ಸಿಡ್ನಿ: ಐಸಿಸಿ ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ನಾಯಕ ಮತ್ತು ಕೋಚ್ ಎದುರಿಸುತ್ತಿರುವ ಅತ್ಯಂತ ದೊಡ್ಡ ಆಯ್ಕೆ ಸಂದಿಗ್ಧತೆಗಳಲ್ಲಿ ಸ್ಪಿನ್ನರ್ ಆಗಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವುದು. ರವಿಚಂದ್ರನ್ ಅಶ್ವಿನ್ ಮತ್ತು ಯುಜ್ವೇಂದ್ರ ಚಾಹಲ್ ನಡುವಿನ ಸ್ಪರ್ಧೆಯಲ್ಲಿ ಪಾಕಿಸ್ಥಾನ ವಿರುದ್ಧದ ಮೊದಲ ಪಂದ್ಯದಲ್ಲಿ ಅಶ್ವಿನ್ ಮೇಲಗೈ ಸಾಧಿಸಿದ್ದರು
ಬೌಲಿಂಗ್ ನಲ್ಲಿ ವಿಕೆಟ್ ಲೆಸ್ ಆಗಿದ್ದ ರವಿ ಅಶ್ವಿನ್ ಅವರು ಬ್ಯಾಟಿಂಗ್ ಗೆ ಇಳಿದಾಗ ಭಾರತ ತಂಡವು ಒಂದು ಎಸೆತದಲ್ಲಿ ಎರಡು ರನ್ ಗಳಿಸುವ ಅನಿವಾರ್ಯತೆ ಇತ್ತು. ಈ ವೇಳೆ ಸಮಯಪ್ರಜ್ಞೆ ಮೆರೆದ ಅಶ್ವಿನ್ ಭಾರತದ ಗೆಲುವಿಗೆ ಕಾರಣರಾದರು.
ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ನಲ್ಲಿ 90 ಸಾವಿರಕ್ಕೂ ಹೆಚ್ಚು ಜನರ ಸಮ್ಮುಖದಲ್ಲಿ ಭಾರತಕ್ಕೆ ಒಂದು ಎಸೆತದಲ್ಲಿ ಎರಡು ರನ್‌ಗಳ ಅಗತ್ಯವಿದ್ದಾಗ ಅಶ್ವಿನ್ ಬ್ಯಾಟಿಂಗ್ ಮತ್ತು ಮೊಹಮ್ಮದ್ ನವಾಜ್ ಅವರ ಎಸೆತವನ್ನು ವೈಡ್ ಗೆ ಬಿಟ್ಟು ತಮ್ಮ ಬುದ್ದಿವಂತಿಕೆ ಪ್ರದರ್ಶಿಸಿದರು. ಕೊನೆಯ ಎಸೆತಕ್ಕೆ ಬೌಂಡರಿ ಬಾರಿಸಿ ಭಾರತಕ್ಕೆ ಅಪ್ರತಿಮ ಜಯ ತಂದುಕೊಟ್ಟರು.
ಇದನ್ನೂ ಓದಿ:‘ಖಾಕಿ; ದಿ ಬಿಹಾರ್ ಚಾಪ್ಟರ್’ ಹೊಸ ವೆಬ್ ಸೀರೀಸ್ ಅನೌನ್ಸ್ ಮಾಡಿದ ನೀರಜ್ ಪಾಂಡೆ
ಈ ಬಗ್ಗೆ ಬುಧವಾರ ಹೃಷಿಕೇಶ್ ಕಾನಿಟ್ಕರ್ ಅವರೊಂದಿಗಿನ ಸಂವಾದದಲ್ಲಿ ಮಾತನಾಡಿದ ಅಶ್ವಿನ್, ‘ಒಂದು ವೇಳೆ ನವಾಜ್ ಅವರೆಸೆದ ಚೆಂಡು ತಿರುಗಿ ನನ್ನ ಪ್ಯಾಡ್ ಗೆ ಅಪ್ಪಳಿಸಿದ್ದರೆ, ನಾನು ಡ್ರೆಸ್ಸಿಂಗ್ ರೂಮ್ ಗೆ ಹಿಂತಿರುಗಿ ‘ತುಂಬಾ ಧನ್ಯವಾದಗಳು, ನನ್ನ ಕ್ರಿಕೆಟ್ ವೃತ್ತಿಜೀವನ ಮತ್ತು ಪ್ರಯಾಣ ಅದ್ಭುತವಾಗಿತ್ತು, ಎಲ್ಲರಿಗೂ ಧನ್ಯವಾದಗಳು’ ಎಂದು ವಿದಾಯ ಹೇಳುತ್ತಿದೆ ಎಂದು ನಗುತ್ತಾ ಹೇಳಿದರು.