Advertisement

ಕುತುಬ್ ಮಿನಾರ್ ಕುರಿತಾಗಿ ಮರುಪರಿಶೀಲನಾ ಅರ್ಜಿ: ಡಿ.12 ರಂದು ಕೋರ್ಟ್ ತೀರ್ಪು

06:07 PM Dec 02, 2022 | Team Udayavani |

ನವದೆಹಲಿ : ಇಲ್ಲಿನ ನ್ಯಾಯಾಲಯವು ಕುತುಬ್ ಮಿನಾರ್ ಕುರಿತಾಗಿ ಮಧ್ಯಸ್ಥಿಕೆ ಅರ್ಜಿಯನ್ನು ವಜಾಗೊಳಿಸಿದ ತನ್ನ ಹಿಂದಿನ ಆದೇಶದ ಮರುಪರಿಶೀಲನಾ ಅರ್ಜಿಯ ಮೇಲೆ ಡಿಸೆಂಬರ್ 12 ರಂದು ತೀರ್ಪು ನೀಡಲಿದೆ.

Advertisement

ಕುತುಬ್ ಮಿನಾರ್‌ನ ಒಳಗಿನ ಆಪಾದಿತ ದೇವಾಲಯದ ಸಂಕೀರ್ಣದಲ್ಲಿ ಹಿಂದೂ ಮತ್ತು ಜೈನ ದೇವತೆಗಳ ಪುನಃಸ್ಥಾಪನೆ ಕೋರಿ ಸಲ್ಲಿಸಲಾದ ಮೇಲ್ಮನವಿಯ ಮಧ್ಯಸ್ಥಿಕೆ ಅರ್ಜಿಯನ್ನು ನ್ಯಾಯಾಲಯವು ಸೆಪ್ಟೆಂಬರ್ 20 ರಂದು ವಜಾಗೊಳಿಸಿತ್ತು. ಅರ್ಜಿದಾರರಾದ ಕುನ್ವರ್ ಮಹೇಂದರ್ ಧ್ವಜ್ ಪ್ರತಾಪ್ ಸಿಂಗ್ ಅವರ ಮನವಿಯನ್ನು ಈ ಪ್ರಕರಣಕ್ಕೆ ಅಗತ್ಯವಾದ ಪಾರ್ಟಿ ಎಂದು ನ್ಯಾಯಾಲಯ ಹೇಳಿದೆ.

”ಪರಿಶೀಲನೆಯ ಅರ್ಜಿಯ ಮೇಲಿನ ವಾದಗಳನ್ನು ಆಲಿಸಲಾಗಿದೆ. ಡಿಸೆಂಬರ್ 12, 2022 ರಂದು ಯಾವುದಾದರೂ ಆದೇಶ, ಸ್ಪಷ್ಟೀಕರಣಕ್ಕಾಗಿ ಪಟ್ಟಿ ಮಾಡಿ,” ಎಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ದಿನೇಶ್ ಕುಮಾರ್ ಗುರುವಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.

ಮರುಪರಿಶೀಲನಾ ಅರ್ಜಿಯಲ್ಲಿ ಸಿಂಗ್ ಅವರು ‘ಯುನೈಟೆಡ್ ಪ್ರಾವಿನ್ಸ್ ಆಫ್ ಆಗ್ರಾ’ದ ಹಿಂದಿನ ಆಡಳಿತಗಾರರ ಉತ್ತರಾಧಿಕಾರಿಯಾಗಿದ್ದರು ಮತ್ತು ಕುತುಬ್ ಮಿನಾರ್‌ನ ಆಸ್ತಿ ಸೇರಿದಂತೆ ದೆಹಲಿ, ಸುತ್ತಮುತ್ತಲಿನ ಹಲವಾರು ನಗರಗಳಲ್ಲಿ ರಿಯಲ್ ಎಸ್ಟೇಟ್‌ ಮಾಲೀಕರಾಗಿದ್ದರು.

ಅರ್ಹತೆಗಳಿಲ್ಲದ ಕಾರಣಕ್ಕಾಗಿ ಅರ್ಜಿಯನ್ನು ವಜಾಗೊಳಿಸಿದ ಆದೇಶದ ವಿರುದ್ಧ, ಸಿಂಗ್ ಪರ ವಕೀಲರು ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next