Advertisement

ಶ್ರೀಕಿ ಮೇಲೆ ಕೇಸು ಇದ್ದರೂ ಬಂಧಿಸದೆ ರಕ್ಷಣೆ ಮಾಡಿದ್ದು ಯಾವ ಸರಕಾರ : ಅಶೋಕ್ ಪ್ರಶ್ನೆ

04:53 PM Nov 16, 2021 | Team Udayavani |

ಬೆಂಗಳೂರು : ಈ ಹಿಂದೆ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಶ್ರೀಕಿ ಮೇಲೆ ಕೇಸು ದಾಖಲಾಗಿದ್ದರೂ ಆತನನ್ನು ಬಂಧಿಸದೆ ಕಾಲ ಕಾಲಕ್ಕೆ ಬಿರಿಯಾನಿ ಕೊಟ್ಟು ರಕ್ಷಣೆ ಮಾಡಿದವರು ಯಾರು ಎಂದು ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ಕಿಡಿಕಾರಿದ್ದಾರೆ.

Advertisement

ಬಿಟ್ ಕಾಯಿನ್ ವಿಚಾರದಲ್ಲಿ ಕಾಂಗ್ರೆಸ್ ಮಾಡುತ್ತಿರುವ ಆರೋಪಗಳಿಗೆ ಪ್ರತಿಕ್ರೀಯಿಸಿದ ಅಶೋಕ್ ಬಹಳಷ್ಟು ರಾಜಕಾರಣಿಗಳು ಹಾಗೂ, ಐಎಎಸ್, ಐಪಿಎಸ್ ಅಧಿಕಾರಿಗಳ ಕುಟುಂಬದವರ ಹೆಸರಿನಲ್ಲಿ ಬಿಟ್ ಕಾಯಿನ್ ಅಕೌಂಟ್ ಇದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ ನಾನು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ ಬಿಟ್ ಕಾಯಿನ್ ತನಿಖೆಯನ್ನು ಸಿಓಡಿ ಗೆ ವಹಿಸಲಿ ಅದರಿಂದ ಗೊತ್ತಾಗಲಿ ಬಿಟ್ ಕಾಯಿನ್ ದಂದೆಯಲ್ಲಿ ಯಾರಿದ್ದಾರೆ, ಯಾವ ಖಾತೆಯಿಂದ ಯಾರಿಗೆ ಹಣ ವರ್ಗಾವಣೆಯಾಗಿದೆ ಇದರಿಂದ ಜನರಿಗೆ ಸತ್ಯಾಂಶ ತಿಳಿಯಲಿ. ಪ್ರತೀದಿನ ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ನಿಲ್ಲಿಸಲಿ ಎಂದರು.

ಶ್ರೀಕಿಯನ್ನ 2016-18ರ ವರೆಗೂ ಯಾರು ರಕ್ಷಣೆ ಮಾಡಿದ್ದಾರೆ ಎಂಬುದು ಕಾಂಗ್ರೆಸ್ ತಿಳಿದುಕೊಳ್ಳಲಿ, ಬೊಮ್ಮಾಯಿ ಅವರ ಆಡಳಿತ ಸಹಿಸಲಾಗದೆ, ಅವರನ್ನ ತುಳಿಯೋ ಕೆಲಸ ಮಾಡಲಾಗುತ್ತಿದೆ, ಎಂದು ಹೇಳಿದರು .

ಇದನ್ನೂ ಓದಿ : ಬಿಟ್ ಕಾಯಿನ್ ವಿಚಾರವಾಗಿ ಅಧಿವೇಶನದಲ್ಲೂ ಉತ್ತರ ಕೊಡುತ್ತೇವೆ: ಆರಗ ಜ್ಞಾನೇಂದ್ರ

 

Advertisement
Advertisement

Udayavani is now on Telegram. Click here to join our channel and stay updated with the latest news.

Next