Advertisement

ರಾಜ್ಯದಲ್ಲಿ ಇಂದು 16,436 ಹೊಸ ಕೋವಿಡ್ ಪ್ರಕರಣಗಳು ಪತ್ತೆ : 60 ಮಂದಿ ಬಲಿ

07:52 PM Feb 03, 2022 | Team Udayavani |

ಬೆಂಗಳೂರು : ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಇಳಿಕೆಯಾಗಿದ್ದು ಇಂದು (ಗುರುವಾರ) 16,436 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಬೆಂಗಳೂರು ನಗರದಲ್ಲೇ 6,640 ಪ್ರಕರಣಗಳು ವರದಿಯಾಗಿದೆ ಎಂದು ಅರೋಗ್ಯ ಇಲಾಖೆ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.

Advertisement

ರಾಜ್ಯದ ಪಾಸಿಟಿವಿಟಿ ದರ 11.31% ಆಗಿದ್ದು, 44,819 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಇಂದು 60 ಸೋಂಕಿತರು ಸಾವನ್ನಪ್ಪಿದ್ದು, ಆ ಪೈಕಿ 14 ಮಂದಿ ಬೆಂಗಳೂರಿನವರಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 1,45,204 ಮಂದಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದಾರೆ.

ಇದನ್ನೂ ಓದಿ : ಮದುವೆಯಾಗಿ ಓಡಿ ಹೋಗುವುದೇ ಈಕೆಯ ಕಾಯಕ : 8 ಪುರುಷರಿಗೆ ದೋಖಾ!

Advertisement

Udayavani is now on Telegram. Click here to join our channel and stay updated with the latest news.

Next