ಕಾರ್ಕಳ ; ಹಿಜಾಬ್ ವಿಚಾರದಲ್ಲಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಕೋರ್ಟ್ ಆದೇಶ ದಿಕ್ಕರಿಸಿ ಪ್ರತಿಭಟನೆ ನಡೆಸುತ್ತಿರುವುದು ಕಂಡುಬರುತ್ತಿದೆ. ಸರಕಾರ ಪ್ರತಿಭಟನೆಯನ್ನು ಹತ್ತಿಕ್ಕಲು ಸಮರ್ಥ ಆಗಿಲ್ಲ ಎನ್ನುವ ಭಾವನೆ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು, ಪೋಷಕರಲ್ಲಿ ಬೇಡ ಎಂದು ಕಂದಾಯ ಸಚಿವ ಆರ್ ಅಶೋಕ್ ಎಚ್ಚರಿಕೆ ನೀಡಿದರು.
ಕಾರ್ಕಳದಲ್ಲಿ ಬ್ರಹತ್ ಕಂದಾಯ ಮೇಳ ಉದ್ಘಾಟಿಸಿದ ಬಳಿಕ ಪತ್ರಕರ್ತರ ಜೊತೆ ಅವರು ಮಾತನಾಡಿದರು.
ಎಳೆಯ ವಯಸ್ಸಿನ ಮುಗ್ಧ ವಿದ್ಯಾರ್ಥಿಗಳು ಎಂದು ಕಠಿಣ ಕ್ರಮಕ್ಕೆ ಏಕಾಏಕಿ ಮುಂದಾಗಿಲ್ಲ ಮಕ್ಕಳಿಗೆ ತಿಳುವಳಿಕೆ ನಡೆಸಿಯೂ ಅವರು ಪ್ರತಿಭಟನೆ ನಡೆಸುತ್ತಾರೆ ಎಂದಾದರೆ ನಾವು ಸಹ ಕಠಿಣ ಕ್ರಮ ಜರುಗಿಸಲು ಮುಂದಾಗುತ್ತೇವೆ.
ಯಾವ ಬೆದರಿಕೆ, ಪ್ರತಿಭಟನೆ ತಂತ್ರಗಾರಿಕೆಗೆ ಸರಕಾರ ಬಗ್ಗುವುದಿಲ್ಲ . ಹಿಜಾಬ್ ಹಿಂದೆ ಐಎಸ್ ಐ ಸಹಿತ ಕೆಲ ವಿದೇಶಿ ಅಂತಾರಷ್ಟ್ರೀಯ ಮಟ್ಟದ ಮತೀಯ ಸಂಘಟನೆಗಳ ಕೈವಾಡವಿದೆ. ಮುಗ್ಧ ಮಕ್ಕಳನ್ನು ದಾರಿ ತಪ್ಪಿಸುವ ಕೆಲಸ ಆಗುತಿದ್ದು. ಉನ್ನತ ತನಿಖೆಯ ಅಗತ್ಯತೆಯಿದೆ ಎಂದು ಅವರು ಹೇಳಿದರು. ಈ ವೇಳೆ ಸಚಿವ ಸುನಿಲ್ ಕುಮಾರ್ ಉಪಸ್ಥಿತರಿದ್ದರು.
ಇದನ್ನೂ ಓದಿ : ಹಳ್ಳಿ, ಹಳ್ಳಿಗೂ ಹೋಗಿ ಜನರ ಮಧ್ಯೆ ಹೋರಾಟ: ಡಿ.ಕೆ. ಶಿವಕುಮಾರ್