Advertisement

150 ಕೋಟಿ ವೆಚ್ಚದಲ್ಲಿ ರಾಯಣ್ಣ ಸೈನಿಕ ಶಾಲೆ

06:24 PM Aug 16, 2021 | Team Udayavani |

ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿರಾಯಣ್ಣನ ಹೆಸರು ಜನ್ಮ ದಿನಾಚರಣೆಗೆಮಾತ್ರ ಸೀಮಿತವಲ್ಲ. ರಾಯಣ್ಣನಹೆಸರಿನ 150 ಕೋಟಿ ರೂ. ವೆಚ್ಚದ ಸೆ„ನಿಕಶಾಲೆ ನಿರ್ಮಾಣ ಮಾಡಲಾಗುತ್ತಿದ್ದು,ಶೀಘ್ರದಲ್ಲೇ ಲೋಕಾರ್ಪಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿಸಚಿವರಾದ ಗೋವಿಂದ ಕಾರಜೋಳಹೇಳಿದರು.

Advertisement

ನಗರದ ಬಸವರಾಜ ಕಟ್ಟಿàಮನಿಸಭಾಂಗಣದಲ್ಲಿ ರವಿವಾರ ಆಯೋಜಿಸಲಾಗಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣಜನ್ಮದಿನ ಆಚರಣೆಯ ಕಾರ್ಯಕ್ರಮದಲ್ಲಿಮಾತನಾಡಿದ ಅವರು, ಕಿತ್ತೂರುಸಂಸ್ಥಾನದ ರಕ್ಷಣೆಗೆ ನಿಂತ ಸಂಗೊಳ್ಳಿರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿದೇಶಕ್ಕಾಗಿ ಪ್ರಾಣವನ್ನು ತ್ಯಾಗ ಮಾಡಿದ್ದಾರೆ.

ದೇಶದಲ್ಲಿ ಸ್ವಾತಂತ್ರÂ ಹೋರಾಟಕ್ಕೆ ಅನೇಕಮಹನೀಯರು ಪ್ರಾಣತ್ಯಾಗ ಮಾಡಿದ್ದು,ಅದರಲ್ಲಿ ರಾಯಣ್ಣ ಪಾತ್ರ ಬಹಳಮಹತ್ವದ್ದಾಗಿದೆ ಎಂದರು.ಕಿತ್ತೂರು ನಾಡನ್ನು ಜಗತ್ತಿಗೆಪರಿಚಯಿಸಿದ ಕೀರ್ತಿ ಸಂಗೊಳ್ಳಿರಾಯಣ್ಣನಿಗೆ ಸಲ್ಲುತ್ತದೆ. ನಾಡಿಗೆರಾಯಣ್ಣನ ಕೊಡುಗೆ ಅಪಾರವಾಗಿದ್ದು,ಭವಿಷ್ಯದಲ್ಲಿ ಅವರನ್ನು ಸದಾಜೀವಂತವಾಗಿರಿಸಲು ನಿರ್ಮಾಣಹಂತದಲ್ಲಿರುವ ಅನೇಕ ಹೊಸ ಶಾಲೆಗಳಿಗೆರಾಯಣ್ಣನ ಹೆಸರು ನಾಮಕರಣಮಾಡಲಾಗುವುದು ಎಂದು ಹೇಳಿದರು.

ರಾಯಣ್ಣನ ಹೆಸರು ಜನ್ಮದಿನಆಚರಣೆಗೆ ಮಾತ್ರ ಸೀಮಿತವಲ್ಲ,ರಾಯಣ್ಣನ ಹೆಸರಿನಲ್ಲಿ 150 ಕೋಟಿರೂಪಾಯಿ ವೆಚ್ಚದಲ್ಲಿ ಸೆ„ನಿಕ ಶಾಲೆನಿರ್ಮಾಣ ಮಾಡಲಾಗುತ್ತಿದೆ.ರಾಯಣ್ಣನ ಜೀವನ ಚರಿತ್ರೆಯುವಪೀಳಿಗೆಯ ಪ್ರೇರಣೆ ಮತ್ತುಶಕ್ತಿ, ಮಕ್ಕಳಲ್ಲಿ ದೇಶಪ್ರೇಮ ಸಾರುವದಂತಕತೆಯಾಗಿದೆ ಎಂದು ಸಚಿವಗೋವಿಂದ ಕಾರಜೋಳ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಮಾತನಾಡಿದ ಶಾಸಕ ಅನಿಲ ಬೆನಕೆ,ಬೆಳಗಾವಿ ಜಿಲ್ಲೆ ವೀರ ಯೋಧರಜನ್ಮಭೂಮಿ.ದೇಶದ ಸೇವೆಗೆ ಅನೇಕಯೋಧರನ್ನು ಈ ನಾಡು ಕೊಡುಗೆಯಾಗಿನೀಡಿದೆ. ರಾಯಣ್ಣನ ಜನ್ಮದಿನದಅಂಗವಾಗಿ ಹುತಾತ್ಮ ಯೋಧರನ್ನುಸ್ಮರಿಸೋಣ. ಅನೇಕ ಹುತಾತ್ಮ ಯೋಧರುಬೆಳಗಾವಿ ಭಾಗದವರಾಗಿದ್ದು,ಪಾರಂಪರಿಕವಾಗಿ ದೇಶ ಸೇವೆ ಎಂಬುದುಈ ಮಣ್ಣಲ್ಲಿ ಹುಟ್ಟಿದ ಪ್ರತಿಯೊಬ್ಬರಎದೆಯಲ್ಲೂ ಇದೆ ಎಂದರು.ಕ್ರಾಂತಿವೀರ ಸಂಗೊಳ್ಳಿ ರಾಯಣ್ಣಪದವಿ ಕಾಲೇಜು ಪ್ರಾಚಾರ್ಯ ಎಂ.ಜಯಪ್ಪ ಮಾತನಾಡಿ, ರಾಯಣ್ಣಹೆಸರಿನಲ್ಲಿ ಸೆ„ನಿಕ ಶಾಲೆ ನಿರ್ಮಾಣಮಾಡುತ್ತಿರುವುದು ಹೆಮ್ಮೆಯ ವಿಷಯ.ಜೊತೆಗೆ ರಾಯಣ್ಣನ ಸಮಾಧಿಯಿರುವನಂದಡಗದಲ್ಲಿ ಚಿತ್ರಕಲೆ, ಶಿಲ್ಪ ಕಲೆಗಳನ್ನುನಿರ್ಮಾಣ ಮಾಡುವುದರ ಮೂಲಕಮ್ಯೂಸಿಯಂ ಮಾಡಲಾಗುವುದುಎಂದರು.

Advertisement

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಎಂ.ಜಿ.ಹಿರೇಮಠ, ಜಿಲ್ಲಾ ಪಂಚಾಯತ್‌ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿದರ್ಶನ್‌. ಹೆಚ್‌.ವಿ ಉಪಸ್ಥಿತರಿದ್ದರು.ಅಪರ ಜಿಲ್ಲಾಧಿಕಾರಿ ಅಶೋಕದುಡಗುಂಟಿ ಸ್ವಾಗತಿಸಿದರು. ಸುನೀತಾದೇಸಾಯಿ ನಿರೂಪಿಸಿದರು. ಕನ್ನಡಮತ್ತು ಸಂಸ್ಕೃತಿ ಇಲಾಖೆಯ ಸಹಾಯಕನಿರ್ದೇಶಕಿ ವಿದ್ಯಾವತಿ ಭಜಂತ್ರಿವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next