ಕೆ.ಮಂಜು ಪುತ್ರ ಶ್ರೇಯಸ್ ನಟನೆಯ “ರಾಣ’ ಚಿತ್ರ ನ.11ರಂದು ತೆರೆಕಾಣುತ್ತಿದೆ. ಮೊದಲ ಹಂತವಾಗಿ ಚಿತ್ರತಂಡ ಪ್ರೀ ರಿಲೀಸ್ ಇವೆಂಟ್ ಮಾಡಿ ಸಂಭ್ರಮಿಸಿದೆ. ಶಾಸಕ ರಾಮಲಿಂಗಾರೆಡ್ಡಿ, ನಟರಾದ ಗಣೇಶ್, ಪ್ರೇಮ್, ನೀನಾಸಂ ಸತೀಶ್ ಸೇರಿದಂತೆ ಅನೇಕರು ಈ ಕಾರ್ಯಕ್ರಮದಲ್ಲಿ ಹಾಜರಿದ್ದು, ಚಿತ್ರದ ಹಾಗೂ ನಾಯಕ ಶ್ರೇಯಸ್ ಬಗ್ಗೆ ಮಾತನಾಡಿದರು.
ಈ ಹಿಂದೆ ಟಗರು, ಆ ದೃಶ್ಯ ಚಿತ್ರದಲ್ಲಿ ಎಕ್ಸಿಕ್ಯೂಟಿವ್ ಪ್ರೊಡ್ನೂಸರ್ ಆಗಿ ಕಾರ್ಯ ನಿರ್ವಹಿಸಿದ್ದ ಗುಜ್ಜಲ್ ಪುರುಷೋತ್ತಮ “ರಾಣ’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ಮಾಪಕರಾಗಿ ಬಡ್ತಿ ಪಡೆದಿದ್ದಾರೆ. “ಗುಜ್ಜಲ್ ಟಾಕೀಸ್’ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಿಸಿದ್ದಾರೆ.ಕೆ.ಎಂ.ಪ್ರಕಾಶ್ ಸಂಕಲನ, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಚಿತ್ರಕ್ಕಿದೆ.
ಕನ್ನಡದ ಪ್ರತಿಭೆಗಳಿಗೆ ಹೆಚ್ಚಿನ ಆದ್ಯತೆ ನೀಡಿರುವ ತಂಡ ಅನಿರುದ್ಧ, ಅದಿತಿ ಸಾಗರ್‌ರಂತಹ ಯುವ ಹಾಡುಗಾರರಿಗೆ ಅವಕಾಶ ನೀಡಿದೆ. ಈ ಚಿತ್ರವನ್ನು ನಂದಕಿಶೋರ್ ನಿರ್ದೇಶಿಸಿದ್ದಾರೆ.
“ಸಿನಿಮಾ ನನ್ನ ಉಸಿರು. ಮೂರುವರೆ ವರ್ಷಗಳ(ಪಡ್ಡೆ ಹುಲಿ) ನಂತರ ನನ್ನ ಅಭಿನಯದ ರಾಣ ಸಿನಿಮಾ ನವೆಂಬರ್ 11 ರಂದು ಬಿಡುಗಡೆಯಾಗುತ್ತಿದೆ. ಈ ದಿನಕ್ಕಾಗಿ ನಾನು ಕಾಯುತ್ತಿದ್ದೆ. “ರಾಣ’ ಒಂದು ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ. ಇಡೀ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ಇಂದಿನ ಯೂತ್ಸ್ಗೆ ಈ ಚಿತ್ರ ಇಷ್ಟವಾಗುತ್ತದೆ ಎಂಬ ಭರವಸೆ ಇದೆ. ಇಡೀ ತಂಡದ ಸಹಕಾರದಿಂದ ಒಂದೊಳ್ಳೆಯ ಸಿನಿಮಾ ಮಾಡಲು ಸಾಧ್ಯವಾಯಿತು ಎನ್ನುವುದು ಶ್ರೇಯಸ್ ಮಾತು.