Advertisement

ಪ್ರವಾಸಿಗರಿಗೆ ಬ್ರಿಟನ್‌ ಕಡ್ಡಾಯ ಕ್ವಾರಂಟೈನ್‌ ರದ್ದು

02:52 PM Jun 28, 2020 | sudhir |

ಲಂಡನ್‌ : ಸೋಂಕು ಪ್ರಸರಣ ಮಟ್ಟ ಕಡಿಮೆ ಇರುವ ದೇಶಗಳ ಪ್ರವಾಸಿಗರಿಗೆ ಬ್ರಿಟನ್‌ ಗ್ರೀನ್‌ ಸಿಗ್ನಲ್‌ ನೀಡಿದೆ. ಜತೆಗೆ ಅವರಿಗೆ ಕಡ್ಡಾಯ ಕ್ವಾರಂಟೈನ್‌ ಅನ್ನು ರದ್ದುಗೊಳಿಸಲಾಗಿದೆ. ಕಡ್ಡಾಯ ಕ್ವಾರಂಟೈನ್‌ ನಿರ್ಧಾರದ ಬಗ್ಗೆ ಈ ಮೊದಲು ಉದ್ಯಮ ವಲಯದಿಂದ ಟೀಕೆ ಕೇಳಿ ಬಂದಿದ್ದರಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

Advertisement

ಹಾಗಾಗಿ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಸಂಬಂಧಪಟ್ಟಂತೆ ಮಾರ್ಗಸೂಚಿಗಳನ್ನು ತಿದ್ದುಪಡಿಗೊಳಿಸಲಾಗಿದೆ. ಜತೆಗೆ ಹಸಿರು, ಕೆಂಪು ಮತ್ತು ಹಳದಿ ಎಂಬ ಮೂರು ವಿಭಾಗಗಳನ್ನಾಗಿ ಮಾಡಲಾಗಿದ್ದು ಹಸಿರು ಮತ್ತು ಹಳದಿ ವಲಯಗಳಿಂದ ಬರುವ ಪ್ರಯಾಣಿಕರಿಗೆ ಕ್ವಾರಂಟೈನ್‌ ಸೇರಿದಂತೆ ಇತರೆ ಯಾವುದೇ ನಿಬಂಧನೆಗಳಿಲ್ಲ ಎಂದು ಸರಕಾರ ಘೋಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next