ಕೊರೊನಾದಿಂದ ಸಾವಿರಾರು ಮಂದಿ ಸಾವಿಗೀಡಾಗಿದ್ದು, ಅನೇಕರ ಮೃತದೇಹ ಗಳನ್ನು ಪಡೆಯಲು ಕುಟುಂಬಿಕರು ಮುಂದೆ ಬಂದಿರಲಿಲ್ಲ. ಹೀಗಾಗಿ ಹಿಂದೂ ಸಂಪ್ರದಾಯದಂತೆ ಶವಸಂಸ್ಕಾರದ ಬಳಿಕ ಅಸ್ಥಿಗಳನ್ನು ಸರಕಾರದ ಪರವಾಗಿ ಕಂದಾಯ ಸಚಿವ ಆರ್. ಅಶೋಕ್ ಅವರು ಕಾವೇರಿ ನದಿಯಲ್ಲಿ ವಿಧಿವತ್ತಾಗಿ ವಿಸರ್ಜನೆ ಮಾಡಿದ್ದರು.
Advertisement
ಸದ್ಗತಿಗಾಗಿ ಪೂಜೆಕೊಡಗು – ಕೇರಳ ಗಡಿಯ ಕುಟ್ಟ ಸನಿಹ ತಿರುನಲ್ಲಿ ಎಂಬಲ್ಲಿ ವಿಷ್ಣು ದೇಗುಲ ಇದೆ. ಇಲ್ಲಿ ವಿಷ್ಣು ಪಾದದಡಿ ಮೃತರ ಹೆಸರಿನಲ್ಲಿ ಬೇಡಿಕೊಂಡರೆ ಸದ್ಗತಿ ದೊರೆಯುತ್ತದೆ ಎಂಬುದು ನಂಬಿಕೆ. ಸಚಿವ ಅಶೋಕ್ ಮೃತರೆಲ್ಲರ ಆತ್ಮಗಳಿಗೆ ಸದ್ಗತಿ ಸಿಗುವಂತೆ ಇಲ್ಲಿ ಪೂಜೆ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
– ಆರ್. ಅಶೋಕ್, ಕಂದಾಯ ಸಚಿವ