Advertisement

ಸಂಗೊಳ್ಳಿ ರಾಯಣ್ಣನ ಮೂರ್ತಿಗೆ ಅಪಮಾನ: ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ

07:00 PM Dec 18, 2021 | Team Udayavani |

ಬಾಗಲಕೋಟೆ (ಕುಳಗೇರಿ ಕ್ರಾಸ್):  ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿಗೆ ಅಪಮಾನ ಮಾಡಿದ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ  ರಾಯಣ್ಣ ಅಭಿಮಾನಿಗಳು ರಾಷ್ಟ್ರೀಯ ಹೆದ್ದಾರಿ ತಡೆದು  ಪ್ರತಿಭಟಿಸಿದರು.

Advertisement

ದಿಢೀರ್  ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆದು  ಟೈಯರ್ ಗೆ ಬೆಂಕಿ ಹಚ್ಚಿ  ಆಕ್ರೋಶ ವ್ಯಕ್ತಪಡಿಸಿದರು.

ಮೇಲಿಂದ ಮೇಲೆ ಬೆಳಗಾವಿಯಲ್ಲಿ ಪುಂಡಾಟಿಕೆ ಮೆರೆಯುತ್ತಿರುವ ಎಂಇಎಸ್ ಸಂಘಟನೇಯನ್ನ ನಿಷೇಧಿಸಬೇಕು ಎಂದು ಆಗ್ರಹಿಸಿದರು.

ನವಿಲುತಿರ್ಥ ಜಲಾಶಯದ ಕಾಡಾ ನಿರ್ಧೇಶಕ ನಾಗಪ್ಪ ಅಡಪಟ್ಟಿ, ಶಶಿ ಉದಗಟ್ಟಿ, ಹನಮಂತ ನರಗುಂದ  ಸೇರಿದಂತೆ ಹಲವು ಮುಖಂಡರು ಮಾತನಾಡಿ ನಮ್ಮ ನೆಲದಲ್ಲಿದ್ದು, ನಮ್ಮ ನೀರನ್ನು ಕುಡಿದು, ನಮ್ಮ ತಾಯಿಗೆ ದ್ರೋಹ ಬಗೆಯುವವರನ್ನು ಏಕೆ ಇಟ್ಟುಕೊಳ್ಳಬೇಕು. ಇದಕ್ಕೆಲ್ಲ ಕಾನೂನು ಕ್ರಮ ಕೈಗೊಳ್ಳಲೇ ಬೇಕು ಎಂದರು

Advertisement

ನಮ್ಮ ತಾಯಿಗೆ ದ್ರೋಹ ಮಾಡಿ, ದೇಶಭಕ್ತ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಅಪಮಾನ ಮಾಡಿದವರನ್ನ ಗಡಿಪಾರು ಮಾಡಬೇಕು ಎಂದು ಮರಾಠಿಗರ ವಿರುದ್ಧ ಘೋಷಣೆ ಕೂಗಿದರು.

ಇನ್ನು ಮುಂದೆ ಇಂಥ ಘಟನೆಗೆ ಅವಕಾಶ ಕೊಡದೆ  ಸರಕಾರ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿ ಗ್ರಾಮದಲ್ಲೂ ಪ್ರತಿಭಟನೆ ನಡೆಸಿ ಆ ಮೂಲಕ ವಿಧಾನಸೌದಕ್ಕೆ ಮುತ್ತಿಗೆ ಹಾಕಿ ಬಿಸಿ ಮುಟ್ಟಿಸಲಾಗುವುದು ಎಂದು  ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next