Advertisement

ರಬಕವಿ ಬನಹಟ್ಟಿ ನಗರಸಭೆ: ಅಧ್ಯಕ್ಷ ಸಂಜಯ ತೆಗ್ಗಿ, ಉಪಾಧ್ಯಕ್ಷೆ ವಿದ್ಯಾ ಧಬಾಡಿ ಆಯ್ಕೆ

06:02 PM Mar 05, 2022 | Team Udayavani |

ರಬಕವಿ-ಬನಹಟ್ಟಿ: ರಬಕವಿ ಬನಹಟ್ಟಿ ನಗರಸಭೆಯ ಅಧ್ಯಕ್ಷರಾಗಿ ರಬಕವಿಯ ಸಂಜಯ ತೆಗ್ಗಿ ಮತ್ತು ಉಪಾಧ್ಯಕ್ಷೆಯಾಗಿ ಬನಹಟ್ಟಿಯ ವಿದ್ಯಾ ಧಬಾಡಿ ಶನಿವಾರ  ರಬಕವಿ-ಬನಹಟ್ಟಿ ನಗರಸಭೆಯ ಸಭಾ ಭವನದಲ್ಲಿ ನಡೆದ ಚುನಾವಣೆಯಲ್ಲಿ ಆಯ್ಕೆಗೊಂಡರು.

Advertisement

31ಸದಸ್ಯರನ್ನು ನಗರಸಭೆ ಹೊಂದಿದ್ದು, ನಗರಸಭೆಯ ಚುನಾವಣೆಯಲ್ಲಿ ಬಿಜೆಪಿಯಿಂದ ಗೆಲವು ಸಾಧಿಸಿದ್ದ ಸಾವಿತ್ರಿ ಹಕ್ಕಲದಡ್ಡಿ ಮತದಾನದಲ್ಲಿ ಭಾಗವಹಿಸಲಿಲ್ಲ. ಶಾಸಕರ ಮತ ಸೇರಿದಂತೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಸಂಜಯ ತೆಗ್ಗಿ ಅವರಿಗೆ 26 ಮತಗಳು ಬಂದವು. ಕಾಂಗ್ರೆಸ್ ಪಕ್ಷದ ಬಸವರಾಜ ಗುಡೋಡಗಿ ೫ ಮತಗಳನ್ನು ಪಡೆದರು. ಅದೇ ರೀತಿಯಾಗಿ ಉಪಾಧ್ಯಕ್ಷ ಸ್ಥಾನದ ಬಿಜೆಪಿಯ ವಿದ್ಯಾ ಧಬಾಡಿ ಅವರಿಗೆ ೨೬ ಮತ್ತು ಕಾಂಗ್ರೆಸ್ ಪಕ್ಷದ ಸುರೇಖಾ ಮನಗೂಳಿಯವರಿಗೆ ೫ ಮತಗಳು ಬಂದವು. ಅಧ್ಯಕ್ಷರಾಗಿ ಸಂಜಯ ತೆಗ್ಗಿ ಮತ್ತು ಉಪಾಧ್ಯಕ್ಷೆಯಾಗಿ ವಿದ್ಯಾ ಧಬಾಡಿ  ಆಯ್ಕೆಗೊಂಡರು ಎಂದು ಚುನಾವಣಾಧಿಕಾರಿಯಾಗಿದ್ದ, ಜಮಖಂಡಿ ಉಪವಿಭಾಗಾಧಿಕಾರಿ ಡಾ.ಸಿದ್ದು ಹುಲ್ಲೊಳ್ಳಿ ತಿಳಿಸಿದರು.

ನಗರ ಸೌಂದರ್ಯ. ಅಭಿವೃದ್ಧಿಗೆ; ಮಹತ್ವ ನೀಡಿ: ಈ ಸಂದರ್ಭದಲ್ಲಿ ಶಾಸಕ ಸಿದ್ದು ಸವದಿ ಮಾತನಾಡಿ, ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ನಗರಸಭೆಯ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಗರ ಸೌಂದರ್ಯ ಮತ್ತು ಅಭಿವೃದ್ಧಿಗೆ ಮಹತ್ವ ನೀಡಬೇಕು. ಈಗಾಗಲೇ ನಗರಸಭೆಗೆ ರೂ. ೩೦ ಕೋಟಿ ಅನುದಾನ ಬಂದಿದೆ. ಈ ಹಣವನ್ನು ಸಮಪರ್ಕವಾಗಿ ಬಳಸಿಕೊಂಡು ನಗರದ ಅಭಿವೃದ್ಧಿಗೆ ಶ್ರಮಿಸಿ ಎಂದರು.

ಮರ್ಯಾದೆ ಕಳೆದುಕೊಂಡ ಕಾಂಗ್ರೆಸ್: ತೇರದಾಳ ಪುರಸಭೆಯಲ್ಲಿ 23 ಸದಸ್ಯರಲ್ಲಿ ಕಾಂಗ್ರೆಸ್ ಪಕ್ಷದ 10 ಸದಸ್ಯರಿದ್ದರೂ ಚುನಾವಣೆಗೆ ಸ್ಪರ್ಧಿಸದೆ ಸಹಕರಿಸಿದರು. ಆದರೆ ರಬಕವಿ ಬನಹಟ್ಟಿ ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷದ 5 ಸದಸ್ಯರಿದ್ದರೂ ಚುನಾವಣೆಯಲ್ಲಿ ಪಾಲ್ಗೊಂಡು ಹೀನಾಯವಾಗಿ ಪರಾಭವಗೊಂಡು ತಮ್ಮ ಮರ್ಯಾದೆಯನ್ನು ಕಳೆದುಕೊಂಡರು. ಕ್ಷೇತ್ರದಲ್ಲಿ ಬಿಜೆಪಿಯ ಪ್ರಾಭಲ್ಯ ಕಂಡು ಬರುತ್ತದೆ ಎಂದರು.

ಈ ಸಂದರ್ಭದಲ್ಲಿ ಪೌರಾಯುಕ್ತ ಶ್ರೀನಿವಾಸ ಜಾಧವ, ಸಿಪಿಐ ಜಿ.ಕರುಣೇಶಗೌಡ, ಪಿಎಸ್‌ಐ ಸುರೇಶ ಮಂಟೂರ, ಮಹಾಲಿಂಗಪುರದ ಪಿಎಸ್‌ಐ ವಿಜಯ ಕಾಂಬಳೆ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next