Advertisement
ಸರ್ಕಾರದ ಜನಪರ ಕಾರ್ಯಗಳ ಕುರಿತಂತೆ ಮಾಧ್ಯಮಗೋಷ್ಠಿಯಲ್ಲಿ ವಿವರ ನೀಡಿದ ಸಚಿವ ಅಶೋಕ ಅವರು,”ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಕೋವಿಡ್ ವಿರುದ್ಧ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿವೆ. ರಾಜ್ಯ ಸರ್ಕಾರ ಕಳೆದ ಕೆಲವೇ ತಿಂಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿನ ಸೌಲಭ್ಯಗಳನ್ನ ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಿದ್ದು, ಶೇ.10-15ರಷ್ಟು ಹೆಚ್ಚಿಸಿದೆ. ಸಧ್ಯ 1970 ಆಕ್ಸಿಜೆನ್ ಹಾಸಿಗೆಗಳು, 1445 ಐಸಿಯೂ ಹಾಗೂ 2059 ವೆಂಟಿಲೇಟೆಡ್ ಹಾಸಿಗೆಗಳು ರೂಪಿಸಲಾಗಿದೆ ಎಂದರು
Related Articles
Advertisement
ಮೂರನೇ ಅಲೆಗೆ ಸಂಬಂಧಿಸಿದಂತೆ ಸರ್ಕಾರ ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದೆ. ಅದರಲ್ಲೂ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಹೀಗಾಗಿ ಎಲ್ಲಾ ತಾಲ್ಲೂಕುಗಳಲ್ಲಿಯೂ ಮಕ್ಕಳಿಗಾಗಿ ಆಸ್ಪತ್ರೆ ನಿರ್ಮಾಣ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಈಗಾಗಲೇ ಅವರ ಪಿಡಿ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ’, ಎಂದು ತಿಳಿಸಿದರು.
ಕೋವಿಡ್ ಪರೀಕ್ಷೆಗಳನ್ನ ಸರ್ಕಾರ ಕಡಿಮೆ ಮಾಡಿದೆ ಎಂಬ ವಿರೋಧ ಪಕ್ಷಗಳ ಟೀಕೆಗೆ ಉತ್ತರಿಸಿದ ಸಚಿವರು,”ಆ ರೀತಿಯಲ್ಲಿ ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ. ಮೊದಲೆಲ್ಲ ಸಾರ್ವಜನಿಕ ಸ್ಥಳಗಳಲ್ಲಿ, ಕಮ್ಯೂನಿಟಿಗಳಲ್ಲಿ ಪರೀಕ್ಷೆ ಮಾಡಲಾಗುತ್ತಿತ್ತು. ಲಾಕ್ ಡೌನ್ ಕಾರಣ ಈಗ ಆ ಪರೀಕ್ಷೆಗಳು ನಡೆಯುತ್ತಿಲ್ಲ. ಮೊದಲಿನಂತೆ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿರುವವರಿಗೆ, ಲಕ್ಷಣ ಉಳ್ಳವರಿಗೆ, ಗರ್ಭಿಣಿಯರಿಗೆ ಕಡ್ಡಾಯವಾಗಿ ಪರೀಕ್ಷೆ ಮಾಡಲಾಗುತ್ತಿದೆ”, ಎಂದರು.
ಇದನ್ನೂ ಓದಿ : ಕೋವಿಡ್ ಸ್ವ ಪರೀಕ್ಷೆ ಮಾಡಿಕೊಳ್ಳುವ ಕಿಟ್ ಗಳು 3-4 ದಿನಗಳಲ್ಲಿ ಲಭ್ಯ.? : ಐಸಿಎಂಆರ್
ವಿರೋಧ ಪಕ್ಷಗಳ ಆರೋಪಗಳ ಕುರಿತಂತೆ ಉತ್ತರ ನೀಡಿದ ಸಚಿವರು,”ಸರ್ಕಾರ ಕಾಲ, ಕಾಲಕ್ಕೆ ಸೂಕ್ತ ನಿರ್ಧಾರಗಳನ್ನ ತೆಗೆದುಕೊಳ್ಳುತ್ತಿದೆ. ಕೇಂದ್ರ ಸರ್ಕಾರ ಕೂಡಾ ಸಂಪೂರ್ಣವಾಗಿ ನಮ್ಮ ಬೆಂಬಲಕ್ಕಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ನಾಯಕತ್ವದಲ್ಲಿ ನಮ್ಮ ಸರ್ಕಾರ ಸಮರ್ಥವಾಗಿ ಸಂಕಷ್ಟವನ್ನ ಎದುರಿಸುತ್ತಿದ್ದೇವೆ. ಆದರೆ ವಿರೋಧ ಪಕ್ಷದವರು ರಾಜಕೀಯ ದುರುದ್ದೇಶದಿಂದ ಟೀಕೆಗಳನ್ನ ಮಾಡುತ್ತಿದ್ದಾರೆ. ಪ್ಯಾಕೇಜ್ ಘೋಷಣೆ ಮಾಡುವವರಿಗೂ ಮಾಡಿಲ್ಲ ಎಂದು ಆರ್ಭಟಿಸುತ್ತಿದ್ದರೂ. ಘೋಷಣೆ ಮಾಡಿದ ನಂತರ ಪಲಾನುಭವಿಗೆಳಿಗೆ ಈ ನೆರವು ಸಿಕ್ಕುವುದೇಯಿಲ್ಲ ಎನ್ನುತ್ತಿದ್ದಾರೆ. ಕಾರ್ಮಿಕ ಕಲ್ಯಾಣ ನಿಧಿಯಿಂದ ಹಣ ಬಳಸಿದ್ದರ ಬಗ್ಗೆ ಪ್ರಶ್ನಿಸುತ್ತಿದ್ದಾರೆ.
ಇದರಲ್ಲಿ ತಪ್ಪೇನಿದೆ. ಕಾರ್ಮಿಕರ ಹಣವನ್ನ ಕಾರ್ಮಿಕರಿಗಾಗಿ ಬಳಸುತ್ತಿದ್ದೇವೆ. ಸಿದ್ದರಾಮಯ್ಯ ಮತ್ತವರ ನಾಯಕರಿಗೆ ಇದೊಂದು ಪ್ರಶ್ನೆ ಕೇಳುತ್ತೇನೆ. ರೂ.100 ಕೋಟಿ ಹಣ ಅವರು ಸಂಗ್ರಹಿಸಿದ್ದು ಹೇಗೆ? ಅದೇನು ಕಾಂಗ್ರೆಸ್ ಪಕ್ಷದ ನಿಧಿಯೇ. ಅವರು ಕೇವಲ ಅಧಿಕಾರದ ಆಸೆಗಾಗಿ ಟೀಕೆಗಳನ್ನ ಮಾಡುತ್ತಾರೆ. ನಾವು ದೇಶ ಮತ್ತು ದೇಶವಾಸಿಗಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದೇವೆ”, ಎಂದು ತಿಳಿಸಿದರು.