Advertisement

ಪುನೀತ್‌ಗೆ ಕರ್ನಾಟಕ ರತ್ನಅದ್ಧೂರಿ ಕಾರ್ಯಕ್ರಮಕ್ಕೆ ಸಿದ್ಧತೆ : ಸಚಿವ ಆರ್‌.ಅಶೋಕ್‌

09:34 PM Oct 29, 2022 | Team Udayavani |

ಬೆಂಗಳೂರು: ವಿಧಾನಸೌಧ ಮುಂಭಾಗ ನ.1ರಂದು ನಟ ದಿವಂಗತ ಪುನೀತ್‌ರಾಜ್‌ಕುಮಾರ್‌ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ಸಿದ್ಧತೆ ಮಾಡಲು ಕಂದಾಯ ಸಚಿವ ಆರ್‌.ಅಶೋಕ್‌ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.

Advertisement

ಶನಿವಾರ ವಿಧಾನಸೌಧದಲ್ಲಿ ಸಚಿವ ಅಶೋಕ್‌ ಅವರು ಸಿದ್ಧತೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದರು.

ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪುನೀತ್‌ ರಾಜ್‌ಕುಮಾರ್‌ ಅವರು ಕರ್ನಾಟಕ ಕಂಡ ಅಪರೂಪದ ಕಲಾವಿದ. ಅವರು ನಮ್ಮನ್ನ ಅಗಲಿ ಒಂದು ವರ್ಷ ಆಗಿದೆ. ರಾಜ್ಯ ಸರ್ಕಾರ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ತೀರ್ಮಾನಿಸಿದೆ. ಸಮಾರಂಭ ಅದ್ಧೂರಿಯಾಗಿ ನಡೆಯಲಿದ್ದು ಅದಕ್ಕಾಗಿ ಮುಖ್ಯಮಂತ್ರಿಯವರು ಸಮಿತಿ ರಚಿಸಿದ್ದಾರೆ. ಮುಖ್ಯ ಅತಿಥಿಗಳಾಗಿ ರಜನಿಕಾಂತ್‌, ಜ್ಯೂನಿಯರ್‌ ಎನ್‌ಟಿಆರ್‌ ಅವರಿಗೆ ಆಹ್ವಾನ ಮಾಡಿದ್ದೇವೆ ಎಂದು ಹೇಳಿದರು.

ನವೆಂಬರ್‌ ಒಂದರಂದು ಸಂಜೆ ನಾಲ್ಕು ಗಂಟೆಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಗಾಯಕ ವಿಜಯ ಪ್ರಕಾಶ್‌ ತಂಡದವರ ಗಾಯನ ಇರಲಿದೆ. ಐದು ಸಾವಿರ ಜನಕ್ಕೆ ಪಾಸ್‌ ನೀಡಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭ ಎಲ್ಲರ ನೆನಪಿನಲ್ಲಿ ಇರುವಂತೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ : ದಲಿತ ಉದ್ದಿಮೆದಾರರಿಗೆ ಕೈಗಾರಿಕಾ ನಿವೇಶನ ಹಂಚಿಕೆ: ಕ್ರಮಕ್ಕೆ ಸಿಎಂ ಸೂಚನೆ

Advertisement

ಕಾರ್ಯಕ್ರಮಕ್ಕೆ ಎಲ್ಲ ಕ್ಷೇತ್ರಗಳ ಗಣ್ಯರನ್ನು ಆಹ್ವಾನಿಸಲಾಗುವುದು. ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಚಿವ ಸುನಿಲ್‌ ಕುಮಾರ್‌ ಸೇರಿ ಎಲ್ಲ ಮಂತ್ರಿಗಳು, ಶಾಸಕರು ಭಾಗಿಯಾಗಲಿದ್ದಾರೆ ಎಂದು ಹೇಳಿದರು.

ವಿಧಾನಸೌಧದ ಮುಂಭಾಗದಲ್ಲಿ ಕಾರ್ಯಕ್ರಮಕ್ಕೆ ಬರುವವರಿಗೆ ಅವಕಾಶವಿದೆ. ಪೊಲೀಸರ ಜತೆ ಚರ್ಚಿಸಿ ವಿಧಾನಸೌಧದ ಮುಂಭಾಗ ನಿಂತು ವೀಕ್ಷಣೆ ಮಾಡಲು ಅವಕಾಶ ನೀಡುವ ಕುರಿತು ಚರ್ಚೆ ಮಾಡಲಾಗುವುದು. ಪಾಸ್‌ ಇಲ್ಲದವರಿಗೂ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು.

ಕರ್ನಾಟಕ ರತ್ನ ಪ್ರಶಸ್ತಿ ಪೂರ್ಣ ಬೆಳ್ಳಿಯಲ್ಲಿ ಇರಲಿದೆ. 50 ಗ್ರಾಂ ಚಿನ್ನದ ಪದಕ ಕೂಡ ಇರಲಿದೆ. ಕಂಠೀರವ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಮಾಡೋ ಬಗ್ಗೆ ಚರ್ಚೆಯಾಗಿತ್ತು. ಆದರೆ ಅವರ ಸಹೋದರ ಕುಟುಂಬದ ಆಶಯದ ಮೇರೆಗೆ ವಿಧಾನಸೌಧದ ಮುಂಭಾಗದಲ್ಲಿ ಕೊಡಲಾಗುತ್ತಿದೆ. ಹಿಂದೆ ಎಲ್ಲರಿಗೂ ವಿಧಾನಸೌಧದಲ್ಲಿಯೇ ಪ್ರದಾನ ಮಾಡಲಾಗಿದೆ.
– ಆರ್‌.ಅಶೋಕ್‌ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next