Advertisement

ತೆರೆಯತ್ತ ಹೊಸಬರ ಆರ್‌.ಎಚ್‌. 100

03:40 PM Nov 27, 2020 | Suhan S |

ಲಾಕ್‌ ಡೌನ್‌ ತೆರವಿನ ನಂತರ ಚಿತ್ರಮಂದಿರಗಳು ತೆರೆಯಲು ಅನುಮತಿ ಸಿಗುತ್ತಿದ್ದಂತೆ ಒಂದೊಂದೇ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಈ ಸಾಲಿಗೆ ಆರ್‌.ಎಚ್‌. 100 ಕೂಡಾ ಸೇರುತ್ತದೆ. ಈ ಚಿತ್ರ ಚಿತ್ರಕೂಡ ಡಿಸಂಬರ್‌18ರಂದುಬಿಡುಗಡೆಯಾಗಲಿದೆ. ಹಾರರ್‌ ಕಥಾ ಹಂದರ ಹೊಂದಿರುವ ಈ ಚಿತ್ರದ ಹಾಡುಗಳು ಈಗಾಗಲೇ ಬಿಡುಗಡೆಯಾಗಿವೆ. ಎಸ್‌. ಎಲ್‌. ಎಸ್. ಪ್ರೊಡಕ್ಷನ್ಸ್ ನಡಿ ಹರೀಶ್‌ಕುಮಾರ್‌ ಎಲ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ.

Advertisement

ಮಹೇಶ್‌ ಎಂ ಸಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಮನೋಜ್‌, ಸಿದ್ದುಕೋಡಿಪುರ್‌ ಹಾಡುಗಳನ್ನು ಬರೆದಿದ್ದು, ಮೆಲ್ವಿನ್‌ ಮೈಕಲ್‌ ಸಂಗೀತ ನೀಡಿದ್ದಾರೆ. ಸಂಜಿತ್‌ ಹೆಗ್ಡೆ, ಅನುರಾಧ ಭಟ್, ಸಿದ್ದಾರ್ಥ್ ಬೆಲ್‌ ಮನು ಅವರಕಂಠಸಿರಿಯಲ್ಲಿ ಈ ಚಿತ್ರದ ಹಾಡುಗಳು ಮೂಡಿಬಂದಿದೆ.

ಚಿತ್ರಕ್ಕೆಕೃಷ್ಣ ಛಾಯಾಗ್ರಹಣ, ಸಿ.ರವಿಚಂದ್ರನ್‌ ಸಂಕಲನ ಹಾಗೂ ಕುಂಫ್ಫು ಚಂದ್ರು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಗಣೇಶ್‌, ಹರ್ಷ, ಚಿತ್ರ,ಕಾವ್ಯ, ಸೋಮ್, ಸುಹಿತ್‌ ಮುಂತಾದವರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next