ಬೆಂಗಳೂರು :
ರಾಜ್ಯದಲ್ಲಿ ಮತ್ತೆ ಮಳೆ ಅವಾಂತರ ಪ್ರಾರಂಭವಾಗಿದೆ. ಕಳೆದ 24 ಗಂಟೆಗಳಲ್ಲಿ 820 mm ಮಳೆಯಾಗಿದ್ದು ತುರ್ತು ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು,ರಾಜ್ಯದ 27 ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಿದೆ.ಜೂನ್ ತಿಂಗಳಿಂದ 187 ಹಳ್ಳಿಗಳಲ್ಲಿ ಹೆಚ್ಚಿನ ಹಾನಿಯಾಗಿದೆ.29,967 ಜನರಿಗೆ ಮಳೆಯಿಂದ ತೊಂದರೆಯಾಗಿದೆ. ಜೂನ್ ನಿಂದ ಈವರೆಗೆ 96 ಜನ ಮರಣ ಹೊಂದಿದ್ದಾರೆ. ಕಳೆದ 24 ಗಂಟೆಗಳಲ್ಲಿ ರಾಮನಗರ 2, ಬಳ್ಳಾರಿ 1 ಸಾವು ಆಗಿದೆ. ಮೂರು ಜನ ಮಿಸ್ಸಿಂಗ್ ಆಗಿದ್ದಾರೆ ಎಂದು ವಿವರಿಸಿದರು.
9950 ಜನರನ್ನು ಸ್ಥಳಾಂತರ ಮಾಡಲಾಗಿದೆ. 5 ಲಕ್ಷ 80 ಸಾವಿರ ಹೆಕ್ಟೇರ್ ಜಮೀನು ಮಳೆ ಹಾನಿಗೆ ಒಳಾಗಾಗಿದೆ. 1471 ಬ್ರಿಡ್ಜ್ ಮಳೆಗೆ ಹಾನಿಯಾಗಿವೆ. 5 NDRF ತಂಡ ನಿಯೋಜನೆ ಮಾಡಿದ್ದೇವೆ.ಮಳೆಯಿಂದ ಹಾನಿಯಾದವರಿಗೆ ಡಬಲ್ ಹಣ ನೀಡುತ್ತಿದ್ದೇವೆ.
ನಾವು ನೀಡುತ್ತಿರುವಷ್ಟು ಹಣ ಬೇರೆ ಯಾವ ರಾಜ್ಯದಲ್ಲೂ ನೀಡುತ್ತಿಲ್ಲ.ಕೇಂದ್ರದಿಂದಲೂ ಸಾಕಷ್ಟು ಅನುದಾನ ಬರುತ್ತದೆ.ಡ್ರೈ ಕಿಟ್ ಕೊಡಲು ಆದೇಶ ಮಾಡಿದ್ದೇನೆ.ಮೈಸೂರು ರಸ್ತೆಯಲ್ಲಿ ರೇಷ್ಮೆ ನೂಲು ಮಳೆಗೆ ಹಾನಿಯಾಗಿದೆ. ಇದಕ್ಕೆ ಪರಿಹಾರ ನೀಡಲು ಸಹಾ ಜಿಲ್ಲಾಧಿಕಾರಿಗೆ ಹೇಳಿದ್ದೇನೆ. ಎಷ್ಟು ಹಾನಿಯಾಗಿದೆ ಎಂದು ವರದಿ ತರಿಸಿಕೊಳ್ಳಲಾಗುವುದು ಎಂದರು.
ಹಿಂದಿನ ಮಳೆ ಬಗ್ಗೆ ಒಂದು ವರದಿ ತಯಾರಿ ಮಾಡಿದ್ದೇವೆ.ಕೆಂದ್ರದಿಂದ NDRF ರೂಲ್ಸ್ ಪ್ರಕಾರ 1012.5 ಕೋಟಿ ಬರಬೇಕಾಗಿದೆ.ಅಷ್ಟನ್ನು ಒಮ್ಮೆಲೇ ನೀಡಬೇಕೆಂದು ಕೇಂದ್ರಕ್ಕೆ ಮನವಿ ಮಾಡುತ್ತೇವೆ. ಸಿಎಂ ಅವರು ಸಹಾ ಅನುದಾನ ಹೆಚ್ಚು ಮಾಡಿದ್ದಾರೆ. ಖುದ್ದು ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ ಎಂದು ಆರ್ ಅಶೋಕ್ ಹೇಳಿದರು.