Advertisement

ರೊಮೇನಿಯಾ -ಬಲ್ಗೇರಿಯನ್ನರಿಗೆ 14 ದಿನಗಳ ಕ್ವಾರಂಟೈನ್‌ ಕಡ್ಡಾಯ

02:16 PM Jul 26, 2020 | sudhir |

ರೋಮ್‌: ಈ ಹಿಂದೆ ಸೋಂಕು ಪೀಡಿತ ರಾಷ್ಟ್ರ ಬ್ರೆಜಿಲ್‌ನಿಂದ ಬರುವ ಪ್ರಯಾಣಿಕರಿಗೆ ಕ್ವಾರಂಟೈನ್‌ ನಿಯಮವನ್ನು ಕಡ್ಡಾಯಗೊಳಿಸಿದ್ದ ಇಟಲಿ ಇದೀಗ ಮತ್ತೆರೆಡು ರಾಷ್ಟ್ರಗಳಿಗೆ ವಿಸ್ತರಿಸಿದೆ.

Advertisement

ರೊಮೇನಿಯಾ, ಬಲ್ಗೇರಿಯಾ ಪ್ರದೇಶಗಳಿಂದ ಬರುವ ಅನಿವಾಸಿ ಇಟಲಿಯನ್ನರಿಗೆ ಹಾಗೂ ವಿದೇಶಿ ಪ್ರಯಾಣಿಕರಿಗೆ ಇಟಲಿ ಸರಕಾರ 14 ದಿನಗಳ ಕಠಿನ ಕ್ವಾರಂಟೈನ್‌ ವಿಧಿಸುವುದಾಗಿ ಘೋಷಿಸಿದೆ.

ಈ ಕುರಿತು ಅಧಿಕೃತ ಘೋಷಣೆ ಮಾಡಿರುವ ಇಟಲಿಯ ಆರೋಗ್ಯ ಸಚಿವ ರಾಬರ್ಟೊ ಸ್ಪೆರಾನ್ಜ್ , ಇನ್ನೂ ದೇಶ ಸಹಿತ ವಿಶ್ವದೆಲ್ಲೆಡೆ ಸೋಂಕು ಹರಡುತ್ತಲೇ ಇದ್ದು, ಕೋವಿಡ್ ವಿರುದ್ಧ ನಾವು ಸಂಪೂರ್ಣವಾಗಿ ಗೆಲವು ಸಾಧಿಸಿಲ್ಲ. ಹಾಗಾಗಿ ನಾವು ಇನ್ನೂ ಜಾಗರೂಕರಾಗಿರಬೇಕು ಎಂದಿದ್ದಾರೆ.

ಅತೀ ಹೆಚ್ಚಿನ ಸೋಂಕು ಪ್ರಕರಣಗಳು ದಾಖಲಾದ ಐರೋಪ್ಯ ದೇಶಗಳ ಪೈಕಿ ಇಟಲಿ ಕೂಡ ಒಂದಾಗಿದ್ದು, ಸೋಂಕು ನಿಯಂತ್ರಣಕ್ಕಾಗಿ ಬ್ರೆಜಿಲ್‌ ಸೇರಿದಂತೆ 16 ದೇಶಗಳಿಗೆ ಪ್ರವೇಶಿಸಲು ನಿರ್ಬಂಧ ವಿಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next