ಚೆನ್ನೈ: ರಾಜಸ್ಥಾನ ರಾಯಲ್ಸ್ ತಂಡದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಇಬ್ಬನಿಯ ಕಾರಣ ತಾವಾಗಿಯೇ ಚೆಂಡನ್ನು ಬದಲಾಯಿಸುವ ಅಂಪೈರ್ ಗಳ ನಿರ್ಧಾರದಿಂದ ಗೊಂದಲಕ್ಕೊಳಗಾಗಿದ್ದಾರೆ ಎಂದರು.
ಬುಧವಾರ ರಾತ್ರಿ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಚೇಸಿಂಗ್ ವೇಳೆ ಭಾರೀ ಇಬ್ಬನಿಯ ಕಾರಣದಿಂದ ಅಂಪೈರ್ ಗಳು ಚೆಂಡನ್ನು ಬದಲಾಯಿಸಿದರು.
ಅತಿಯಾದ ಇಬ್ಬನಿಯ ಕಾರಣದಿಂದ ಅಂಪೈರ್ ಗಳು ತಾವಾಗಿಯೇ ಚೆಂಡನ್ನು ಬದಲಾಯಿಸುವುದನ್ನು ಹಿಂದೆಂದೂ ನೋಡಿರಲಿಲ್ಲ ಎಂದು ಸ್ಪಿನ್ನರ್ ಅಶ್ವಿನ್ ಹೇಳಿದ್ದಾರೆ.
“ಅಂಪೈರ್ ಗಳು ತಾವಾಗಿಯೇ ಚೆಂಡನ್ನು ಇಬ್ಬನಿಗಾಗಿ ಬದಲಾಯಿಸಿರುವುದು ನನಗೆ ಆಶ್ಚರ್ಯವಾಗಿದೆ. ಇದು ಹಿಂದೆಂದೂ ನಡೆದಿಲ್ಲ ಇದು ನನಗೆ ಆಶ್ಚರ್ಯ ತಂದಿದೆ. ಪ್ರಾಮಾಣಿಕವಾಗಿ ಹೇಳಬೇಕಾದರೆ ಈ ವರ್ಷದ ಐಪಿಎಲ್ ನಲ್ಲಿನ ಕೆಲವು ನಿರ್ಧಾರಗಳು ನನ್ನನ್ನು ಸ್ವಲ್ಪಮಟ್ಟಿಗೆ ಗೊಂದಲಗೊಳಿಸಿದೆ.” ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
“ಅಂದರೆ, ಇದು ನನ್ನನ್ನು ಒಳ್ಳೆಯ ಅಥವಾ ಕೆಟ್ಟ ರೀತಿಯಲ್ಲಿ ಅಚ್ಚರಿಗೆ ದೂಡಿತು. ಬೌಲಿಂಗ್ ತಂಡವಾಗಿ ನಾವು ಚೆಂಡನ್ನು ಬದಲಾಯಿಸಲು ಕೇಳಲಿಲ್ಲ. ಆದರೆ ಅಂಪೈರ್ ಗಳು ಚೆಂಡನ್ನು ಬದಲಾಯಿಸಿದರು. ನಾನು ಅಂಪೈರ್ ಗೆ ಕೇಳಿದೆ ಮತ್ತು ಅವರು ಹಾಗೆ ಮಾಡಬಹುದು ಎಂದು ಅವರು ಹೇಳಿದರು’’ ಎಂದು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಅಶ್ವಿನ್ ಹೇಳಿದರು.