ಹೊಸದಿಲ್ಲಿ: ಅರ್ಧದಲ್ಲಿ ಕೂಟ ತೊರೆದ ಡೆಲ್ಲಿ ಕ್ಯಾಪಿಟಲ್ಸ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತೆ ಐಪಿಎಲ್ ಸೇರಿಕೊಳ್ಳಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಐಪಿಎಲ್ ನ ಅಂತಮ ಚರಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬಳಗಕ್ಕೆ ಅಶ್ವನ್ ಕೂಡಿಕೊಳ್ಳಿದ್ದಾರೆ ಎಂದು ವರದಿಯಾಗಿದೆ.
ತನ್ನ ಮತ್ತು ಪತ್ನಿಯ ಕುಟುಂಬದ ಕೆಲ ಸದಸ್ಯರಿಗೆ ಕೋವಿಡ್ ಪಾಸಿಟಿವ್ ಆದ ಕಾರಣ, ಅಶ್ವಿನ್ ಇತ್ತೀಚೆಗೆ ಕೂಟ ತೊರೆದಿದ್ದರು. ಕುಟುಂಬಕ್ಕೆ ಈಗ ನನ್ನ ಅವಶ್ಯಕತೆ ಹೆಚ್ಚಿದೆ. ಹಾಗಾಗಿ ನಾನು ಅಲ್ಲಿರಬೇಕಾಗುತ್ತದೆ ಎಂದು ಹೇಳಿ ಅಶ್ವಿನ್ ಡೆಲ್ಲಿ ತಂಡ ತೊರೆದಿದ್ದರು.
ಇದನ್ನೂ ಓದಿ:ಜೈಲಿನಿಂದಲೇ ನಾಮಪತ್ರ ಸಲ್ಲಿಸಿ, ಚುನಾವಣೆ ಗೆದ್ದ ಅಖೀಲ್ ಗೊಗೊಯ್
ಸದ್ಯ ಅಶ್ವಿನ್ ಕುಟುಂಬಿಕರ ಆರೋಗ್ಯ ಸ್ಥಿತಿ ಉತ್ತಮವಾಗಿದೆ. ಹೀಗಾಗಿ ಮರಳಿ ತಂಡಕ್ಕೆ ಕೂಡಿಕೊಳ್ಳಲಿದ್ದಾರೆ ಎನ್ನಲಾಗಿದೆ. ಮೇ 11 ರಿಂದ ಕೋಲ್ಕತ್ತಾ ಚರಣ ಆರಂಭವಾಗಲಿದ್ದು, ಇಲ್ಲಿ ಅಶ್ವಿನ್ ಸೇರಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಆದರೆ ಡೆಲ್ಲಿ ಕ್ಯಾಪಿಟಲ್ಸ್ ಹೋಟೆಲ್ ಸೇರಿಕೊಳ್ಳುವ ಮುನ್ನ ಅಶ್ವಿನ್ ಏಳು ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ. ಕ್ವಾರಂಟೈನ್ ಮುಗಿದ ಬಳಿಕ ನೆಗೆಟಿವ್ ವರದಿಯಾದರೆ ಮಾತ್ರ ಅಶ್ವಿನ್ ತಂಡ ಸೇರಿಕೊಳ್ಳಬಹುದು.