗಾ 20 ಮಿ.ಮೀ. ಮಳೆಯಾಗಿರುವುದರಿಂದ ಹಿಪ್ಪರಗಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರೀದು ಬರುತ್ತಿದೆ.

ಇಂದು ಬುಧವಾರ ಹಿಪ್ಪರಗಿ ಜಲಾಶಯಕ್ಕೆ ಒಟ್ಟು 75460 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 76988 ಕ್ಯೂಸೆಕ್ಸ್ ನೀರನ್ನು ಮುಂದೆ ಹರಿ ಬೀಡಲಾಗುತ್ತಿದೆ. 6 ಟಿಎಂಸಿ ಸಾಮರ್ಥ್ಯದ ಹಿಪ್ಪರಗಿ ಜಲಾಶಯ 2.84 ಟಿಎಂಸಿ ನೀರು ಸಂಗ್ರಹವಿದ್ದು, ನೀರಿನ ಮಟ್ಟ 521.25 ಮೀ. ಇದೆ ಎಂದು ಜಮಖಂಡಿ ವಲಯದ ಉಪವಿಭಾಗಾಧಿಕಾರಿ ಶ್ವೇತಾ ಬೀಡಕರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next